More

    ಹಸಿವಿಗಿಂತಲೂ ಕರೊನಾ ಉತ್ತಮ: ಕಾರ್ಮಿಕರಲ್ಲಿ ಶುರುವಾಯ್ತು ಮತ್ತೊಂದು ಭಯ…!

    ಲಖನೌ: ಕರೊನಾ ವೈರಸ್​ ಆರ್ಭಟದಿಂದಾಗಿ ಭಾರತದ ಆರ್ಥಿಕತೆ ಕುಸಿದಿದ್ದು, ಲಾಕ್​ಡೌನ್​ ಸಡಿಲಿಕೆಯಿಂದ ಆರ್ಥಿಕತೆ ಚೇತರಿಕೆ ಕಾಣುತ್ತಿರುವ ನಡುವೆ ಕೋವಿಡ್​-19 ಪ್ರಕರಣಗಳ ಹೆಚ್ಚಳ ಆತಂಕಕ್ಕೆ ದೂಡಿದೆ. ಲಾಕ್​ಡೌನ್​ ಸಮಯದಲ್ಲಿ ತಮ್ಮ ರಾಜ್ಯಕ್ಕೆ ಮರಳಿದ್ದ ಸುಮಾರು 30 ಲಕ್ಷಕ್ಕೂ ಹೆಚ್ಚು ಕಾರ್ಮಿಕರು ಕರೊನಾ ಭೀತಿಯ ನಡುವೆಯೂ ಒಂದು ದೃಢನಿರ್ಧಾರಕ್ಕೆ ಬಂದಿದ್ದಾರೆ.

    ಮರಳಿ ಕೆಲಸಕ್ಕೆ ತೆರಳಲು ಕಾರ್ಮಿಕರು ಮುಂದಾಗಿದ್ದು, ಹಸಿವಿಗಿಂತ ಕರೊನಾವೇ ಉತ್ತಮ ಎಂಬ ದೃಢಸಂಕಲ್ಪ ಮಾಡಿದ್ದು, ತಮ್ಮ ತಮ್ಮ ಕೆಲಸದ ಸ್ಥಳಗಳತ್ತ ಉತ್ತರ ಪ್ರದೇಶ ಕಾರ್ಮಿಕರು ಮುಖ ಮಾಡಿದ್ದಾರೆ.

    ಇದನ್ನೂ ಓದಿ: VIDEO| ಪೈಲಟ್​​ ಗಂಡನ ಕಿರುಕುಳಕ್ಕೆ ಬೇಸತ್ತು ಟೆಕ್ಕಿ ಆತ್ಮಹತ್ಯೆ: ಬೆಚ್ಚಿಬೀಳಿಸುವಂತಿದೆ ಸಿಸಿಟಿವಿ ದೃಶ್ಯ

    ಮುಂಬೈನ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಅನ್ಸಾರಿ ಎಂಬಾತ ಲಾಕ್​ಡೌನ್​ನಿಂದ ಒಂದು ತಿಂಗಳ ಹಿಂದೆಯೇ ತವರಿಗೆ ಮರಳಿದ್ದರು. ಇದೀಗ ತಮ್ಮ ನೋವನ್ನು ತೋಡಿಕೊಂಡಿದ್ದು, ಉತ್ತರ ಪ್ರದೇಶದಲ್ಲೇ ಕೆಲಸ ಸಿಕ್ಕರೇ ಮತ್ತೆ ಮುಂಬೈಗೆ ಹೋಗುವುದಿಲ್ಲ. ನಾನು ಕೆಲಸ ಮಾಡುತ್ತಿದ್ದ ಕಂಪನಿ ಇನ್ನು ಆರಂಭವಾಗಿಲ್ಲ. ಆದರೆ, ನಾನು ತವರಿಗೆ ಮರಳಿ ಯಾವ ಕೆಲಸ ಮಾಡಲು ಸಾಧ್ಯವೋ ಎಲ್ಲವನ್ನು ಮಾಡಿದೆ. ಹಸಿವಿಗಿಂತ ಕರೊನಾವೇ ಉತ್ತಮ ಎಂಬ ಅನ್ಸಾರಿ ಮಾತು ಕೇಳುವವರ ಕಣ್ಣಲ್ಲಿ ಒಮ್ಮೆ ನೀರು ತರಿಸದೇ ಇರದು. ನನ್ನ ಮಕ್ಕಳು ಕರೊನಾ ವೈರಸ್‌ನಿಂದ ಸಾಯುವುದಕ್ಕಿಂತ ನಾನು ಸಾಯುವುದು ಉತ್ತಮ ಎಂದು, ಕೆಲಸಕ್ಕೆ ತೆರಳುವ ಮುನ್ನ ಅನ್ಸಾರಿ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿದರು.

    ಕೊಲ್ಕತಾ ಮೂಲದ ಸಂಸ್ಥೆಯೊಂದರಲ್ಲಿ ತಂತ್ರಜ್ಞನಾಗಿರುವ ಪ್ರಸಾದ್​ ಎಂಬುವರು ಹೋಳಿ ಹಬ್ಬಕ್ಕೆಂದು ಊರಿಗೆ ಬಂದಿದ್ದರು. ಆದರೆ, ಉತ್ತರ ಪ್ರದೇಶದಲ್ಲಿ ಹೇರಲಾದ ಲಾಕ್​ಡೌನ್​ನಿಂದಾಗಿ ಮತ್ತೆ ಕೆಲಸಕ್ಕೆ ಮರಳಲು ಸಾಧ್ಯವಾಗಿರಲಿಲ್ಲ. ಇದೀಗ ಕಂಪನಿ ಪುನರಾರಂಭವಾಗಿರುವ ಹಿನ್ನೆಲೆಯಲ್ಲಿ ತಮ್ಮ ಕುಟುಂಬದ ನೆರವಿಗಾಗಿ ಮತ್ತೆ ಕೊಲ್ಕತಾಗೆ ತೆರಳಲು ಸಿದ್ಧರಾಗಿದ್ದಾರೆ. ನಾನು ಹೆದರಿದ್ದೇನೆ. ಆದರೂ ಜೀವನವನ್ನು ನೆನಪಿಸಿಕೊಂಡರೆ ಭಯವಾಗುತ್ತದೆ. ನನ್ನ ಕುಟುಂಬಕ್ಕೆ ನಾನು ಹೇಗೆ ಪೋಷಿಸಲಿ ಎಂಬುದನ್ನು ನೆನಪಿಸಿಕೊಂಡರೆ ಭಯವಾಗುತ್ತದೆ ಎಂದು ಹೇಳಿದದ್ದಾರೆ.

    ಇದನ್ನೂ ಓದಿ: ಯುವತಿಯನ್ನು ನಂಬಿಸಿ ದ್ರೋಹವೆಸಗಿದ ಪೊಲೀಸ್​ ಕಾನ್ಸ್​ಟೇಬಲ್ ಬಂಧನ​

    ಕರೊನಾ ಸಾಂಕ್ರಾಮಿಕದಿಂದ ತಿಂಗಳುಗಳ ಕಾಲ ಆದಾಯವಿಲ್ಲದೇ ಮನೆಯಲ್ಲೇ ಉಳಿದ್ದಿದ್ದ ಕೆಲಸಗಾರರಲ್ಲಿ, ಇದೀಗ ಕರೊನಾ ಭೀತಿಗಿಂತ ಜೀವನದ ಭಯವೇ ಆವರಿಸಿದೆ. ಕರೊನಾ ಯಾವಾಗ ಕಡಿಮೆಯಾಗುತ್ತದೋ ಗೊತ್ತಿಲ್ಲ. ಕೆಲಸ ಮಾಡದೆ ಸುಮ್ಮನಿದ್ದರೇ ಹಸಿವಿನಿಂದ ಸಾಯುತ್ತೇವೆ. ಹೀಗಾಗಿ ಹಸಿವಿಗಿಂತ ಕರೊನಾವೇ ಉತ್ತಮ ಎಂಬ ನಿರ್ಧಾರಕ್ಕೆ ಬಂದಿರುವ ವಲಸೆ ಕಾರ್ಮಿಕರು ಮತ್ತೆ ಕೆಲಸದತ್ತ ಮುಖ ಮಾಡಿದ್ದಾರೆ. (ಏಜೆನ್ಸೀಸ್​)

    ಕೈಕಾಲುಗಳಿಲ್ಲದೇ ಹೆಣ್ಣು ಮಗುವಿನ ಜನನ: ತಾಯಿ, ವೈದ್ಯರಿಗೆ ಕಾದಿತ್ತು ಮತ್ತೊಂದು ಅಚ್ಚರಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts