More

    ಕೋವಿಡ್​ 19 ಸಂಕಷ್ಟದಲ್ಲಿ ಗ್ರಾಹಕರು, ಸಮುದಾಯದ ನೆರವಿಗೆ ಮುಂದಾದ ಫೋರ್ಡ್​ ಕಂಪನಿ, ಉಚಿತವಾಗಿ 3 ತಿಂಗಳ ವಾರಂಟಿ

    ಬೆಂಗಳೂರು: ರಾಷ್ಟ್ರದೆಲ್ಲೆಡೆ ಕೋವಿಡ್​ 19 ಪಿಡುಗು ಮುಂದುವರಿದಿರುವಂತೆ, ಬಹುತೇಕ ಕಾರು ತಯಾರಿಕಾ ಕಂಪನಿಗಳು ತಮ್ಮದೇ ಆದ ರೀತಿಯಲ್ಲಿ ಗ್ರಾಹಕರು ಮತ್ತು ಸಮುದಾಯದ ಸಹಾಯಕ್ಕೆ ಮುಂದಾಗುತ್ತಿವೆ. ಅದರಂತೆ ಫೋರ್ಡ್​ ಇಂಡಿಯಾ ಕೂಡ ತನ್ನ ಗ್ರಾಹಕರು ಮತ್ತು ಸಮುದಾಯದ ಹಿತಕ್ಷಣೆಗೆ ಮುಂದಾಗುತ್ತಿದೆ.

    ಈ ವಿಷಯ ತಿಳಿಸಿರುವ ಕಂಪನಿಯ ಮಾರ್ಕೆಟಿಂಗ್​, ಸೇಲ್ಸ್​ ಮತ್ತು ಸರ್ವಿಸ್​ ವಿಭಾಗದ ಕಾರ್ಯಕಾರಿ ನಿರ್ದೇಶಕ ವಿನಯ್​ ರೈನಾ, ಕಂಪನಿಯು ತನ್ನ ಸಿಬ್ಬಂದಿ ವರ್ಗದ, ಗ್ರಾಹಕರ ಮತ್ತು ಸಮುದಾಯದ ಹಿತರಕ್ಷಣೆಗೆ ಆಧ್ಯತೆ ಮೇರೆಗೆ ಕೆಲಸ ಮಾಡುತ್ತಿದೆ. ನಮ್ಮ ಇತಿಮಿತಿಯಲ್ಲಿ ಕೋವಿಡ್​ 19 ವಿರುದ್ಧದ ಹೋರಾಟಕ್ಕೆ ನಮ್ಮದೇ ಆದ ರೀತಿಯ ಕೊಡುಗೆ ನೀಡುತ್ತಿದ್ದೇವೆ ಎಂದು ಹೇಳಿದ್ದಾರೆ.
    ಕರೊನಾ ಪಿಡುಗಿನಿಂದ ಲಾಕ್​ಡೌನ್​ ಘೋಷಣೆಯಾಗುವ ಮೊದಲು ಕಾರನ್ನು ಬುಕ್​ ಮಾಡಿದ್ದು, ಡೆಲಿವರಿ ಪಡೆಯಬೇಕಿದ್ದ ಗ್ರಾಹಕರಿಗೆ ಮತ್ತು ಏಪ್ರಿಲ್​ 30ರವರೆಗೆ ಹೊಸದಾಗಿ ಬುಕ್​ ಮಾಡುವ ಗ್ರಾಹಕರಿಗೆ ಸರ್ವಿಸ್​ ಮತ್ತು ವಾರಂಟಿ ಅವಧಿಯನ್ನು ಉಚಿತವಾಗಿ ವಿಸ್ತರಿಸಲು ಕಂಪನಿ ನಿರ್ಧರಿಸಿದೆ ಎಂದು ತಿಳಿಸಿದ್ದಾರೆ.

    2020ರ ಮಾರ್ಚ್​ 15ರಿಂದ ಮೇ​ 30ರ ನಡುವೆ ವಾರಂಟಿ ಕೊನೆಗೊಳ್ಳುವ ಗ್ರಾಹಕರಿಗೂ ವಾರಂಟಿ ಅವಧಿಯನ್ನು ವಾರಂಟಿ ಅವಧಿಯನ್ನು 2020ರ ಜೂನ್​ 30ರವರೆಗೆ ವಿಸ್ತರಿಸಲಾಗುತ್ತಿದೆ. ಈ ಅವಧಿಯಲ್ಲಿ ಹೆಚ್ಚುವರಿ ವಾರಂಟಿ ಉತ್ಪನ್ನಗಳನ್ನು ಖರೀದಿಸಲು ಬಯಸುವ ಗ್ರಾಹಕರು ತಮ್ಮ ಖರೀದಿಯನ್ನು ಮುಂದುವರಿಸಬಹುದಾಗಿದೆ ಎಂದು ಹೇಳಿದ್ದಾರೆ.

    ಉಚಿತ ಸರ್ವಿಸ್​ ಸೇರಿ ನಿಗದಿತ ಸರ್ವಿಸ್​ಗಳನ್ನು ಪಡೆದುಕೊಳ್ಳುವ ಅವಧಿಯನ್ನು ಮೂರು ತಿಂಗಳಿಗೆ ವಿಸ್ತರಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

    ಕೋವಿಡ್​ ಪಿಡುಗಿನ ಹಿನ್ನೆಲೆಯಲ್ಲಿ ತುರ್ತು ಕರೆಗಳಿಗೆ ತಕ್ಷಣವೇ ಸ್ಪಂದಿಸುವುದು ಅಗತ್ಯವಾಗಿರುವ ಹಿನ್ನೆಲೆಯಲ್ಲಿ, ಫೋರ್ಡ್​ ಇಂಡಿಯಾ ಉಚಿತವಾಗಿ ರಸ್ತೆ ಬದಿ ಸೇವೆಯನ್ನು (ರೋಡ್​ ಸೈಡ್​ ಅಸಿಸ್ಟೆನ್ಸ್​) ಒದಗಿಸಲಿದೆ. ರಸ್ತೆ ಬದಿ ಸೇವೆಗೆ ನೋಂದಾಯಿಸಿಕೊಳ್ಳದಿರುವ ಗ್ರಾಹಕರು ಸೇರಿ ಫೋರ್ಡ್​ನ ಎಲ್ಲ ಗ್ರಾಹಕರಿಗೆ ಈ ಸೌಲಭ್ಯ ದೊರೆಯಲಿದೆ. ಇದಕ್ಕಾಗಿ ಗ್ರಾಹಕರು ಶುಲ್ಕರಹಿತ ಸಂಖ್ಯೆ: 1800 103 7400 ಅನ್ನು ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.

    ಲಾಕ್​ಡೌನ್​ ಹೊರತಾಗಿಯೂ ಭಾರತದ ಅತಿಶ್ರೀಮಂತರ ಪೈಕಿ ಒಬ್ಬರ ನಿವ್ವಳ ಮೌಲ್ಯ ಹೆಚ್ಚಾಗಿದೆ, ಅವರು ಯಾರು ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts