ಕರೊನಾ ನಿಯಮ ಉಲ್ಲಂಘಿಸಿ ಬರ್ತ್​ಡೇ! ಪೊಲೀಸ್ ಅಧಿಕಾರಿ ಸಸ್ಪೆಂಡ್​!

policesuspend
Published on

ಬೆಂಗಳೂರು : ಕೋವಿಡ್​ ನಿಯಮಗಳನ್ನು ಪಾಲಿಸುವಂತೆ ಎಚ್ಚರ ವಹಿಸುವುದು, ಜನರಲ್ಲಿ ಶಿಸ್ತು ಮೂಡಿಸುವುದು ಪೊಲೀಸರ ಕೆಲಸ. ಅದರ ಬದಲು ತಾವೇ ಕೋವಿಡ್​ ನಿಯಮ ಗಾಳಿಗೆ ತೂರಿ ಮೋಜು ಮಾಡಿದರೆ ಏನೆನ್ನಬೇಕು? ಅಂತಹುದೇ ಕೃತ್ಯವನ್ನೆಸಗಿದ ಪೊಲೀಸ್​ ಇನ್ಸ್​ಪೆಕ್ಟರ್ ಒಬ್ಬರಿಗೆ ಇದೀಗ ಸಸ್ಪೆನ್ಷನ್ ಆರ್ಡರ್​ ಸಿಕ್ಕಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲಿ ಪಿಎಸ್ಐ ಆಗಿದ್ದ ರಾಜು ಅವರು, ಇತ್ತೀಚೆಗಷ್ಟೆ ಇನ್ಸ್​ಪೆಕ್ಟರ್ ಆಗಿ ಮುಂಬಡ್ತಿ ಪಡೆದುಕೊಂಡಿದ್ದರು. ಆದರೆ ಹೊಸಕೋಟೆ ಪೊಲೀಸ್ ಠಾಣೆಯಿಂದ ರಿಲೀವ್ ಆಗೋಕೂ ಮುನ್ನ ಅಬ್ಬರದಿಂದ ತಮ್ಮ ಬರ್ತ್​ಡೆ ಸೆಲೆಬ್ರೇಟ್ ಮಾಡಿಕೊಂಡರು. ಕೋವಿಡ್ ನಿಯಮ ಉಲ್ಲಂಘಿಸಿ ಠಾಣೆಯಲ್ಲೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದ ರಾಜು ಅವರ ವರ್ತನೆ ಕುರಿತು ದಿಗ್ವಿಜಯ ನ್ಯೂಸ್ ಚಾನೆಲ್​ ಸುದ್ದಿ ಬಿತ್ತರಿಸಿತ್ತು. ರಾಜು ಸೇರಿದಂತೆ 11 ಜನರ ಮೇಲೆ ಪ್ರಕರಣ ದಾಖಲಾಗಿತ್ತು.

ಹೀಗೆ ರಾಜು ಅವರ ಬರ್ತಡೆ ಸೆಲೆಬ್ರೇಷನ್ನಿನ ಫೋಟೊ, ವಿಡಿಯೋ ಎಲ್ಲೆಡೆ ವೈರಲ್ ಆದ ನಂತರ, ಹಿರಿಯ ಅಧಿಕಾರಿಗಳು ವರದಿ ತರಿಸಿಕೊಂಡಿದ್ದರು. ಇದೀಗ ಕರೊನಾ ನಿಯಮ ಪಾಲನೆ ಮಾಡದೆ ಕೇಸು ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಇಂದು ಇನ್ಸ್​ಪೆಕ್ಟರ್ ರಾಜು ಅವರನ್ನು ಸಸ್ಪೆಂಡ್ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net