More

    ಮಹಾಮಾರಿ ಕರೊನಾ ವೈರಸ್​ ಹರಡುವಿಕೆ ಬಗ್ಗೆ ಸ್ಪೋಟಕ ಮಾಹಿತಿ ಬಿಚ್ಚಿಟ್ಟ ನೂತನ ಸಂಶೋಧನೆ!

    ವುಹಾನ್​: ಈ ಹಿಂದೆ ಅಂದುಕೊಂಡಿದ್ದಕ್ಕಿಂತ ಎರಡು ಪಟ್ಟು ವೇಗವಾಗಿ ಕರೊನಾ ವೈರಸ್​ ಹರಡುತ್ತದೆ ಎಂದು ಹೊಸ ಸಂಶೋಧನೆಯೊಂದು ತಿಳಿಸಿದೆ.

    ನ್ಯೂಮೆಕ್ಸಿಕೋದ ಲಾಸ್​ ಆಲ್ಮೋಸ್​ ರಾಷ್ಟ್ರೀಯ ಪ್ರಯೋಗಶಾಲೆಯ ವಿಜ್ಞಾನಿಗಳ ಪ್ರಕಾರ ಓರ್ವ ಸೋಂಕಿತ ಸರಾಸರಿ 5.7 ಜನರಿಗೆ ವುಹಾನ್​ನಲ್ಲಿ ಸೋಂಕು ತಗುಲಿಸಿದ್ದಾನೆಂದು ತಿಳಿಸಿದ್ದಾರೆ. ಆರಂಭದಲ್ಲಿ ಒಬ್ಬ ವ್ಯಕ್ತಿ ಸರಾಸರಿ 2.2 ರಿಂದ 2.7 ಮಂದಿಗೆ ಸೋಂಕು ತಗುಲಿಸುತ್ತಾನೆ ಎಂದು ಅಂದಾಜಿಸಲಾಗಿತ್ತು.

    ಈಗಾಗಲೇ ರೋಗದಿಂದ ಚೇತರಿಸಿಕೊಂಡಿರುವರು ವೈರಸ್​ ಹರಡುವುದನ್ನು ತಡೆಯಲು ಶೇ. 82 ರಷ್ಟು ಜನರು ರೋಗನಿರೋಧಕತೆಯನ್ನು ಹೊಂದಿರಬೇಕೆಂದು ಅಧ್ಯಯನವು ಹೇಳಿದೆ. ವೈರಸ್​ನಿಂದ ಗುಣಮುಖರಾಗಲು ಸದ್ಯ ಲಸಿಕೆ ಕಂಡುಹಿಡಿಯದೇ ಇರುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದೇ ಸರಿಯಾದ ಮಾರ್ಗವೆಂಬುದು ತಜ್ಞರ ಅಭಿಪ್ರಾಯವಾಗಿದೆ.

    ಕರೊನಾ ವೈರಸ್​ ಒಬ್ಬರಿಂದ ಇನ್ನೊಬ್ಬರಿಗೆ ಹರಡುವುದರ ನಡುವೆಯೇ ಇನ್ನಿಬ್ಬರನ್ನು ಸೋಂಕಿತರನ್ನಾಗಿ ಮಾಡುತ್ತದೆ. ಇದಕ್ಕೆ 6 ರಿಂದ 7 ದಿನಗಳು ತೆಗೆದುಕೊಳ್ಳುತ್ತದೆ ಎಂದು ಆರಂಭದಲ್ಲಿ ವೈರಸ್​ ದ್ವಿಗುಣಗೊಳ್ಳುವಿಕೆಯ ದರವನ್ನು ನಿರ್ಧರಿಸಲಾಗಿತ್ತು. ಆದರೆ, ಅಮೆರಿಕದ ಸಂಶೋಧನಾ ತಂಡದ ಪ್ರಕಾರ ಸರಾಸರಿ 2.3 ರಿಂದ 3.3 ದಿನಗಳಲ್ಲಿಯೇ ವೈರಸ್​ ದ್ವಿಗುಣಗೊಳ್ಳುತ್ತದೆ. ವೈರಸ್​ ಸ್ಪೋಟ ಕೇಂದ್ರ ವುಹಾನ್​ನಲ್ಲಿ ವೈರಸ್​ ವೇಗವಾಗಿ ಹರಡಿರುವ ಸೂಚನೆ ಸಿಕ್ಕಿದೆ ಎಂದು ಅಧ್ಯಯನದಲ್ಲಿ ತಿಳದುಬಂದಿದೆ.

    ಚೀನಾದ ವುಹಾನ್​ನಲ್ಲಿ 2019ರ ಡಿಸೆಂಬರ್​ನಲ್ಲಿ ಸ್ಪೋಟಗೊಂಡ ವೈರಸ್​ ​ತನ್ನ ಕಬಂಧಬಾಹುವನ್ನು ಜಾಗತಿಕವಾಗಿ ವಿಸ್ತರಿಸಿದೆ. ಈವರೆಗೆ ಒಂದು ಲಕ್ಷಕ್ಕೂ ಅಧಿಕ ಮಂದಿಯನ್ನು ಬಲಿಪಡೆದುಕೊಂಡಿದೆ. 10 ಲಕ್ಷಕ್ಕೂ ಹೆಚ್ಚು ಮಂದಿ ಇನ್ನೂ ಕರೊನಾ ಸೋಂಕಿಗೆ ಗುರಿಯಾಗಿದ್ದು, ಈ ಕ್ಷಣಕ್ಕೂ ಕರೊನಾ ಭೀತಿ ಹಾಗೇ ಇದೆ. (ಏಜೆನ್ಸೀಸ್​)

    ದೆಹಲಿಯಲ್ಲಿ ಲಘು ಭೂಕಂಪ, ಪೂರ್ವ ದೆಹಲಿಯಲ್ಲಿ ಕಂಪನ ಕೇಂದ್ರೀಕೃತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts