More

    ರಾಜ್ಯಾದ್ಯಂತ ಲಕ್ಷ ಆಪ್ತರಕ್ಷಕರು ಕರೊನಾ ವಿರುದ್ಧದ ಸಮರದಲ್ಲಿ ಭಾಗಿ!: ಸೋಂಕಿತರ ಆರೈಕೆಗಾಗಿ ಊಟ, ತಿಂಡಿ, ನಿದ್ರೆ ತ್ಯಾಗ |

    ಬೆಂಗಳೂರು: ಮಾರಕ ಕರೊನಾ ಸೋಂಕನ್ನು ಮಟ್ಟಹಾಕಲು ಪಣತೊಟ್ಟಿರುವ 1 ಲಕ್ಷಕ್ಕೂ ಅಧಿಕ ಆಪ್ತರಕ್ಷಕರು ಕರ್ನಾಟಕದಲ್ಲಿ ಊಟ, ನಿದ್ರೆ ಬಿಟ್ಟು ಹಗಲು ರಾತ್ರಿ ದುಡಿಯುತ್ತಿದ್ದಾರೆ. ವೈದ್ಯಕೀಯ ಸಿಬ್ಬಂದಿ, ಸರ್ಕಾರಿ ಅಧಿಕಾರಿ/ಸಿಬ್ಬಂದಿ, ಆಶಾ ಕಾರ್ಯಕರ್ತೆಯರ ಈ ಶ್ರಮದಾನದಿಂದ ಅದೆಷ್ಟೋ ಜೀವಗಳು ಬದುಕುಳಿದು ನೂರಾರು ಮನೆಗಳಲ್ಲೂ ದೀಪ ಬೆಳಗುತ್ತಿದೆ! ವೈದ್ಯರು, ನರ್ಸ್​ಗಳು, ಆಸ್ಪತ್ರೆ ಸಿಬ್ಬಂದಿ, ಆರೋಗ್ಯ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿ ಜತೆಗೆ ಬಿಎಂಟಿಸಿ ಚಾಲಕರು, ಕಂಡಕ್ಟರ್​ಗಳು, ಆರ್​ಟಿಒ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಸೋಂಕಿತರನ್ನು ಕರೆದೊಯ್ಯುವ ಆಂಬುಲೆನ್ಸ್ ಚಾಲಕರು, ಖಾಸಗಿ ವಾಹನ ಚಾಲಕರು ಕೂಡ ಕರೊನಾ ವಿರುದ್ಧದ ನಿರ್ಣಾಯಕ ಯುದ್ಧದಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಶ್ರಮಿಸುತ್ತಿದ್ದಾರೆ.

    ಬದುಕಿನ ಆಶಾ ಕಿರಣ: ನಾಗರಿಕರ ಆರೋಗ್ಯ ಕಾಪಾಡಲು ಸರ್ಕಾರ ಕೈಗೊಳ್ಳುವ ಮುಂಜಾಗೃತ ಕ್ರಮಗಳು ಮತ್ತು ಸೂಚನೆ, ಮಾರ್ಗಸೂಚಿ, ಸೌಲಭ್ಯಗಳನ್ನು ಜನರಿಗೆ ತಲುಪಿಸುವಲ್ಲಿ ಆಶಾ ಕಾರ್ಯಕರ್ತೆಯರ ಪಾತ್ರ ನಿರ್ಣಾಯಕ. ಆಶಾ ಪಡೆ, ಮನೆ ಮನೆಗೆ ಹೋಗಿ ಕೆಮ್ಮು, ನೆಗಡಿ, ಜ್ವರ ಇರುವವರ ಪಟ್ಟಿ ಮತ್ತು ಅವರ ಟ್ರಾವೆಲ್ಸ್ ಹಿಸ್ಟರಿ ಸಂಗ್ರಹಿಸಿ ಸಮುದಾಯ ಆಸ್ಪತ್ರೆಗೆ ಪ್ರಥಮ ವರದಿ ನೀಡುತ್ತಿದೆ. ಈ ಮೂಲಕ ಬೇರುಮಟ್ಟದಲ್ಲಿಯೇ ಸೋಂಕು ಹರಡದಂತೆ ತಡೆವ ಕಾರ್ಯದಲ್ಲಿ ನಿರತವಾಗಿವೆ.

    ಆರೋಗ್ಯ ಇಲಾಖೆ

    ದಿನೇದಿನೆ ತನ್ನ ವ್ಯಾಪ್ತಿಯಲ್ಲಿ ಹೆಚ್ಚುತ್ತಿರುವ ಕರೊನಾ ಸೋಂಕು ತಡೆಯಲು ಆರೋಗ್ಯ ಇಲಾಖೆ ಅಧಿಕಾರಿ, ಸಿಬ್ಬಂದಿ ಹಗಲುರಾತ್ರಿ ದುಡಿಯುತ್ತಿದ್ದಾರೆ. ರೋಗಿಗಳಿಗೆ ಚಿಕಿತ್ಸೆ ನೀಡಲು ವೈದ್ಯರಿಗೆ ಬೇಕಾದ ಔಷಧ, ಆಸ್ಪತ್ರೆಗಳು, ವೆಂಟಿಲೇಟರ್ ಸೇರಿ ಮೂಲ ಸೌಕರ್ಯ ಕೊಡಿಸುವಲ್ಲಿ ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಕರೊನಾ ಸೋಂಕು ತಡೆಯಲು ಹಳ್ಳಿಗಾಡಿಗೂ ತೆರಳಿ ಜಾಗೃತಿ ಮೂಡಿಸುತ್ತಿದ್ದಾರೆ. ಇನ್ನಿತರ ರೋಗಿಗಳ ಚಿಕಿತ್ಸೆಗೆ ತೊಂದರೆ ಆಗದಂತೆ ಎಚ್ಚರಿಕೆ ವಹಿಸಿ ಸಮತೋಲನ ಕಾಪಾಡುವಲ್ಲಿ ಸರ್ಕಾರದ ಆಡಳಿತದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.

    ಕೈ ಜೋಡಿಸಿದ ಇಲಾಖೆಗಳು

    ಆರೋಗ್ಯ ಮತ್ತು ಕುಟುಂಬ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆ, ಗೃಹ, ಕುಟುಂಬ ಮತ್ತು ಮಕ್ಕಳ ಕಲ್ಯಾಣ, ಕೃಷಿ, ಗ್ರಾಮೀಣಾ ಅಭಿವೃದ್ಧಿ, ನಗರ ಅಭಿವೃದ್ಧಿ ಇಲಾಖೆ, ಪೌರಾಡಳಿತ ಇಲಾಖೆ, ಸಾರಿಗೆ ಇಲಾಖೆ ಮತ್ತು ಹಣಕಾಸು ಇಲಾಖೆ ಅಧಿಕಾರಿ, ಸಿಬ್ಬಂದಿ ಕೂಡ ಕರೊನಾ ವಿರುದ್ಧದ ಹೋರಾಟದಲ್ಲಿ ಕೈ ಜೋಡಿಸಿದ್ದಾರೆ.

    ಕರೊನಾ ಎದುರಿಸಲು ಸಿದ್ಧತೆ?

    ಸೋಂಕಿತರು, ಶಂಕಿತರ ಚಿಕಿತ್ಸೆಗೆ ಬೆಂಗಳೂರು ಸೇರಿ ರಾಜ್ಯದಲ್ಲಿ 5000 ಹಾಸಿಗೆ ಕಾಯ್ದಿರಿಸಲಾಗಿದೆ

    ಸದ್ಯ 700 ವೆಂಟಿಲೇಟರ್​ಗಳಿವೆ. 1000 ವೆಂಟಿಲೇಟರ್​ಗಳ ಖರೀದಿ ಪ್ರಕ್ರಿಯೆ ಚಾಲ್ತಿಯಲ್ಲಿದೆ

    ಸೋಂಕಿತರ ಪೈಕಿ ಶೇ.4ರಿಂದ 5 ರೋಗಿಗಳಿಗಷ್ಟೇ ವೆಂಟಿಲೇಟರ್ ಬಳಸುವ ಅಗತ್ಯತೆ ಇದೆ

    ಬೆಂಗಳೂರು, ಮೈಸೂರು, ಶಿವಮೊಗ್ಗ, ಹಾಸನದಲ್ಲಿ ಈಗಾಗಲೇ ಪ್ರಯೋಗಾಲಯ ಸ್ಥಾಪನೆಯಾಗಿವೆ.

    ಸೋಂಕು ತಪಾಸಣೆಗೆ ಬೆಂಗಳೂರಲ್ಲಿ 31 ಸೇರಿ ಎಲ್ಲ ಜಿಲ್ಲೆಗಳಲ್ಲಿ ಫೀವರ್ ಕ್ಲಿನಿಕ್​ಗಳ ಸ್ಥಾಪನೆ

    ಸಾರ್ವಜನಿಕರ ದೂರು ಆಧರಿಸಿ ಶಂಕಿತರನ್ನು ಕ್ವಾರಂಟೈನ್​ನಲ್ಲಿಡಲು ಪ್ರತ್ಯೇಕ ವಿಚಕ್ಷಣ ದಳ

    ಖಾಸಗಿ ಪ್ರಯೋಗಾಲಯಗಳಲ್ಲೂ ಪರೀಕ್ಷೆಗೊಳಪಡಲು ಅವಕಾಶವಿದೆ

    ಸೋಂಕಿತರ ಪರೀಕ್ಷೆ, ಉಪಕರಣಗಳ ಖರೀದಿಗೆ ಡಿಸ್ಟಿ್ರ್ ಮಿನರಲ್ ಫೌಂಡೇಷನ್ (ಡಿಎಂಎಫ್) ಅನುದಾನ ಬಳಕೆಗೆ ಅನುಮತಿ

    ವೈದ್ಯಕೀಯ ಸಿಬ್ಬಂದಿ ಸೇವೆ ಶ್ಲಾಘನೀಯ

    ಕರೊನಾ ಪೀಡಿತರನ್ನು ಆರೈಕೆ ಮಾಡುವಾಗ ಸ್ವಲ್ಪ ಯಾಮಾರಿದರೂ ವೈದ್ಯರು, ನರ್ಸ್​ಗಳೇ ರೋಗಿಗಳಾಗುವ ಅಪಾಯ ಇದೆ. ಈ ಸವಾಲಿನ ಜತೆಗೆ ತಮ್ಮ ಕುಟುಂಬಕ್ಕೂ ಅಪಾಯ ಎದುರಾಗುವ ಆತಂಕದಲ್ಲೇ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೆಲ ವೈದ್ಯರು, ನರ್ಸ್​ಗಳು ಕುಟುಂಬದಿಂದ ದೂರವಿದ್ದು ಸ್ವಯಂ ದಿಗ್ಬಂಧನ ವಿಧಿಸಿಕೊಂಡು ಸೇವೆ ಸಲ್ಲಿಸುತ್ತಿದ್ದಾರೆ. ಮನೆಯಲ್ಲೇ ಕ್ವಾರಂಟೈನ್​ನಲ್ಲಿರುವ ಅನೇಕ ಶಂಕಿತರ ಶುಶ್ರೂಷೆಗೆ ಹೋದಾಗ ಸರಿಯಾದ ಸುರಕ್ಷಿತ ಸಲಕರಣೆ ಇರುವುದಿಲ್ಲ. ಇಂಥ ಆತಂಕಗಳ ನಡುವೆಯೇ ವೈದ್ಯರು ಪ್ರಶಂಸಾರ್ಹ ರೀತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

    ಕೆಎಸ್​ಆರ್​ಟಿಸಿ, ಬಿಎಂಟಿಸಿಯೂ ಭಾಗಿ

    ಬಿಎಂಟಿಸಿ ಮತ್ತು ಕರ್ನಾಟಕ ರಸ್ತೆ ಸಾರಿಗೆ ಇಲಾಖೆಯ ನಾಲ್ಕು ವಲಯ ಸೇರಿ ಒಟ್ಟಾರೆ 4 ಸಾವಿರ ಚಾಲಕ, ಕಂಡಕ್ಟರ್ ಮತ್ತು ಕಚೇರಿ ಸಿಬ್ಬಂದಿ ಪೂರಕ ಸೇವೆಯಲ್ಲಿ ತೊಡಗಿದ್ದಾರೆ.

    339 ಅರಣ್ಯ ರಕ್ಷಕ ಹುದ್ದೆಗಳಿಗೆ ಮೇ 15ರವರೆಗೂ ಅರ್ಜಿ ಸಲ್ಲಿಕೆಗೆ ಅವಕಾಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts