More

    ಇನ್ನೇನು ಸತ್ತೇ ಹೋಗಿದ್ದೆ ಎನ್ನುವಷ್ಟರಲ್ಲಿ ಬದುಕಿ ಬಂದೆ: ಕರೊನಾ ಕರಾಳತೆ ಬಿಚ್ಚಿಟ್ಟ ಭಾರತೀಯ ಮೂಲದ ಮಹಿಳೆ

    ಲಂಡನ್​: ಮಹಾಮಾರಿ ಕರೊನಾ ವೈರಸ್​ನಿಂದ ಸಾವಿನ ಕದ ತಟ್ಟಿ ವಾಪಸ್ಸು ಬಂದ ಕರಾಳ ಅನುಭವವನ್ನು ಭಾರತೀಯ ಮೂಲದ ರೈ ಲಖನಿ ಎಂಬುವರು ಮಾಧ್ಯಮಗಳ ಮುಂದೆ ಹಂಚಿಕೊಂಡಿದ್ದಾರೆ.

    ನಾನು ಇನ್ನೇನು ಸತ್ತೇ ಹೋಗಿದ್ದೆ ಎನ್ನುವಷ್ಟರಲ್ಲಿ ಬದುಕಿ ಬಂದಿದ್ದೇನೆ. ಈಗಲು ನನಗೆ ಸರಿಯಾಗಿ ಉಸಿರಾಡಲು ಸಾಧ್ಯವಾಗುತ್ತಿಲ್ಲ. ಉಸಿರಾಡುವುದು ಒಂದು ಸ್ವಾಭಾವಿಕ ಪ್ರಕ್ರಿಯೆಯಾಗಿದೆ. ಆದರೆ, ಗಾಳಿಯನ್ನು ಉಸಿರಾಡಿ, ಹೇಗೆ ಬಿಡುತ್ತಾರೆ ಎಂಬುದನ್ನು ನಾನೀಗ ನೆನಪು ಮಾಡಿಕೊಳ್ಳಬೇಕಿದೆ ಎಂದು ಲಖನಿ ಬಿಬಿಸಿ ಮಾಧ್ಯಮಕ್ಕೆ ತಿಳಿಸಿದ್ದಾರೆ.

    ಲಖನಿ ಅವರು ವಾಯುವ್ಯ ಲಂಡನ್​ನಲ್ಲಿ ವಾಸವಿದ್ದಾರೆ. ಕ್ವಾರಂಟೈನ್​ನಿಂದಿಡಿದು ಈವರೆಗೂ ನನ್ನ ಪತಿಯನ್ನು ಅಪ್ಪಿಕೊಂಡಿಲ್ಲ. ಪಾಲಕರು ಮತ್ತು ಒಡಹುಟ್ಟಿದವರನ್ನು ನೋಡಿಲ್ಲ. ಈಗಲು ರಾತ್ರಿ ನಿದ್ದೆಯಿಂದ ಏಳುವಾಗ ಉಸಿರಾಟದ ತೊಂದರೆಯಾಗುತ್ತಿದೆ ಎಂದು ಕರೊನಾದಿಂದ ಗುಣಮುಖರಾದ ನಂತರವು ಅದರ ಪರಿಣಾಮವನ್ನು ಹೇಗಿದೆ ಎಂಬುದನ್ನು ವಿವರಿಸಿದ್ದಾರೆ.

    ಲಖನಿ ಅವರು ಲಂಡನ್​ನಲ್ಲಿ ಸೇಲ್ಸ್​ ಎಕ್ಸಿಕ್ಯೂಟಿವ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.​ ಏಳು ವರ್ಷಗಳ ಹಿಂದೆ ನುಂಗಲು ಕಷ್ಟವಾಗುವಂತಹ ವಿರಳ ಕಾಯಿಲೆಯ ಚಿಕಿತ್ಸೆಗೆ ಒಳಗಾಗಿದ್ದರು. ಅಂದಿನಿಂದ ಆಸ್ಪತ್ರೆಗೆ ಭೇಟಿ ನೀಡುವುದು ಸಾಮಾನ್ಯವಾಗಿತ್ತು. ನಂತರ ದಿನಗಳಲ್ಲಿ ಅವರ ಆರೋಗ್ಯ ಸ್ಥಿತಿ ಮತ್ತಷ್ಟು ಬಿಗಡಾಯಿಸಿದಾಗ ಆಪರೇಷನ್​ಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಇತ್ತ ಕರೊನಾ ಮಹಾಮಾರಿಯು ಕೂಡ ಅಟ್ಟಹಾಸ ಮೆರೆಯುತ್ತಿದ್ದ ಸಂದರ್ಭದಲ್ಲೇ ಉಸಿರಾಟದ ತೊಂದರೆಯ ಲಕ್ಷಣ ಕಾಣಿಸಿಕೊಳ್ಳಲು ಆರಂಭವಾಯಿತು ಎನ್ನುತ್ತಾರೆ ಲಖನಿ.

    ಚಿಕಿತ್ಸೆಗೆ ಒಳಗಾಗಿದ್ದರ ಸೈಡ್​ ಎಫೆಕ್ಟ್ ಇರಬಹುದೆಂದು ಎಲ್ಲರು​ ಅಂದುಕೊಂಡಿದ್ದರು. ಆದರೆ, ನಿರ್ಲಕ್ಷಿಸುವುದು ಸರಿಯಲ್ಲ ಎಂದು ಆಸ್ಪತ್ರೆಗೆ ತೋರಿಸಿದಾಗ ಕರೊನಾ ಪಾಸಿಟಿವ್​ ವರದಿಯಾಗಿದೆ. ತಕ್ಷಣವೇ ಲಖನಿ ಅವರ ಕೋಣೆಯನ್ನು ಸೀಲ್​ ಮಾಡಿ ಆಸ್ಪತ್ರೆಗೆ ಅವರನ್ನು ಸ್ಥಳಾಂತರಿಸಲಾಯಿತು. ಕರೊನಾ ತುಂಬಾ ಪರಿಣಾಮ ಬೀರಿ ಉಸಿರಾಟದಲ್ಲಿ ವ್ಯತ್ಯಯ ಉಂಟಾದ ಕಾರಣ ಹೆಚ್ಚಿನ ಆಮ್ಲಜನಕವನ್ನು ಅವರಿಗೆ ಒದಗಿಸಿ, ಹೆಚ್ಚಿನ ಚಿಕಿತ್ಸೆಗೆ ಲಂಡನ್​ ಪ್ರಮುಖ ಕೋವಿಡ್​ 19 ಚಿಕಿತ್ಸಾ ಕೇಂದ್ರಕ್ಕೆ ಕರೆದೊಯ್ಯಲಾಯಿತು.

    ಕರೊನಾ ಸಂದರ್ಭದಲ್ಲಿ ಲಖನಿ ಅವರು ಪ್ರಮುಖವಾಗಿ ಉಸಿರಾಟದ ತೊಂದರೆಯನ್ನೇ ಅನುಭವಿಸಿದ್ದಾರೆ. ಇದು ಅತ್ಯಂತ ಕೆಟ್ಟ ಪರಿಸ್ಥಿತಿಯಾಗಿತ್ತು ಎಂದು ತಮ್ಮ ಫೇಸ್​ಬುಕ್​ನಲ್ಲಿಯು ವಿವರಿಸಿದ್ದಾರೆ. ಸದ್ಯ ಗುಣಮುಖರಾಗಿರುವ ಲಖನಿ ಅವರು ವಿಶ್ರಾಂತಿ ಪಡೆದುಕೊಳ್ಳುತ್ತಿದ್ದಾರೆ. ಆದರೂ ಉಸಿರಾಟದ ತೊಂದರೆ ತುಸು ಹಾಗೇ ಇದೆ ಎನ್ನತ್ತಾರೆ ಲಖನಿ. (ಏಜೆನ್ಸೀಸ್​)

    VIDEO: ಚಿರತೆ ಮರ ಹತ್ತುವುದು ತೀರ ಸಾಮಾನ್ಯ, ಆದರೆ ಬೇಟೆಯನ್ನು ಬಾಯಲ್ಲಿ ಕಚ್ಚಿಕೊಂಡು ಮರ ಏರುವ ಈ ದೃಶ್ಯವನ್ನು ಮಿಸ್​ ಮಾಡ್ಕೋಳ್ಬೇಡಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts