More

    ರಾಕ್ಷಸರಿಗೆ ಕರೊನಾ ಬರಲ್ಲ, ನನ್ನ ಬಳಿಯೂ ಸೋಂಕು ಸುಳಿಯಲ್ಲ..!

    ಶಿವಮೊಗ್ಗ: ಕೋವಿಡ್-19 ಭೀತಿಯಲ್ಲಿ ಜನಪ್ರತಿನಿಧಿಗಳು ಮನೆಯಲ್ಲೇ ಇದ್ದರೆ ಅಭಿವೃದ್ಧಿ ಕಾಮಗಾರಿಗಳು ನಡೆಯುವುದು ಹೇಗೆ ಎಂದು ಪ್ರಶ್ನಿಸಿರುವ ಸಚಿವ ಕೆ.ಎಸ್. ಈಶ್ವರಪ್ಪ, ರಾಕ್ಷಸರಿಗೆ ಕೋವಿಡ್-19 ಬರುವುದಿಲ್ಲ. ನನ್ನಂತಹವನಿಗಂತೂ ಸೋಂಕು ಸುಳಿಯುವುದಿಲ್ಲ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.

    ಶಾಸಕರು, ಸಂಸದರು, ಸಚಿವರು ಕರೊನಾ ಭಯ ಬಿಟ್ಟು ಕೆಲಸ ಮಾಡಬೇಕು. ಕರೊನಾ ಮಣಿಸುವ ಆತ್ಮಸ್ಥೈರ್ಯದ ಜತೆಗೆ ಜಾಗರೂಕತೆಯಿಂದ ಇರಬೇಕು ಎಂದು ಸಚಿವರು ಸಲಹೆ ನೀಡಿದರು.

    ಸಾಗರದಲ್ಲಿ ವಕೀಲ ಕೆ.ವಿ. ಪ್ರವೀಣ್​ ನೀಡಿರುವ ದೂರು ಆಧರಿಸಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ಕೈಬಿಡುವಂತೆ ಕೆಪಿಸಿಸಿ ನಿಯೋಗ ಸಿಎಂಗೆ ಮನವಿ ಮಾಡಿದೆ. ವಕೀಲ ತನ್ನ ಕೆಲಸವನ್ನು ಮಾಡಿದ್ದಾನೆ. ಎಫ್ಐಆರ್ ಹಾಕಿರುವ ಎಸ್​ಐ ಕ್ರಮ ಸರಿಯೋ, ತಪ್ಪೋ ಎಂಬುದನ್ನು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸುತ್ತೇವೆ ಎಂದು ಹೇಳಿದರು.

    ಇದನ್ನೂ ಓದಿರಿ ರಾತ್ರೋರಾತ್ರಿ ಕಾರ್ಮಿಕರನ್ನು ಕರೆತಂದು ಅವ್ಯವಸ್ಥೆ ಕೂಪಕ್ಕೆ ದೂಡಿದ್ರು!

    ಪಿಎಂ ಕೇರ್ ಫಂಡ್ ಅನ್ನು ಪ್ರಧಾನಿ ನರೇಂದ್ರ ಮೋದಿ ಸದುಪಯೋಗ ಮಾಡಿಕೊಳ್ಳುತ್ತಿಲ್ಲ ಎಂದು ಕಾಂಗ್ರೆಸ್​ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಆರೋಪಿಸಲಾಗಿದೆ. ‘ಪಿಎಂ ಕೇರ್ ಫಂಡ್ ಫ್ರಾಡ್’ ಎಂದು ಕಾಂಗ್ರೆಸ್ ಟೀಕಿಸಿದೆ. ಆ ಮೂಲಕ ಮೋದಿ ಅವರನ್ನು ಅವಹೇಳನ ಮಾಡಲಾಗಿದೆ ಎಂದು ವಕೀಲರು ದೂರು ನೀಡಿದ್ದಾರೆ. ಅವರು ತನ್ನ ಕೆಲಸವನ್ನು ಮಾಡಿದ್ದಾರೆ ಎಂದು ಸಮರ್ಥಿಸಿಕೊಂಡ ಈಶ್ವರಪ್ಪ, ಸೋನಿಯಾ ಗಾಂಧಿ ತಮ್ಮ ಹೇಳಿಕೆ ವಾಪಸ್ ಪಡೆಯಲಿ ಎಂದು ನಾನು ಹೇಳುವುದಿಲ್ಲ ಎಂದು ಈಶ್ವರಪ್ಪ ಹೇಳಿದರು

    ಇಡೀ ವಿಶ್ವವೇ ಮೋದಿ ಅವರನ್ನು ಸಮರ್ಥ ನಾಯಕ ಎಂದಿದೆ. ಕರೊನಾ ಮಣಿಸಲು ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷ ಒಂದಾಗಿ ಹೋರಾಡುತ್ತಿವೆ. ಇಂಥ ಸಂದರ್ಭದಲ್ಲಿ ಸೋನಿಯಾ ಗಾಂಧಿ ಹೇಳಿಕೆ ಎಲ್ಲರಿಗೂ ನೋವು ಉಂಟುಮಾಡಿದೆ ಎಂದರು.

    ಇದನ್ನೂ ಓದಿರಿ ವಲಸಿಗರ ಕ್ವಾರಂಟೈನ್​ ಕೇಂದ್ರದಲ್ಲಿ ಅತ್ತ ಅಶ್ಲೀಲ ನೃತ್ಯ, ಇತ್ತ ತುತ್ತು ಅನ್ನಕ್ಕೂ ಪರದಾಟ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts