More

    ದಾಸನದೊಡ್ಡಿ ಕಾಮೇಗೌಡರಿಗೂ ಕರೊನಾ ಪಾಸಿಟಿವ್

    ಮಂಡ್ಯ: ಮಳವಳ್ಳಿ ತಾಲೂಕಿನ ದಾಸನದೊಡ್ಡಿ ಕಾಮೇಗೌಡರಿಗೂ ಕರೊನಾ ಸೋಂಕು ತಗುಲಿದೆ.

    ಇತ್ತೀಚಿಗೆ ಕಾಲು ಗಾಯಯೊಂಡು ಅನಾರೋಗ್ಯಕ್ಕೀಡಾಗಿದ್ದ ಕಾಮೇಗೌಡರ ಮನೆಗೆ ಜಿಲ್ಲಾ ಆರೋಗ್ಯಾಧಿಕಾರಿ, ತಾಲೂಕು ವೈದ್ಯಾಧಿಕಾರಿ, ತಹಸೀಲ್ದಾರ್, ತಾಪಂ ಮುಖ್ಯಾಧಿಕಾರಿ ಭೇಟಿ ನೀಡಿದ್ದರು. ಜತೆಗೆ ತುರ್ತು ಚಿಕಿತ್ಸಾ ವಾಹನದಲ್ಲಿ ನಿತ್ಯ ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡಿ, ಮತ್ತೆ ಮನೆಗೆ ಬಿಡಲಾಗುತ್ತಿತ್ತು. ಹಾಗಾಗಿ ಯಾರ ಸಂಪರ್ಕದಿಂದ ಸೋಂಕು ಬಂದಿದೆ ಎಂಬುದನ್ನು ಹೇಳಲಾಗುತ್ತಿಲ್ಲ.

    ಇದನ್ನೂ ಓದಿರಿ ಕೋವಿಡ್​ಗೆ ಎಚ್.ಎಂ. ರೇವಣ್ಣರ ನಾದಿನಿ ಬಲಿ, ಕ್ವಾರಂಟೈನ್​ನಲ್ಲಿ ಮಾಜಿ ಸಚಿವ

    ಕರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಕಾಮೇಗೌಡರ ಮನೆಯ ಬೀದಿಯನ್ನು ಸೀಲ್​ಡೌನ್ ಮಾಡಿದ್ದು, ಕುಟುಂಬ ಸದಸ್ಯರನ್ನು ಕ್ವಾರಂಟೈನ್ ಮಾಡಲಾಗಿದೆ. ಕಾಮೇಗೌಡರನ್ನು ಮಿಮ್ಸ್ ಐಸೋಲೇಷನ್ ವಾರ್ಡ್​ಗೆ ಶಿಫ್ಟ್ ಮಾಡಲಾಗಿದೆ.

    ಕಾಮೇಗೌಡರು ಕೆರೆ ಕಟ್ಟಿದ್ದಾರೆ ಎಂದು ಕೆಲವರು ಹೇಳಿದ್ದರಿಂದ ರಾಜ್ಯೋತ್ಸವ ಪ್ರಶಸ್ತಿ, ಬಸವ ಶ್ರೀ ಪ್ರಶಸ್ತಿ ಜತೆಗೆ ಹಲವು ಪ್ರಶಸ್ತಿಗಳು ಸಿಕ್ಕಿವೆ. ಇತ್ತೀಚೆಗೆ ಮನ್ ಕೀ ಬಾತ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಕೂಡ ಕಾಮೇಗೌಡರನ್ನು ಪ್ರಶಂಸಿದ್ದರು.

    ಆ ಬಳಿಕ ಗ್ರಾಮಸ್ಥರು ಕಾಮೇಗೌಡ ಕೆರೆ ಕಟ್ಟಿಲ್ಲ. ಕಟ್ಟೆಗಳನ್ನು ಕೆರೆ ಎಂದು ಬಿಂಬಿಸಲಾಗಿದೆ. ಪ್ರಧಾನಿ ಹೊಗಳಿದ ನಂತರ ಕಾಮೇಗೌಡರು ಗ್ರಾಮಸ್ಥರಿಗೆ ಅನಗತ್ಯ ಕಿರುಕುಳ ನೀಡುತ್ತಿದ್ದಾರೆ ಎಂದು ಆಪಾದಿಸಿದ ಬಳಿಕ ಉಪವಿಭಾಗಾಧಿಕಾರಿ ನೇತೃತ್ವದಲ್ಲಿ ಶಾಂತಿ ಸಭೆ ನಡೆದಿದ್ದು, ಕಾಮೇಗೌಡರ ಸಾಧನೆಯ ಬಗ್ಗೆ ಪರಿಶೀಲನೆಗೆ ತಂಡ ರಚಿಸುವ ಭರವಸೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

    ಮಸಾಜ್ ಸ್ಪಾಗಳಲ್ಲಿ ವೇಶ್ಯಾವಾಟಿಕೆ, ಸಿಸಿಬಿ ಬಲೆಗೆ ಸಿಕ್ಕಿಬಿದ್ಳು ‘ಪಿಂಪ್’

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts