More

    ಸಾಮಾಜಿಕ ಅಂತರ ಕಾಯ್ದುಕೊಂಡು ಜೀವ ಉಳಿಸಿಕೊಳ್ಳಿ

    ಆಲಮೇಲ: ಇಡೀ ಜಗತ್ತು ಮಹಾಮಾರಿ ಕರೊನಾದಿಂದ ಬಳಲುತ್ತಿರುವುದು ನಾವೆಲ್ಲರೂ ಕಂಡಿದ್ದೇವೆ. ಆದರೆ, ನಾವೆಲ್ಲ ಜಾಗೃತರಾಗಿ ಸಾಮಾಜಿಕ ಅಂತರ ಕಾಯ್ದುಕೊಂಡು ಅಮೂಲ್ಯವಾದ ಜೀವ ಉಳಿಸಿಕೊಳ್ಳಬೇಕೆಂದು ಸಿಂದಗಿ ಪಟ್ಟಣದ ಹೆಚ್ಚುವರಿ ಹಿರಿಯ ಶ್ರೇಣಿ ಮತ್ತು ಜೆಎಂಎ್ಸಿ ನ್ಯಾಯಾಧೀಶ ಎಚ್.ಕೆ. ಉಮೇಶ ಹೇಳಿದರು.
    ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಆದೇಶದ ಮೇರೆಗೆ ಪಟ್ಟಣದಲ್ಲಿ ಕರೊನಾ ವಿರುದ್ಧ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಬುಧವಾರ ಹಮ್ಮಿಕೊಂಡಿದ್ದ ಜಾಗೃತಿ ಜಾಥಾದ ನೇತೃತ್ವ ವಹಿಸಿ ಅವರು ಮಾತನಾಡಿದರು.
    ಪಟ್ಟಣದ ಎಲ್ಲ ವ್ಯಾಪಾರಸ್ಥರು ತಮ್ಮ-ತಮ್ಮ ಅಂಗಡಿಗಳ ಮುಂದೆ ಗ್ರಾಹಕರು ಕಡ್ಡಾಯವಾಗಿ ಮಾಸ್ಕ್ ಧರಿಸಿ ಪ್ರವೇಶಿಬೇಕು ಎಂಬ ನಾಮಲಕ ಅಳವಡಿಸಬೇಕು. ಸಾರ್ವಜನಿಕರು ಸಂತೆ ಅಥವಾ ಅಂಗಡಿಗಳಿಗೆ ತೆರಳುವ ಸಂದರ್ಭ ಸಾಮಾಜಿಕ ಅಂತರದ ಜತೆಗೆ ಮಾಸ್ಕ್ ಧರಿಸಬೇಕು. ಮನೆಯಲ್ಲಿ ಯಾರಿಗಾದರೂ ಕೆಮ್ಮು, ನೆಗಡಿ, ಜ್ವರದಂತಹ ಲಕ್ಷಣಗಳು ಕಂಡುಬಂದರೆ ಕೂಡಲೇ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಚಿಕಿತ್ಸೆ ಪಡೆಯಬೇಕು. ಇದರಲ್ಲಿ ಸ್ವಲ್ಪವೂ ನಿರ್ಲಕ್ಷೃವಹಿಸಿದರೇ, ಜೀವಕ್ಕೆ ಅಪಾಯ ಖಂಡಿತ ಎಂದರು.
    ಪಿಎಸ್‌ಐ ನಿಂಗಪ್ಪ ಪೂಜೇರಿ, ಉಪ ತಹಸೀಲ್ದಾರ್ ಕಾಶಿನಾಥ ಅವರಾದಿ, ತಾಲೂಕು ವಕೀಲರ ಸಂಘದ ಅಧ್ಯಕ್ಷ ಎಸ್.ಬಿ. ದೊಡಮನಿ, ಪಪಂ ಮುಖ್ಯಾಧಿಕಾರಿ ಬಿ.ಜಿ. ನಾರಾಯಣಕರ, ಲಾಲಸಾಬ ದೇವರಮನಿ, ನ್ಯಾಯವಾದಿಗಳಾದ ಎಂ.ಸಿ. ಯಾತನೂರ, ಎಂ.ಎನ್. ಪಾಟೀಲ, ಪಿ.ಎಂ. ಕಂಬಾರ, ಬಿ.ಎಸ್. ಪಾಟೀಲ, ಪೊಲೀಸ್ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಪಪಂ ಪೌರ ಕಾರ್ಮಿಕರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts