More

    ದುಬೈನಿಂದ ಕರೆತಂದ ಕನ್ನಡಿಗರಲ್ಲಿ 6 ಮಂದಿಗೆ ಕರೊನಾ ಸೋಂಕು: ಆರೋಗ್ಯ ಸಚಿವ ಶ್ರೀರಾಮುಲು ಮಾಹಿತಿ

    ಬೆಂಗಳೂರು: ದುಬೈನಲ್ಲಿದ್ದ 195 ಕನ್ನಡಿಗರಲ್ಲಿ 6 ಮಂದಿಗೆ ಕರೊನಾ ವೈರಸ್​ ಲಕ್ಷಣಗಳು ಕಂಡುಬಂದಿರುವುದಾಗಿ ಆರೋಗ್ಯ ಸಚಿವ ಶ್ರೀರಾಮುಲು ಅವರು ಭಾನುವಾರ ಟ್ವೀಟ್​ ಮೂಲಕ ತಿಳಿಸಿದ್ದಾರೆ.

    ಇಂದು ದುಬೈನಲ್ಲಿದ್ದ 195 ಕನ್ನಡಿಗರನ್ನು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕರೆತರಲಾಗಿದೆ. ಇವರಲ್ಲಿ 6 ಜನರಿಗೆ ಕೋವಿಡ್​-19 ಲಕ್ಷಣಗಳಿದ್ದರಿಂದ, ಅವರನ್ನು ಬೆಂಗಳೂರಿನ ರಾಜೀವ್ ಗಾಂಧಿ ಎದೆ ರೋಗಗಳ ಸಂಸ್ಥೆಯ ಪ್ರತ್ಯೇಕಿಸಲ್ಪಟ್ಟ ಕೇಂದ್ರದಲ್ಲಿ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ ಎಂದು ತಿಳಿಸಿದ್ದಾರೆ.

    ಮತ್ತೊಂದು ಟ್ವೀಟ್​ನಲ್ಲಿ ಉಳಿದ ಪ್ರಯಾಣಿಕರನ್ನು ಬೆಂಗಳೂರಿನ ಆಕಾಶ್ ವೈದ್ಯಕೀಯ ಸಂಸ್ಥೆಯ ಪ್ರತ್ಯೇಕಿಸಲ್ಪಟ್ಟ ವಾರ್ಡಿನಲ್ಲಿ ಸೇರಿಸಿ ನಿಗಾವಹಿಸಲಾಗಿದೆ ಎಂದು ಶ್ರೀರಾಮುಲು ಅವರು ಮಾಹಿತಿ ನೀಡಿದ್ದಾರೆ.

    ದೇಶದಲ್ಲಿ ಈವರೆಗೆ 300ಕ್ಕೂ ಅಧಿಕ ಮಂದಿಗೆ ಕರೊನಾ ಸೋಂಕು ತಗುಲಿದ್ದು, ಓರ್ವ ಇಟಲಿ ಪ್ರಜೆ ಸೇರಿ ಒಟ್ಟು 7 ಮಂದಿ ಬಲಿಯಾಗಿದ್ದಾರೆ. ರಾಜ್ಯದಲ್ಲಿ 20ಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ.

    PHOTOS| ಕರೊನಾ ಸೋಂಕು ತಗುಲದಂತೆ ಏನು ಮಾಡಬೇಕು? ಮಾಡಬಾರದು?: ಉಪಯುಕ್ತ ಮಾಹಿತಿ ಫೋಟೋಗಳಲ್ಲಿ…

    ಕರೊನಾ ವೈರಸ್ ಲಕ್ಷಣಗಳು 14 ದಿನಗಳಲ್ಲೇ ಕಾಣಿಸಿಕೊಳ್ಳಬೇಕೆಂದೇನೂ ಇಲ್ಲ..17 ದಿನಗಳ ಬಳಿಕವೂ ಪತ್ತೆಯಾಗಬಹುದು..ಎಚ್ಚರ ಇರಲಿ…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts