More

    ಆಸ್ಪತ್ರೆ ಸಹವಾಸವಿಲ್ಲದೆಯೇ ಕರೊನಾ ಗುಣಮುಖ

    ಕರೊನಾ ಬಗ್ಗೆ ಸಮಾಜದಲ್ಲಿ ಭಯವೇ ಹೆಚ್ಚಿದೆ. ಇಡೀ ಜಗತ್ತೇ ನಾಶವಾಗಿ ಹೋಗಿಬಿಡುತ್ತದೋ ಎಂಬ ರೀತಿಯಲ್ಲಿ ಪ್ರತಿಕ್ರಿಯೆಗಳನ್ನು ಕಾಣುತ್ತಿದ್ದೇವೆ. ಇಂಥ ಹೊತ್ತಿನಲ್ಲಿ ಸೋಂಕಿನಿಂದ ಹೇಗೆ ದೂರ ಇರಬಹುದು, ಹೇಗೆ ಪಾರಾಗಬಹುದು ಎಂಬ ಕುರಿತು ತಜ್ಞ ವೈದ್ಯ ಡಾ.ಬಿ.ಎಂ. ಹೆಗ್ಡೆ ಅಭಿಪ್ರಾಯ ಇಲ್ಲಿದೆ.

    ಮಂಗಳೂರು: ಕರೊನಾ ಕುರಿತು ಒಂದು ಭೀತಿಯ ಭೂತ ಸೃಷ್ಟಿಸಲಾಗಿದೆ. ವಾಸ್ತವ ಬೇರೆಯೇ ಇದೆ. ಕರೊನಾಕ್ಕಿಂತಲೂ ಅಪಾಯಕಾರಿ ಎಚ್1ಎನ್1, ಸಾರ್ಸ್‌ನಂತಹ ರೋಗಗಳನ್ನು ನಾವು ಈ ಹಿಂದೆ ಕಂಡಿದ್ದೇವೆ ಮತ್ತು ಎದುರಿಸಿದ್ದೇವೆ. ಕರೊನಾ ಸೋಂಕು ಬಗ್ಗೆ ಜನರು ಭಯಪಡುವ ಅಗತ್ಯವೇ ಇಲ್ಲ.
    ಸೋಂಕು ಬಾರದಂತೆ, ದೇಹದ ರೋಗ ನಿರೋಧಕ ಶಕ್ತಿ ಕುಸಿಯದಂತೆ ಜಾಗ್ರತೆ ವಹಿಸುವುದು ಒಳ್ಳೆಯದು. ಕರೊನಾ ಸೋಂಕು ತಡೆ, ನಿಯಂತ್ರಣಕ್ಕೆ ನಾಲ್ಕು ಔಷಧಿ ಅಥವಾ ಪರಿಹಾರ ಮಾರ್ಗಗಳನ್ನು ಸೂಚಿಸಲು ಬಯಸುತ್ತೇನೆ.

    ಎಲ್ಲದಕ್ಕೂ ಆಸ್ಪತ್ರೆ ಬೇಡ: ಗಂಭೀರ ಸ್ವರೂಪದ ಇತರ ಕಾಯಿಲೆಗಳು ಇರುವ ಸಂದರ್ಭ ಹೊರತುಪಡಿಸಿ ಜ್ವರ, ಶೀತ, ಗಂಟಲು ನೋವು ಬಂದ ಕೂಡಲೇ ಕರೊನಾ ಪರೀಕ್ಷೆಗೆ ಆಸ್ಪತ್ರೆಗೆ ಹೋಗುವುದು ಬೇಡ. ಒಂದು ಲೀಟರ್​ ನೀರಿಗೆ ಒಂದು ಇಂಚು ಅರಸಿನ, 10 ಬೆಳ್ಳುಳ್ಳಿ ಎಸಳು ಹಾಗೂ ತುಳಸಿಯ 30 ಎಲೆಗಳನ್ನು ಜಜ್ಜಿ ಹಾಕಿ, ಚೆನ್ನಾಗಿ ಕುದಿಸಬೇಕು. ಬಳಿಕ ಟವೆಲ್ ಹಾಕಿ ಅದರ ಆವಿಯ ಶಾಖ ತೆಗೆಯಬೇಕು. ವಿಕ್ಸ್ ಶಾಖ ತೆಗೆಯಲೇ ಬಾರದು. ವಿಕ್ಸ್ ಶಾಖ ತೆಗೆಯುವುದರಿಂದ ಶ್ವಾಸಕೋಶಗಳಿಗೆ ಹಾನಿಯಾಗುತ್ತದೆ.

    ಗಂಟಲು ಕೆರೆತಕ್ಕೆ ಪರಿಹಾರ: ಗಂಟಲು ಕೆರೆತ ಕರೊನಾ ಮಾತ್ರವಲ್ಲ, ಇತರ ಕಾರಣಗಳಿಂದಲೂ ಆಗುತ್ತದೆ. ಹೆದರಿಕೆ ಅವಶ್ಯವಿಲ್ಲ. ಐದು ಕರಿಮೆಣಸು ಹಾಗೂ ಒಂದು ಕಲ್ಲು ಉಪ್ಪು ಬಾಯಿಗೆ ಹಾಕಿ ಜಗಿದು ನಿಧಾನವಾಗಿ ರಸ ನುಂಗುತ್ತಾ ಇರಬೇಕು. ರಸ ಜಗಿದು ಪೂರ್ಣಗೊಂಡ ಬಳಿಕ ಒಂದು ಗಂಟೆ ತನಕ ಯಾವುದೇ ಆಹಾರ ಸೇವಿಸಬಾರದು.
    ರಾತ್ರಿ ಊಟ ಮುಗಿಸಿದ ಬಳಿಕ ಈ ರಸ ಜಗಿದರೆ ತುಂಬಾ ಒಳ್ಳೆಯದು. ಮರುದಿನ ಬೆಳಗ್ಗೆ ಒಳಗೆ ಗುಣವಾಗುತ್ತದೆ. ಕರೊನಾ ವೈರಸ್‌ಗಳಿದ್ದರೂ ಸಾಯುತ್ತವೆ.

    ಕಣ್ಣಿಗೂ ಚಿಕಿತ್ಸೆ: ಕರೊನಾದಿಂದ ಕಣ್ಣಿನಲ್ಲೂ ಸಮಸ್ಯೆ ಆಗುವುದುಂಟು. ಅಂತಹ ಸಂದರ್ಭದಲ್ಲಿ ಕಣ್ಣು ವಿಪರೀತ ತುರಿಸಿ ನೋವು ತರುವುದು. ಇದಕ್ಕೆ ಪರಿಹಾರವಾಗಿ, ಕುದಿಸಿ ಆರಿಸಿದ ಮೂರು ಟೀ ಸ್ಪೂನ್ ನೀರಿಗೆ ಎರಡು ತುಳಸಿ ಎಲೆಯನ್ನು ಹಿಚುಕಬೇಕು. ನಂತರ ಬಿಳಿ ಬಟ್ಟೆಯಲ್ಲಿ ಆ ನೀರನ್ನು ಸೋಸಿ ದಿನದಲ್ಲಿ ಎರಡು ಹೊತ್ತು ಎರಡು ಕಣ್ಣುಗಳಿಗೆ ತಲಾ ಐದು ಹನಿ ಹಾಕಬೇಕು. ವೈರಸ್ ಕಣ್ಣಿನೊಳಗಿದ್ದರೆ ಸತ್ತು ಹೋಗುತ್ತದೆ.

    ಮನೆಯಲ್ಲೇ ಸ್ಯಾನಿಟೈಸರ್: ಕರೊನಾ ಸೋಂಕು ಹರಡುವುದು ತಡೆಯಲು ಎಲ್ಲರೂ ಬಳಸುವ ಸ್ಯಾನಿಟೈಸರ್ ಕೂಡ ಅಪಾಯಕಾರಿ. ಸ್ಯಾನಿಟೈಸರ್‌ನಲ್ಲಿ ಕ್ಯಾನ್ಸರ್‌ಗೆ ಆಹ್ವಾನ ನೀಡುವಂತಹ ರಾಸಾಯನಿಕ ವಸ್ತುಗಳಿವೆ. ಆದ್ದರಿಂದ ಮನೆಯಲ್ಲೇ ಸ್ಯಾನಿಟೈಸರ್ ತಯಾರಿಸಿ ಬಳಸಬಹುದು.
    ಒಂದು ಬೋಗುಣಿಗೆ ಮೂರು ಟೀ ಸ್ಪೂನ್ ಶುದ್ದ ಕೊಬ್ಬರಿ ಎಣ್ಣೆ ಹಾಕಿ, ಅದರಲ್ಲಿ ಮೂರು ಎಸಳು ಬೆಳ್ಳುಳ್ಳಿ ಜಜ್ಜಿ ಹಿಚುಕಿ ಹಾಕಬೇಕು. ಹೊರಗೆ ತೆರಳುವ ವೇಳೆ ಈ ಎಣ್ಣೆಯನ್ನು ಕೈಗೆ ಹಚ್ಚಿಕೊಳ್ಳಬೇಕು. ಎಣ್ಣೆಯನ್ನು ಕುದಿಸುವ ಆವಶ್ಯಕತೆ ಇಲ್ಲ.

    ಕರೊನಾ ಅಪಾಯದಿಂದ ದೂರ ಇರಲು ನಮ್ಮ ದೇಹದಲ್ಲಿರುವ ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಮಾಡಿಕೊಳ್ಳುವುದು ಮುಖ್ಯ. ಸಕಾರಾತ್ಮಕ ಚಿಂತನೆ, ಮಾನಸಿಕ ನೆಮ್ಮದಿ, ವಿಶ್ರಾಂತಿ, ದೇಹವನ್ನು ಸಾಮರ್ಥ್ಯಕ್ಕಿಂತ ಹೆಚ್ಚು ದಂಡಿಸಿಕೊಳ್ಳದೆ ಇರುವುದು, ಉತ್ತಮ ಆಹಾರ ಪದ್ಧತಿಯ ಪಾಲನೆ (ನಮ್ಮ ಪೂರ್ವಜರ ಆಹಾರ ಪದ್ಧತಿಯೇ ಸೂಕ್ತ), ಎಲ್ಲರನ್ನೂ ಪ್ರೀತಿಸುವ ಗುಣ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಪೂರಕ.
    – ಡಾ.ಬಿ.ಎಂ.ಹೆಗ್ಡೆ, ಹಿರಿಯ ವೈದ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts