ದೆಹಲಿಯಲ್ಲಿ ಲಘು ಭೂಕಂಪ, ಪೂರ್ವ ದೆಹಲಿಯಲ್ಲಿ ಕಂಪನ ಕೇಂದ್ರೀಕೃತ

ನವದೆಹಲಿ: ಒಂದೆಡೆ ಭಾರತ ಕರೊನಾ ಪಿಡುಗಿನ ವಿರುದ್ಧ ಹೋರಾಡುತ್ತಿರುವಾಗಲೇ ರಾಷ್ಟ್ರ ರಾಜಧಾನಿ ದೆಹಲಿ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ಭಾನುವಾರ ಸಂಜೆ 5.45ರಲ್ಲಿ ಲಘು ಭೂಕಂಪ ಸಂಭವಿಸಿದೆ. ರಿಕ್ಟರ್​ ಮಾಪದಲ್ಲಿ 3.5ರ ತೀವ್ರತೆ ದಾಖಲಾಗಿದೆ. ಭೂಕಂಪದಿಂದ ಹಾನಿಯಾಗಿರುವ ಬಗ್ಗೆ ಯಾವುದೇ ವರದಿಗಳು ಬಂದಿಲ್ಲ. ಭೂಮಿ ನಡಗುತ್ತಿರುವಂತೆ ಲಾಕ್​ಡೌನ್​ನಿಂದಾಗಿ ಮನೆಯಲ್ಲೇ ಇದ್ದ ಜನರು ಭಯಭೀತರಾಗಿ ಹೊರಗೋಡಿ ಬಂದರು ಎನ್ನಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ. ಭೂಮಿ ಕೆಲವು ಸೆಕೆಂಡ್​ಗಳವರೆಗೆ ನಡುಗಿತು ಎನ್ನಲಾಗಿದೆ. ಜೋರಾದ ಸದ್ದು ಕೇಳಿತು. ನಾನು ಕುಳಿತಿದ್ದ ಕುರ್ಚಿ ಅಲ್ಲಾಡಲಾರಂಭಿಸಿತು. … Continue reading ದೆಹಲಿಯಲ್ಲಿ ಲಘು ಭೂಕಂಪ, ಪೂರ್ವ ದೆಹಲಿಯಲ್ಲಿ ಕಂಪನ ಕೇಂದ್ರೀಕೃತ