More

    ಮಕ್ಕಳಿಗೆ ಕರೊನಾ ಚಿಕಿತ್ಸೆ : ರೆಮ್​ಡೆಸಿವಿರ್ ಬೇಡ, ಸ್ಟಿರಾಯ್ಡ್ ಬಳಕೆಯಲ್ಲಿ ಇರಲಿ ಎಚ್ಚರ

    ನವದೆಹಲಿ : ಮಕ್ಕಳಲ್ಲಿ ಕೋವಿಡ್​19 ಸೋಂಕು ಕಾಣಿಸಿಕೊಂಡಾಗ ಪಾಲಿಸಬೇಕಾದ ಚಿಕಿತ್ಸಾ ಕ್ರಮದ ಬಗ್ಗೆ ಕೇಂದ್ರ ಸರ್ಕಾರ ಸಮಗ್ರ ಮಾರ್ಗಸೂಚಿಗಳನ್ನು ಜಾರಿಗೊಳಿಸಿದೆ. ಆರೋಗ್ಯ ಸಚಿವಾಲಯದ ಡೈರೆಕ್ಟೊರೇಟ್​ ಜನರಲ್ ಆಫ್ ಹೆಲ್ತ್​ ಸರ್ವೀಸಸ್(ಡಿಜಿಎಚ್​​ಎಸ್) ಹೊರಡಿಸಿರುವ ಈ ಮಾರ್ಗಸೂಚಿಗಳಲ್ಲಿ ಕರೊನಾ ಸೋಂಕಿತ ಮಕ್ಕಳಿಗೆ ರೆಮ್​ಡೆಸಿವಿರ್​ ಆ್ಯಂಟಿವೈರಲ್​ ಔಷಧಿ ಬಳಕೆ ಬೇಡ ಎಂದಿದ್ದು, ಸ್ಟೀರಾಯ್ಡ್​ ಬಳಕೆ ಮತ್ತು ಸಿಟಿ ಸ್ಕ್ಯಾನ್​ಗಳ ಬಗ್ಗೆಯೂ ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ.

    ಆಸ್ಪತ್ರೆಯಲ್ಲಿ ದಾಖಲಾಗಿರುವ ತೀವ್ರ ಮತ್ತು ಗಂಭೀರ ಸೋಂಕಿನ ಪ್ರಕರಣಗಳಲ್ಲಿ ಮಾತ್ರ ಸ್ಟಿರಾಯ್ಡ್​ಅನ್ನು ಬಿಗಿ ಮೇಲ್ವಿಚಾರಣೆಯಲ್ಲಿ ಬಳಸಬೇಕು ಎಂದು ಡಿಜಿಎಚ್​ಎಸ್​ ಶಿಫಾರಸ್ಸು ಮಾಡಿದೆ. “ಸ್ಟಿರಾಯ್ಡ್​ಗಳನ್ನು ಸರಿಯಾದ ಸಮಯದಲ್ಲಿ, ಸರಿಯಾದ ಡೋಸ್​ನಲ್ಲಿ ಮತ್ತು ಸರಿಯಾದ ಅವಧಿಗೆ ಬಳಸಬೇಕು. ವೈದ್ಯರ ಸಲಹೆಯಿಲ್ಲದೆ ಸ್ಟಿರಾಯ್ಡ್​ ಬಳಸಬಾರದು” ಎಂದಿದೆ.

    ಇದನ್ನೂ ಓದಿ: ಮಕ್ಕಳ ಮೇಲೆ ಕೋವಾಕ್ಸಿನ್ ಟ್ರಯಲ್ಸ್​ಗೆ ದೆಹಲಿ ಏಮ್ಸ್​ ಸಜ್ಜು

    ಕರೊನಾ ಸೋಂಕಿತರಲ್ಲಿ ವೈರಲ್​ ಲೋಡ್​ಅನ್ನು ಕಡಿಮೆ ಮಾಡಲು ಬಳಸುವ ರೆಮ್​ಡೆಸಿವಿರ್ ಚುಚ್ಚುಮದ್ದನ್ನು ಮಕ್ಕಳಿಗೆ ಶಿಫಾರಸು ಮಾಡಿಲ್ಲ. “18 ವರ್ಷದೊಳಗಿನವರಲ್ಲಿ ರೆಮ್​ಡೆಸಿವಿರ್​ ಬಳಕೆಗೆ ಸುರಕ್ಷತೆ ಮತ್ತು ಪರಿಣಾಮಕಾರಿತ್ವದ ಬಗ್ಗೆ ಸಾಕಷ್ಟು ಮಾಹಿತಿ ಇಲ್ಲ” ಎನ್ನಲಾಗಿದೆ.

    ಶ್ವಾಸಕೋಶಕ್ಕೆ ಎಷ್ಟು ಪ್ರಮಾಣದಲ್ಲಿ ಸೋಂಕು ಹರಡಿದೆ ಎಂದು ಪರೀಕ್ಷಿಸಲು ಬಳಸುವ ಹೈರೆಸಲ್ಯೂಷನ್ ಸಿಟಿ (ಎಚ್​ಆರ್​ಸಿಟಿ)ಯನ್ನು ತೀರಾ ಅಗತ್ಯವಿದ್ದರೆ ಮಾತ್ರ ಆರ್ಡರ್​ ಮಾಡಬೇಕು. ಮೆದುಪ್ರಮಾಣದ ಮತ್ತು ಏಸಿಮ್ಟಮ್ಯಾಟಿಕ್ ಪ್ರಕರಣಗಳಲ್ಲಿ ಆ್ಯಂಟಿಮೈಕ್ರೋಬಿಯಲ್​ಗಳ ಬಳಕೆ ಸೂಕ್ತವಲ್ಲ; ಅದೇ ಮಧ್ಯಮ ಮತ್ತು ತೀವ್ರ ಪ್ರಕರಣಗಳಲ್ಲಿ ಹೆಚ್ಚುವರಿ ಸೋಂಕು ಕಂಡುಬಂದಾಗ ಮಾತ್ರ ಬಳಸಬೇಕು ಎನ್ನಲಾಗಿದೆ. (ಏಜೆನ್ಸೀಸ್)

    ಜನರಿಗೆ ಮತ್ತೊಂದು ಶಾಕ್​ : ಪ್ರತಿ ಯುನಿಟ್​​ಗೆ 30 ಪೈಸೆ ವಿದ್ಯುತ್ ದರ ಏರಿಕೆ

    ಕರೊನಾ ನಿಯಮ ಉಲ್ಲಂಘಿಸಿ ಬರ್ತ್​ಡೇ! ಪೊಲೀಸ್ ಅಧಿಕಾರಿ ಸಸ್ಪೆಂಡ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts