More

    ಗುಣಮುಖರಾದವರಲ್ಲಿ ಮತ್ತೆ ಸೋಂಕು: ತಲೆನೋವು ತಂದ ಕರೊನಾ ವೈರಸ್​ ಹೊಸ ವರಸೆ

    ಸಿಂಗಾಪುರ್​: ದಕ್ಷಿಣ ಕೊರಿಯಾದ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರ (ಸಿಡಿಸಿ)ದ ಪ್ರಕಾರ ಗುಣಮುಖರಾದ ವ್ಯಕ್ತಿಗಳಲ್ಲಿ ಮಹಾಮಾರಿ ಕರೊನಾ ವೈರಸ್​ ಪ್ರತಿಕ್ರಿಯಾತ್ಮಕವಾಗಿರಲಿದೆ.

    ಕರೊನಾದಿಂದ ಗುಣಮುಖರಾದ ದಕ್ಷಿಣ ಕೊರಿಯಾದ ಸುಮಾರು 51 ರೋಗಿಗಳನ್ನು ಮರುಪರೀಕ್ಷಿಸಿದಾಗ ಕರೊನಾ ಪಾಸಿಟಿವ್​ ಫಲಿತಾಂಶ ವರದಿಯಾಗಿದೆ ಎಂದು ಸಿಡಿಸಿ ಸೋಮವಾರ ತಿಳಿಸಿದೆ.

    ಗುಣಮುಖರಾದವರಲ್ಲಿ ಮತ್ತೊಮ್ಮೆ ಸೋಂಕು ತಗುಲುವುದಕ್ಕಿಂತಲೂ ಕರೊನಾ ವೈರಸ್​ ಪ್ರತಿಕ್ರಿಯಾತ್ಮವಾಗಿರುತ್ತದೆ. ಕ್ವಾರಂಟೈನ್​ನಿಂದ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಮರು ಪರೀಕ್ಷೆ ನಡೆಸಿದಾಗ ಮತ್ತೊಮ್ಮೆ ಕರೊನಾ ಪಾಸಿಟಿವ್​ ವರದಿಯಾಗಿದೆ ಎಂದು ಸಿಡಿಸಿ ಪ್ರಧಾನ ಕಾರ್ಯದರ್ಶಿ ಜಿಯಾಂಗ್ ಯುನ್ ಕಿಯೊಂಗ್ ತಿಳಿಸಿದ್ದಾರೆ.

    ಪ್ರತಿಕ್ರಿಯಾತ್ಮಕ ವೈರಾಣು ಯಾವ ಪರಿಣಾಮ ಬೀರಲಿದೆ ಎಂಬುದರ ಬಗ್ಗೆ ಸಮಗ್ರ ಅಧ್ಯಯನವನ್ನು ನಡೆಸುತ್ತಿದ್ದೇವೆ. ಹಲವು ಪ್ರಕರಣಗಳಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುವಾಗ ನೆಗಿಟಿವ್​ ಫಲಿತಾಂಶ ಬಂದಿದೆ. ಅದಾದ ಕೆಲವು ದಿನಗಳಲ್ಲಿ ಪಾಸಿಟಿವ್​ ವರದಿಯಾಗಿದೆ. ಓರ್ವ ರೋಗಿ ಮಾತ್ರ ಸಂಪೂರ್ಣ ಗುಣಮುಖರಾಗಿದ್ದು, 24 ಗಂಟೆಗಳಲ್ಲಿ ಎರಡು ಬಾರಿ ನಡೆಸಿದ ಪರೀಕ್ಷೆಯಲ್ಲಿ ನಗೆಟಿವ್​ ವರದಿಯಾಗಿದೆ. ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಿಡಿಸಿ ಸಾಂಕ್ರಮಿಕ ರೋಗ ತನಿಖೆಯನ್ನು ನಡೆಸಲಿದೆ ಎಂದು ಕಿಯೊಂಗ್ ವಿವರಣೆ ನೀಡಿದ್ದಾರೆ.

    ಆರಂಭದಲ್ಲಿ ಕರೊನಾ ವೈರಸ್​ ದಾಳಿಗೆ ಸಿಲುಕಿದ ರಾಷ್ಟ್ರಗಳಲ್ಲಿ ದಕ್ಷಿಣ ಕೊರಿಯಾವು ಒಂದಾಗಿದೆ. ಹೀಗಿದ್ದರೂ ಇತರೆ ರಾಷ್ಟ್ರಗಳಿಗೆ ಹೋಲಿಸದರೆ ಮರಣ ಪ್ರಮಾಣ ಕಡಿಮೆಯಿದ್ದು, 200 ಪ್ರಕರಣಗಳು ಮಾತ್ರ ವರದಿಯಾಗಿದೆ. ಇನ್ನು ಸೋಂಕಿತರ ಸಂಖ್ಯೆಯಲ್ಲಿ ಭಾರಿ ಪ್ರಮಾಣದ ಇಳಿಕೆ ಕಂಡುಬಂದಿದೆ.

    ಸದ್ಯ ಕೊರಿಯಾದಲ್ಲಿ ಒಟ್ಟು 10,384 ಸೋಂಕಿತ ಪ್ರಕರಣಗಳಿದ್ದು, ಅದರಲ್ಲಿ ಅರ್ಧಕ್ಕಿಂತ ಹೆಚ್ಚೆಂದರೆ 6776 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದಾರೆ. ಇದೀಗ ಗುಣಮುಖರಾದವರಲ್ಲೂ ಕರೊನಾ ಸೋಂಕು ಮತ್ತೆ ಗೋಚರಿಸುತ್ತಿರುವುದು ಆತಂಕಕ್ಕೆ ದೂಡಿದೆ. (ಏಜೆನ್ಸೀಸ್​)

    ಕರೊನಾ ಸಂದರ್ಭದಲ್ಲಿ ತಮಿಳುನಾಡಿನ ಕಿತಾಪತಿ, ರಾಜ್ಯದ ಗಡಿಯೊಳಗೆ ನಾಕಾಬಂದಿ; ತೆರವುಗೊಳಿಸಿದ ಗೃಹ ಸಚಿವ ಬೊಮ್ಮಾಯಿ

    ಕೋವಿಡ್​ 19 ಸಂಕಷ್ಟದಲ್ಲಿ ಗ್ರಾಹಕರು, ಸಮುದಾಯದ ನೆರವಿಗೆ ಮುಂದಾದ ಫೋರ್ಡ್​ ಕಂಪನಿ, ಉಚಿತವಾಗಿ 3 ತಿಂಗಳ ವಾರಂಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts