More

    ಭೋಜನಕೂಟ ಏರ್ಪಡಿಸಿದ್ದ ಮಹಿಳೆಗೆ ಕರೊನಾ, ಗ್ರಾಮಸ್ಥರಿಗೀಗ ಢವಢವ!

    ಅಥಣಿ (ಬೆಳಗಾವಿ): ಪುಣ್ಯಕ್ಷೇತ್ರಕ್ಕೆ ಹೋಗಿ ಬಂದ ನಿಮಿತ್ತ ಗ್ರಾಮವೊಂದರಲ್ಲಿ ಸಂಬಂಧಿಕರು ಮತ್ತು ಸ್ಥಳೀಯರಿಗೆ ಭೋಜನಕೂಟ ಏರ್ಪಡಿಸಿ ಊಟ ಬಡಿಸಿದ್ದ ಮಹಿಳೆಯಲ್ಲಿ ಕರೊನಾ ಸೋಂಕು ದೃಢಪಟ್ಟಿದ್ದು, ಜನರಲ್ಲಿ ಆತಂಕ ಮನೆ ಮಾಡಿದೆ.

    ಇದನ್ನೂ ಓದಿರಿ VIDEO| ಮಿಡತೆ ದಾಳಿಯ ಬಗ್ಗೆ ಮೊದಲೇ ಎಚ್ಚರಿಕೆ ನೀಡಿದ್ದ ಸಿನಿಮಾ ಇದು!

    ಅಥಣಿ ತಾಲೂಕಿನ 44 ಜನರು ಜಾರ್ಖಂಡ್​ ರಾಜ್ಯದ ಧಾಮಿರ್ಕ ಕ್ಷೇತ್ರಕ್ಕೆ ಹೋಗಿ ಬಂದಿದ್ದರು. ಅವರಲ್ಲಿ ಸವದಿ ಗ್ರಾಮದ 7, ನಂದಗಾಂವ್​ನ 3 ಹಾಗೂ ಬೆಳವಕ್ಕಿ, ಜುಂಜರವಾಡ ಮತ್ತು ಹುಕ್ಕೇರಿ ಪಟ್ಟಣದಲ್ಲಿ ತಲಾ 1 ಸೇರಿ ಒಟ್ಟು 13 ಜನರಲ್ಲಿ ಮಂಗಳವಾರ ಕರೊನಾ ದೃಢಪಟ್ಟಿತ್ತು. ಇವರಲ್ಲಿ ಸೋಂಕಿತ ಮಹಿಳೆಯೊಬ್ಬಳು ಧಾಮಿರ್ಕ ಕ್ಷೇತ್ರಕ್ಕೆ ಹೋಗಿ ಬಂದ ನಿಮಿತ್ತ ವಾಡಿಕೆಯಂತೆ ತನ್ನ ಬಂಧು, ಬಳಗದವರೆಲ್ಲರಿಗೂ ಭೋಜನಕೂಟ ಏರ್ಪಡಿಸಿ, ಖುದ್ದಾಗಿ ಎಲ್ಲರಿಗೂ ಅಡುಗೆ ಬಡಿಸಿದ್ದಳು.

    ಇದನ್ನೂ ಓದಿರಿ VIDEO/ ರೈತರ ಕೊಳವೆಬಾವಿಯಲ್ಲಿ ನೀರಿನ ಬದಲು ಬೆಂಕಿ ಬರ್ತಿದೆ!

    ಇದೀಗ ಆ ಮಹಿಳೆಯಲ್ಲಿ ಕೊರನಾ ಸೋಂಕು ದೃಢಪಟ್ಟಿರುವುದರಿಂದ ಖವಟಗೊಪ್ಪ ಗ್ರಾಮಸ್ಥರು ಸೇರಿ ಸುತ್ತಮುತ್ತಲ ಹಳ್ಳಿಯ ಜನರು ತಮ್ಮನೆಲ್ಲ ಕ್ವಾರಂಟೈನ್​ ಮಾಡುತ್ತಾರೆ ಎಂಬ ಭಯದಲ್ಲಿದ್ದಾರೆ. ಕೆಲವರು ಕ್ವಾರಂಟೈನ್​ಗೆ ಹೆದರಿ ಭೋಜನಕೂಟದಲ್ಲಿ ಭಾಗವಹಿಸಿರುವವರೂ ಅಲ್ಲಗಳೆಯುತ್ತಿದ್ದಾರೆ ಎನ್ನಲಾಗಿದೆ.

    ಸೋಂಕಿತ ಮಹಿಳೆಯೊಂದಿಗೆ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕ ಹೊಂದಿರುವವರ ಮಾಹಿತಿ ಕಲೆ ಹಾಕುವ ಕಾರ್ಯದಲ್ಲಿ ತೊಡಗಿರುವ ಆಶಾ, ಅಂಗನವಾಡಿ ಕಾರ್ಯಕರ್ತೆ, ಗ್ರಾಪಂ ಮತ್ತು ಪೊಲೀಸ್​ ಸಿಬ್ಬಂದಿಗೆ ಪತ್ತೆ ಹಚ್ಚುವುದು ಸಮಸ್ಯೆ ಆಗಿದೆ. ಈ ಹಿನ್ನೆಲೆಯಲ್ಲಿ ಗ್ರಾಮದಲ್ಲಿನ ಪ್ರತಿಯೊಬ್ಬರ ಆರೋಗ್ಯ ತಪಾಸಣೆ ನಡೆಸಲು ನಿರ್ಧರಿಸಲಾಗಿದೆ ಎಂದು ಚಿಕ್ಕೋಡಿ ವಿಭಾಗದ ವೈದ್ಯಾಧಿಕಾರಿ ಡಾ. ಶೈಲಜಾ ತಿಳಿಸಿದ್ದಾರೆ.

    ಇದನ್ನೂ ಓದಿರಿ ಮಂಡ್ಯದ ಮರುವನಹಳ್ಳಿಯಲ್ಲಿ ಸೋಂಕು ಹೆಚ್ಚಲು ಮಾವಿನಹಣ್ಣು ಕಾರಣವಂತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts