More

    ಬೆಂಗಳೂರಿನಲ್ಲಿ ಆಸ್ಪತ್ರೆಗಳಿಗೆ ಅಲೆದಾಡಿದ ಕರೊನಾ ಶಂಕಿತ, ಸೋಂಕು ದೃಢವಾದರೆ ಕಾದಿದೆ ಅಪಾಯ

    ಬೆಂಗಳೂರು: ಆಸ್ಪತ್ರೆ ಎದುರು ವ್ಯಕ್ತಿಯೊಬ್ಬ ಬಿದ್ದ ನರಳಾಡುತ್ತಿದ್ದ… ಆಸ್ಪತ್ರೆ ಸಿಬ್ಬಂದಿ ಕೂಡ ನೀನ್ಯಾರು ಅಂತ ಅವನನ್ನು ಕೇಳಲಿಲ್ಲ. ಹೀಗಾಗಿ ಆತನ ನರಳಾಟ ಮುಂದುವರಿದೇ ಇತ್ತು. ಕರೋನಾ ರೋಗಿ ಆಸ್ಪತ್ರೆ ಎದುರು ಕೆಲ ಹೊತ್ತಿನಲ್ಲಿ ನರಳುತ್ತಿದ್ದಾನೆ ಎನ್ನುವ ವಿಡಿಯೋ ವೈರಲ್ ಆಯ್ತು.

    ಈ ಘಟನೆಗೆ ಸಾಕ್ಷಿಯಾಗಿದ್ದು, ಬೆಂಗಳೂರಿನ ಲಗ್ಗೆರೆ ಸರ್ಕಾರಿ ಅಸ್ಪತ್ರೆ. ನಗರದಲ್ಲಿ ಪೇಂಟಿಂಗ್ ಕೆಲಸ ಮಾಡುತಿದ್ದ ಉತ್ತರಪ್ರದೇಶ ಮೂಲದ ವ್ಯಕ್ತಿಯೊಬ್ಬ ಜ್ವರದಿಂದ ಬಳಲುತ್ತಿದ್ದ. ಚಿಕಿತ್ಸೆಗೆಂದು ಲಗ್ಗೆರೆ ಸರ್ಕಾರಿ ಅಸ್ಪತ್ರೆಯ ಫೀವರ್​ ಕ್ಲಿನಿಕ್​ಗೆ ಬಂದರೂ ಅಲ್ಲಿ ಯಾರೂ ಸ್ಪಂದಿಸಲಿಲ್ಲ.

    ಇದನ್ನೂ ಓದಿ; ಇದೆಂಥ ದೌರ್ಭಾಗ್ಯ.. ಕೇರಳದ ಅತಿದೊಡ್ಡ ಅರಮನೆಯಲ್ಲಿ ಅದರ ಮಾಲೀಕ ವಾಸವಿದ್ದದ್ದು ಕೇವಲ ಒಂದು ತಿಂಗಳಷ್ಟೇ 

    ಬಳಿಕ ಆಂಬುಲೆನ್ಸ್​ ಸಿಬ್ಬಂದಿ ಆತನನ್ನು ಕೆ.ಸಿ. ಜನರಲ್​ ಆಸ್ಪತ್ರೆಗೆ ಕರೆತಂದಿದ್ದಾರೆ. ಅಲ್ಲಿಯೂ ಚಿಕಿತ್ಸೆ ದೊರೆಯದೇ ಕರೊನಾ ರೋಗಿಗಳಿಗೆಂದೇ ಮೀಸಲಾಗಿರುವ ವಿಕ್ಟೋರಿಯಾ ಆಸ್ಪತ್ರೆಗೆ ಕರೆತಂದಿದ್ದಾರೆ. ಅಲ್ಲಿಯೂ ಸಹ ರೋಗಿಯನ್ನು ವೈದ್ಯರು ನೋಡದೇ ಬೌರಿಂಗ್ ಅಸ್ಪತ್ರೆಗೆ ಹೋಗುವಂತೆ ಸೂಚನೆ ನೀಡಿದ್ದಾರೆ.

    ಇಷ್ಟಾದರೂ ತಾಳ್ಮೆ ಕಳೆದುಕೊಳ್ಳದ ಆಂಬುಲೆನ್ಸ್​ ಸಿಬ್ಬಂದಿ ಆತನನ್ನು ಬೌರಿಂಗ್​ ಅಸ್ಪತ್ರೆಗೆ ಕರೆದೊಯ್ದಿದ್ದಾನೆ. ಅಲ್ಲಿಯ ಸಿಬ್ಬಂದಿ ಕ್ಯಾರೇ ಎಂದಿಲ್ಲ. ಕೊನೆಗೆ ಏನು ಮಾಡಬೇಕು ಎಂದು ತಿಳಿಯದೆ ರೋಗಿಯನ್ನು ಆಂಬುಲೆನ್ಸ್ ಸಿಬ್ಬಂದಿ ಲಗ್ಗೆರೆ ಸರ್ಕಾರಿ ಅಸ್ಪತ್ರೆಗೆ ಕರೆತಂದಿದ್ದಾರೆ. ಅಸ್ಪತ್ರೆ ಬಾಗಿಲಲ್ಲೇ ಆತ ಬಿದ್ದು ಒದ್ದಾಡುತಿದ್ದ.

    ಇದನ್ನೂ ಓದಿ;  ಭಾರತದಲ್ಲೂ ಸಜ್ಜಾಗುತ್ತಿದೆ ಕೋವಿಡ್​19ಗೆ ರಾಮಬಾಣ

    ಕೊನೆಗೆ ಸ್ಥಳೀಯರು ಕಂಟ್ರೋಲ್​ ರೂಮ್​ಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ನಂದಿನಿ ಲೇಔಟ್ ಪೊಲೀಸರ ಸಮ್ಮುಖದಲ್ಲಿ ರೋಗಿಯನ್ನು ಬೌರಿಂಗ್ ಆಸ್ಪತ್ರೆಗೆ ರವಾನೆ. ಮಾಡಲಾಯಿತು. ಸದ್ಯ ರೋಗಿಗೆ ಬೌರಿಂಗ್ ಅಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆತನಿಗೆ ಕರೊನಾ ಸೋಂಕನ ಲಕ್ಷಣಗಳು ಕಂಡುಬಂದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆ ನೀಡಿ, ನಿಗಾದಲ್ಲಿ ಇರಿಸಲಾಗಿದೆ.

    ಬೆಂಗಳೂರಿನಲ್ಲಿ ಆಸ್ಪತ್ರೆಗಳಿಗೆ ಅಲೆದಾಡಿದ ಕರೊನಾ ಶಂಕಿತ, ಸೋಂಕು ದೃಢವಾದರೆ ಕಾದಿದೆ ಅಪಾಯ

    ಕೊರೊನಾ ಸೋಂಕಿತ ತಂದೆಯನ್ನು ಆಸ್ಪತ್ರೆಯಿಂದ ಮನೆಗೆ ಕಳುಹಿಸಿದರೂ ಬದುಕಿಸಿಕೊಂಡ 55ರ ಮಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts