More

    VIDEO| ಕನ್ನಡಿಗನಿಂದ ಕರೊನಾಗೆ ಔಷಧಿ: ವಿಶ್ವದ ಗಮನ ಸೆಳೆದ ಸಂಶೋಧನೆ!

    ಬೆಂಗಳೂರು: ಜಾಗತಿಕವಾಗಿ ಜನರ ನೆಮ್ಮದಿಯನ್ನು ಕಿತ್ತುಕೊಂಡಿರುವ ಕರೊನಾ ವೈರಸ್​ ಹೆಮ್ಮಾರಿಯನ್ನು​ ತಡೆಗಟ್ಟಲು ಈವರೆಗೂ ಲಸಿಕೆಯನ್ನು ಕಂಡುಹಿಡಿಯಲು ಸಾಧ್ಯವಾಗಿಲ್ಲ. ಜಗತ್ತಿನಾದ್ಯಂತ ಸಾಕಷ್ಟು ಪ್ರಯತ್ನಗಳು ನಡೆಯುತ್ತಿದ್ದು, ಇದರ ನಡುವೆ ಒಂದು ಗುಡ್​ ನ್ಯೂಸ್​ ಕೇಳಿಬಂದಿದೆ.

    ಕೆನಡಾದಲ್ಲಿ ನೆಲೆಸಿರುವ ಕನ್ನಡಿಗರೊಬ್ಬರು ಮಹಾಮಾರಿ ಕರೊನಾ ತೊಲಗಿಸುವ ಔಷಧಿಯ ಭರವಸೆಯನ್ನು ನೀಡಿದ್ದಾರೆ. ವಾಟರ್​ ಲೂ ವಿಶ್ವವಿದ್ಯಾಲಯದಲ್ಲಿ ಇದಕ್ಕೆ ಸಂಬಂಧಿಸಿದ ಸಂಶೋಧನೆ ನಡೆಯುತ್ತಿದ್ದು, ಇದರ ನೇತೃತ್ವವನ್ನು ಕನ್ನಡಿಗ ಡಾ. ಪ್ರವೀಣ್ ರಾವ್​ ವಹಿಸಿದ್ದಾರೆ.

    ಇದನ್ನೂ ಓದಿ: ಅತ್ತಿಗೆ ಜತೆ ಸಂಸಾರ ನಡೆಸುತ್ತಿದ್ದವ ಅಣ್ಣನ‌ ಮಗಳ ಜತೆ ಎಸ್ಕೇಪ್…!

    ಲಸಿಕೆ ಕಂಡುಹಿಡಿಯುವ ಪ್ರಯತ್ನ ಅಂತಿಮ ಹಂತದಲ್ಲಿದೆ ಎಂಬ ಮಾಹಿತಿಯು ಲಭ್ಯವಾಗಿದ್ದು, ಕಿಲ್ಲರ್​ ಕೋವಿಡ್​-19 ತಡೆಯು ಸಾಮರ್ಥ್ಯ ಟೈಪ್​-2 ಡಯಾಬಿಟೀಸ್ ಔಷಧಿಗೆ ಇದೆ ಎಂದು ಹೇಳಲಾಗುತ್ತಿದ್ದು, ಪ್ರಯೋಗದಿಂದಲೂ ಇದು ದೃಢಪಟ್ಟಿರುವುದು ತಿಳಿದುಬಂದಿದೆ. ಪ್ರಾರಂಭಿಕ ಹಂತದಲ್ಲೇ ಈ ಸಂಶೋಧನೆ ವಿಶ್ವದ ಗಮನ ಸೆಳೆದಿದ್ದು, ಪ್ರವೀಣ್​ ರಾವ್​ ನೇತೃತ್ವದಲ್ಲಿ ಸಂಶೋಧನೆ ಮುಂದುವರಿದಿದೆ.

    ಅಂದಹಾಗೆ ಪ್ರವೀಣ್​ ರಾವ್​ ಉಡುಪಿ ಮೂಲದವರಾಗಿದ್ದು, ಮಣಿಪಾಲದ ಫಾರ್ಮಸಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ. ಪದವಿ ಮುಗಿಸಿ ಕೆನಡಾದಲ್ಲಿ ಪಿಎಚ್​ಡಿ ಪದವಿ ಮುಗಿಸಿದ್ದಾರೆ. ಸದ್ಯ ಕೆನಡಾದ ವಾಟರ್​ ಲೂ ಯೂನಿವರ್ಸಿಟಿಯ ಸ್ಕೂಲ್ ಆಫ್​ ಫಾರ್ಮಸಿಯಲ್ಲಿ ಪ್ರಾಧ್ಯಾಪಕರಾಗಿದ್ದಾರೆ.

    ಇದನ್ನೂ ಓದಿ: ಕುಟುಂಬದಿಂದ ದೂರಾದ ಕಿನ್ನರಿ!

    ಲ್ಯಾಬ್​ನ ಮೂಲ ಸಂಶೋಧನೆ ಬಗ್ಗೆ ದಿಗ್ವಿಜಯ ನ್ಯೂಸ್​ಗೆ ತಿಳಿಸಿರುವ ಪ್ರವೀಣ್​ ರಾವ್​, ಮಾರ್ಚ್​ನಿಂದ ಲ್ಯಾಬ್​ನಲ್ಲಿ ಕೋವಿಡ್​-19 ಸಂಶೋಧನೆ ನಡೆಸುತ್ತಿದ್ದೇವೆ. ಇದರ ನಡುವೆ ಜರ್ಮನಿಯ ವಿಜ್ಞಾನಿಗಳು ಕರೊನಾದ ಮುಖ್ಯವಾದ ಪ್ರೋಟೀನ್​ ರಚನೆಯನ್ನು ಕಂಡುಹಿಡಿದರು. ಒಂದು ಬಾರಿ ಕರೊನಾ ಮಾನವನ ದೇಹದ ಒಳಗೆ ಹೋದರೆ, ವೈರಸ್​ ದ್ವಿಗುಣಗೊಳ್ಳಲು ಪ್ರೋಟೀನ್​ ಸಹಾಯ ಮಾಡುತ್ತದೆ. ಹೀಗಾಗಿ ಕೋವಿಡ್​ ಪ್ರೋಟೀನ್​ ಕ್ರಿಯೆಯನ್ನು ಔಷಧಿ ಮೂಲಕ ತಡೆದರೆ, ರೋಗವನ್ನು ತಡೆಯುವ ಸಾಧ್ಯತೆ ಇದೆ. ಹೀಗಾಗಿ ಇದರ ಬಗ್ಗೆ ಸಂಶೋಧನೆ ನಡೆಸಲು ಆರಂಭಿಸಿದೆವು ಎಂದರು.

    ಇದನ್ನೂ ಓದಿ: ದೋಸೆ ತವಾದಿಂದ ಹೊಡೆದು ಪ್ರಿಯತಮೆಯನ್ನು ಕೊಂದು ಪೊಲೀಸರಿಗೆ ಶರಣಾದ ಪ್ರಿಯಕರ

    ಮಾರುಕಟ್ಟೆಗೆ ಹೊಸ ಔಷಧ ತರಲು 10 ರಿಂದ 15 ವರ್ಷವಾಗುತ್ತದೆ. ಅಲ್ಲದೆ, ತುಂಬಾ ಖರ್ಚು ಸಹ ಆಗುತ್ತದೆ. ಈಗಾಗಲೇ ಜಗತ್ತಿನಲ್ಲಿ 5 ಸಾವಿರಕ್ಕೂ ಹೆಚ್ಚು ಔಷಧಗಳು ಲಭ್ಯವಿದೆ. ನಾವು ಎಲ್ಲ ಮದ್ದುಗಳ ಬಗ್ಗೆ ಸಂಶೋಧನೆ ಮಾಡಿದೆವು. ಈ ವೇಳೆ ಟೈಪ್​-2 ಎಂಬ ಡಯಾಬಿಟೀಸ್​ ರೋಗ ಗಮನಕ್ಕೆ ಬಂತು. ಈ ರೋಗಕ್ಕೆ ಬೇರೆ ಬೇರೆ ತರಹದ ಮದ್ದುಗಳಿವೆ. ಇದರ ಬಗ್ಗೆ ಸಂಶೋಧನೆ ಮಾಡುವಾಗ ಡಿಪಿಪಿ-4 ಇನ್ಹಿಬಿಟರ್ಸ್​ ​ (DPP-4 Inhibitors) ಎಂಬ ಒಂದು ವರ್ಗದ ಔಷಧ ಗಮನಕ್ಕೆ ಬಂತು. ಇವುಗಳ ಕೆಮಿಕಲ್​ ರಚನೆ ನೋಡುವಾಗ ಅವುಗಳಿಗೆ ಕೋವಿಡ್​-19 ಪ್ರೋಟೀನ್​ ಅನ್ನು ತಡೆಹಿಡಿಯುವ ಸಾಮರ್ಥ್ಯವಿದೆ ಎಂಬುದು ತಿಳಿಯಿತು ಎಂದು ವಿವರಿಸಿದ್ದಾರೆ.

    ಇದನ್ನೂ ಓದಿ: ಹೀಗೂ ಆಗುವುದುಂಟು: ವಾಯುವಿಹಾರಕ್ಕೆ ಹೋದಾಗ ಲಕ್ಷಾಧಿಪತಿ, ಕಸದೊಂದಿಗೆ ಬಂದಾಗ ಕೋಟ್ಯಧಿಪತಿ..!

    ಸದ್ಯ ಪ್ರಾಥಮಿಕ ಸಂಶೋಧನೆಯಲ್ಲಿದ್ದೇವೆ. ಈ ಬಗ್ಗೆ ತುಂಬಾ ಲ್ಯಾಬ್​ ವರ್ಕ್​ ಮಾಡಬೇಕಿದೆ. ಮುಂದಿನ ಹಂತದಲ್ಲಿ ಕೋವಿಡ್​ ಇರುವ ಸೆಲ್​ ಲೈನ್​ ಉಪಯೋಗಿಸಿ, ಅದಕ್ಕೆ ಟೈಪ್​-2 ಡಯಾಬಿಟೀಸ್​ ನೀಡುವ ಮದ್ದನ್ನು ಬಳಸಿ ಇದಕ್ಕೆ ಕರೊನಾ ತಡೆಯುವ ಶಕ್ತಿ ಇದೆಯೇ ಎಂಬುದನ್ನು ನೋಡುತ್ತೇವೆ. ಬಳಿಕ ಔಷಧವನ್ನು ಪ್ರಾಣಿಗಳ ಮೇಲೆ ಪ್ರಯೋಗ ಮಾಡಿ ಖಚಿತಪಡಿಸಿಕೊಂಡು ಮಾನವನ ಉಪಯೋಗಕ್ಕೆ ನೀಡುವ ಪ್ರಯತ್ನ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ. (ದಿಗ್ವಿಜಯ ನ್ಯೂಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts