More

    ಕ್ರೀಡಾಪಟುಗಳಿಗೆ ಏಕಾಗ್ರತೆ ಅವಶ್ಯ

    ಮಡಿಕೇರಿ : ತರಬೇತುದಾರರ ಮಾರ್ಗದರ್ಶನದಂತೆ ಕ್ರೀಡಾ ಶಿಬಿರಾರ್ಥಿಗಳು ನಡೆದುಕೊಳ್ಳುವ ಜತೆಗೆ ಮಾಡುವ ಕೆಲಸದಲ್ಲಿ ಏಕಾಗ್ರತೆ ಇರಬೇಕು ಎಂದು ಮಡಿಕೇರಿಯ ವಾಂಡರರ್ಸ್ ಕ್ಲಬ್ ಅಧ್ಯಕ್ಷ, ತರಬೇತುದಾರ ಕೋಟೆರ ಮುದ್ದಪ್ಪ ಕಿವಿಮಾತು ಹೇಳಿದರು.

    ನಾಪೋಕ್ಲು ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕ್ರೀಡಾ ಮತ್ತು ಸಾಂಸ್ಕೃತಿಕ ಅಕಾಡೆಮಿ ವತಿಯಿಂದ ಕರ್ನಾಟಕ ಪಬ್ಲಿಕ್ ಶಾಲೆಯ ಆಟದ ಮೈದಾನದಲ್ಲಿ ಆಯೋಜಿಸಿರುವ 24ನೇ ವರ್ಷದ ಉಚಿತ ಬೇಸಿಗೆ ತರಬೇತಿ ಶಿಬಿರದಲ್ಲಿ ಗುರುವಾರ ಪಾಲ್ಗೊಂಡು ಶಿಬಿರಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
    ಪ್ರತಿಭೆ ಎಲ್ಲರಲ್ಲೂ ಇದೆ. ಅದನ್ನು ಅನಾವರಣಗೊಳಿಸಿಕೊಳ್ಳುವುದು ಮುಖ್ಯ. ಆ ಮೂಲಕ ವಿದ್ಯಾರ್ಥಿಗಳು ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದರು.

    ಮಾಜಿ ಸೈನಿಕರ ಸಂಘದ ಅಧ್ಯಕ್ಷ ಕೊಂಡಿರ ನಾಣಯ್ಯ ಮಾತನಾಡಿ, ಜಿಲ್ಲೆಯ ಜನರಿಗೆ ದೇಶದೆಲ್ಲೆಡೆ ಗೌರವ ಇದೆ. ಕ್ರೀಡೆಯಲ್ಲೂ ಉತ್ತಮ ತರಬೇತಿ ಹೊಂದುವುದರ ಮೂಲಕ ಮಕ್ಕಳು ಸತ್ಪ್ರಜೆಗಳಾಗಬೇಕು. ವಿದ್ಯಾರ್ಥಿಗಳು ಶಿಬಿರದಲ್ಲಿ ಪಡೆದ ತರಬೇತಿಯನ್ನು ಶಿಬಿರದ ನಂತರವೂ ಬಳಸಿಕೊಳ್ಳಬೇಕು ಎಂದು ತಿಳಿಸಿದರು.


    ಅಕಾಡೆಮಿ ಉಪಾಧ್ಯಕ್ಷ ಕಾಂಡಂಡ ಜೋಯಪ್ಪ ಮಾತನಾಡಿ, ಅಕಡೆಮಿಯ ಸ್ಥಾಪಕ ಅಧ್ಯಕ್ಷ ಕಲಿಯಂಡ ಸಾಬು ಅಯ್ಯನ ಅವರ ಶ್ರಮದ ಫಲವಾಗಿ ಮಕ್ಕಳಿಗೆ ಇತ್ತೀಚಿನ ದಿನಗಳಲ್ಲಿ ಉತ್ತಮ ಕ್ರೀಡಾ ತರಬೇತಿ ಸಿಗುತ್ತಿದೆ. ಮೊಬೈಲ್ ಬಳಸುವುದನ್ನು ದೂರ ಮಾಡಿ ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು. ದೈಹಿಕ ಸಾಮರ್ಥ್ಯ ವೃದ್ಧಿಸಲು ಕ್ರೀಡೆ ಸಹಕಾರಿ ಎಂದರು.
    ಅಕಾಡೆಮಿ ಕಾರ್ಯದರ್ಶಿ ಹಾಗೂ ತರಬೇತುದಾರರಾಗಿ ಕೇಟೋಳಿರ ಡಾಲಿ ಅಚ್ಚಪ್ಪ, ಅರೆಯಡ ಗಣೇಶ್, ಮಾಚೆಟ್ಟಿರ ಕುಶು ಕುಶಾಲಪ್ಪ , ಪಾಲಕರು ಹಾಗೂ ಶಿಬಿರಾರ್ಥಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts