More

    ಮಕ್ಕಳಿಗೆ ಕರೊನಾ ಲಸಿಕೆ : ‘ಮುಗಿಯುವ ಹಂತದಲ್ಲಿ ಕ್ಲಿನಿಕಲ್ ಟ್ರಯಲ್ಸ್​’

    ನವದೆಹಲಿ : ಹದಿನೆಂಟು ವರ್ಷದ ಒಳಗಿನ ಮಕ್ಕಳ ಮೇಲೆ ನಡೆಯುತ್ತಿರುವ ಕರೊನಾ ಲಸಿಕೆಯ ಕ್ಲಿನಿಕಲ್​ ಟ್ರಯಲ್​ಗಳು ಇನ್ನೇನು ಮುಗಿಯುವ ಹಂತದಲ್ಲಿದೆ. ಮಕ್ಕಳಿಗೆ ಲಸಿಕೆ ನೀಡುವ ಬಗ್ಗೆ ಸರ್ಕಾರವು ನೀತಿ ರಚಿಸಲಿದ್ದು, ತಜ್ಞರು ಅನುಮತಿ ನೀಡಿದಾಗ ಮಕ್ಕಳಿಗೆ ಲಸಿಕೆ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿದೆ.

    ದೆಹಲಿ ಹೈಕೋರ್ಟ್​ನಲ್ಲಿ ಅಪ್ರಾಪ್ತ ವಯಸ್ಕನ ಪರವಾಗಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದರ ವಿಚಾರಣೆಯ ವೇಳೆ, ಇಂದು(ಜುಲೈ 16) ಸರ್ಕಾರದ ಪರ ಈ ಹೇಳಿಕೆ ನೀಡಲಾಯಿತು ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ಕರೊನಾ ಮೂರನೇ ಅಲೆಯಲ್ಲಿ ಮಕ್ಕಳಿಗೆ ಅಪಾಯವಿರುವ ಭಯದ ಹಿನ್ನೆಲೆಯಲ್ಲಿ 12 ರಿಂದ 17 ವರ್ಷದ ವಯೋಮಾನದವರಿಗೆ ತಕ್ಷಣ ಕರೊನಾ ಲಸಿಕಾಕರಣಕ್ಕೆ ಆದೇಶಿಸಬೇಕೆಂದು ಅರ್ಜಿದಾರರು ಕೋರಿದ್ದಾರೆ.

    ಇದನ್ನೂ ಓದಿ: ಕುಂಟುತ್ತಿದೆ ಲಸಿಕಾ ಅಭಿಯಾನ ; ವಿದ್ಯಾರ್ಥಿಗಳಿಗೆ ಆದ್ಯತೆ ಮೇಲೆ ಸಿಗದ ವ್ಯಾಕ್ಸಿನ್

    ಮುಖ್ಯ ನ್ಯಾಯಮೂರ್ತಿ ಡಿ.ಎನ್​.ಪಟೇಲ್ ಮತ್ತು ನ್ಯಾಯಮೂರ್ತಿ ಜ್ಯೋತಿ ಸಿಂಗ್ ಅವರ ವಿಭಾಗೀಯ ಪೀಠವು, “ಟ್ರಯಲ್ಸ್​ ನಡೆಯಲಿ ಬಿಡಿ. ಏಕೆಂದರೆ ಟ್ರಯಲ್​ಗಳಿಲ್ಲದೆ ಮಕ್ಕಳಿಗೆ ಲಸಿಕೆಗಳನ್ನು ನೀಡುವುದು ದುರಂತವಾದೀತು” ಎಂದು ಅಭಿಪ್ರಾಯಪಟ್ಟಿತು. “ಟ್ರಯಲ್ಸ್​ ಮುಗಿದ ಕೂಡಲೇ, ತ್ವರಿತವಾಗಿ ಮಕ್ಕಳಿಗೆ (ಲಸಿಕೆ) ನೀಡಿ. ಇಡೀ ದೇಶ ಕಾಯುತ್ತಿದೆ” ಎಂದು ಸರ್ಕಾರಕ್ಕೆ ಹೇಳಿತು. (ಏಜೆನ್ಸೀಸ್)

    ಜೆಇಇ 4ನೇ ಹಂತದ ಪರೀಕ್ಷೆ ಮುಂದೂಡಿಕೆ; ಜುಲೈ 20 ರವರೆಗೆ ನೋಂದಣಿ ಅವಕಾಶ

    ಚಿತ್ರ ನಿರ್ಮಾಪಕನ​ ವಿರುದ್ಧ ರೇಪ್ ಕೇಸ್; ಕೆಲಸ ನೀಡುವುದಾಗಿ ಹೇಳಿ ವಂಚಿಸಿದ ಆರೋಪ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts