More

    ರೋಗ ಲಕ್ಷಣ ಇಲ್ಲದಿದ್ದರೂ ಕರೊನಾ ವಾರಿಯರ್​ಗೆ ಸೋಂಕು!

    ಬಳ್ಳಾರಿ: ನಗರದ ಜಿಲ್ಲಾಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ 35 ವರ್ಷದ ಶುಶ್ರೂಷಕನಿಗೆ ಕರೊನಾ ಪಾಸಿಟಿವ್​ ಬಂದಿದೆ. ಇದು ಜಿಲ್ಲೆಯಲ್ಲಿ ಕರೊನಾ ವಾರಿಯರ್​ಗೆ ಸೋಂಕು ತಗುಲಿರುವ ಮೊದಲ ಪ್ರಕರಣ. ಸೋಂಕಿತನಿಗೆ ರೋಗದ ಯಾವುದೇ ಲಕ್ಷಣವೂ ಕಂಡು ಬಂದಿಲ್ಲ. ಕೆಲಸದ ವೇಳೆ ಸುರಕ್ಷತಾ ಕ್ರಮವನ್ನೂ ಅನುಸರಿದ್ದರು. ಆದರೂ ಕೋವಿಡ್​19 ದೃಢಪಟ್ಟಿದೆ!

    ಸೋಂಕಿತರಿಗೆ ಚಿಕಿತ್ಸೆ ನೀಡುವ ವಾರ್ಡ್​ನಲ್ಲಿ ಡ್ಯೂಟಿ ಮಾಡುತ್ತಿದ್ದ ಇವರನ್ನು 14 ದಿನಗಳ ಕೆಲಸದ ಬಳಿಕ ನಿಯಮದಂತೆ 14 ದಿನದ ಹೋಟೆಲ್​ ಕ್ವಾರಂಟೈನ್​ನಲ್ಲಿದ್ದರು. ಆ ವೇಳೆ ಕರೊನಾ ಪರೀಕ್ಷೆಗೆ ಒಳಪಡಿಸಿದಾಗ ಸೋಂಕು ದೃಢಪಟ್ಟಿದೆ.

    ಇದನ್ನೂ ಓದಿರಿ ನವ ವಿವಾಹಿತ ಆತ್ಮಹತ್ಯೆ, ಕ್ವಾರಂಟೈನ್​ ಕೇಂದ್ರದಲ್ಲಿ ನಡೆದದ್ದಾದರೂ ಏನು?

    ಸೋಂಕಿತನಿಗೆ ರೋಗದ ಯಾವುದೇ ಲಕ್ಷಣ ಕಂಡು ಬಂದಿಲ್ಲ. ಪಿಪಿಇ ಕಿಟ್​ ಸೇರಿ ಅಗತ್ಯ ಸುರಕ್ಷತಾ ಕ್ರಮಗಳೊಂದಿಗೆ ಶುಶ್ರೂಷಕ ಕಾರ್ಯನಿರ್ವಹಿಸಿದ್ದ. ಆದಾಗ್ಯೂ ಸೋಂಕು ಹೇಗೆ ಹರಡಿತು ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಎಸ್​.ಎಸ್​. ನಕುಲ್​ ತಿಳಿಸಿದ್ದಾರೆ. ಸೋಂಕಿತ ಕ್ವಾರಂಟೈನ್​ನಲ್ಲಿದ್ದ ಹಿನ್ನೆಲೆಯಲ್ಲಿ ಕಂಟೇನ್ಮೆಂಟ್ ಪ್ರದೇಶ ಘೋಷಣೆಯಿಲ್ಲ.

    ಇದನ್ನೂ ಓದಿರಿ VIDEO/ ಕೊನೆಗೂ ಸೇಡು ತೀರಿಸಿಕೊಂಡ ಎಮ್ಮೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts