More

    ಸರ್ಕಾರಕ್ಕೆ ಡಾ. ದೇವಿಶೆಟ್ಟಿ‌ ವರದಿ ಸಲ್ಲಿಕೆ: ಶಾಲೆ ಆರಂಭಕ್ಕೆ ಸೂಚನೆ ನೀಡಿದ್ರೂ ಒಪ್ಪದ ಸರ್ಕಾರ

    ಬೆಂಗಳೂರು: ಮಹಾಮಾರಿ ಕರೊನಾ ಮೂರನೇ ಅಲೆಗೆ ಮಕ್ಕಳೇ ಟಾರ್ಗೆಟ್​ ಎಂಬ ಆತಂಕಕಾರಿ ಅಂಶ ಬಯಲಾಗಿದ್ದು, ಈ ಸಂದಿಗ್ಧ ಪರಿಸ್ಥಿತಿಯನ್ನ ಎದುರಿಸುವುದ್ಹೇಗೆ? ಮಕ್ಕಳ ರಕ್ಷಣೆಗೆ ಏನೆಲ್ಲಾ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕು, ಯಾವ ರೀತಿಯ ಸಿದ್ಧತೆ ಮಾಡಿಕೊಳ್ಳಬೇಕು ಎಂಬ ಮಹತ್ತರ ಸಲಹೆಯನ್ನೊಳಗೊಂಡ ವರದಿಯನ್ನು ಡಾ.ದೇವಿಶೆಟ್ಟಿ ನೇತೃತ್ವದ ತಂಡ ಸಿದ್ಧಪಡಿಸಿದ್ದು, ಸರ್ಕಾರಕ್ಕೆ ಸಲ್ಲಿಸಿದ್ದಾರೆ.

    ದೇವಿಶೆಟ್ಟಿ ವರದಿಯಲ್ಲಿ ಪ್ರಮುಖವಾಗಿ ಶಾಲೆ ಆರಂಭಿಸುವಂತೆ ಉಲ್ಲೇಖವಾಗಿದೆ. ಆದರೆ, ಸರ್ಕಾರ ಇದಕ್ಕೆ ಹಿಂದೇಟು ಹಾಕಿದೆ. ಏಕೆಂದರೆ, ಶಾಲೆ ಆರಂಭಿಸಿದ ಬಳಿಕ ಏನೇ ಸಮಸ್ಯೆಯಾದ್ರೂ ಅದಕ್ಕೆ ಸರ್ಕಾರವೇ ನೇರ ಹೊಣೆಯಾಗಲಿದೆ. ಸೋಂಕಿಗೆ ಯಾವುದೇ ಒಂದು ಮಗು ಬಲಿಯಾದರೂ ಸರ್ಕಾರಕ್ಕೆ ಸಂಕಷ್ಟ. ಹೀಗಾಗಿ ಅಪಾಯ ತೆಗೆದುಕೊಳ್ಳಲು ಸರ್ಕಾರ ಒಪ್ಪಿಲ್ಲ.

    ಸದ್ಯ ಕಾಲೇಜು ತೆರೆಯಲು ಮಾತ್ರ ಸರ್ಕಾರ ಸಮ್ಮತಿಸಿದೆ. ಅದರಲ್ಲೂ ಸಂಪೂರ್ಣ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಲಸಿಕೆ ನೀಡಿದ ಬಳಿಕವಷ್ಟೇ ಕಾಲೇಜು ಪ್ರಾರಂಭವಾಗಲಿದೆ. ಹೀಗಾಗಿ ಕಾಲೇಜು ಆರಂಭದ ಬಗ್ಗೆ ಸರ್ಕಾರ ಇನ್ನೂ ದಿನಾಂಕ ನಿಗದಿಪಡಿಸಿಲ್ಲ. ಪ್ರಾಥಮಿಕ ಮತ್ತು ಪ್ರೌಢ ಶಾಲೆ ತೆರೆಯುವ ಬಗ್ಗೆಯೂ ಸರ್ಕಾರ ನಿರ್ಧರಿಸಿಲ್ಲ.

    ಮಕ್ಕಳ ಮೇಲೆ ಮೂರನೇ ಅಲೆ ಹೆಚ್ಚಿನ ಪರಿಣಾಮ ಬೀರುವ ವರದಿ ಹಿನ್ನೆಲೆಯಲ್ಲಿ ಶಾಲೆ ಆರಂಭಕ್ಕೆ ಸರ್ಕಾರ ಹಿಂದೇಟು ಹಾಕುತ್ತಿದೆ. ಒಂದು ವೇಳೆ ಶಾಲೆ ಆರಂಭ ಮಾಡಿ ಸೋಂಕು ತಗುಲಿದ್ರೆ ವೇಗವಾಗಿ ಹರಡುವ ಭೀತಿ ಇದೆ. ಒಬ್ಬ ವಿದ್ಯಾರ್ಥಿಗೆ ಸೋಂಕು ತಗುಲಿದ್ರೆ ಇಡೀ ತರಗತಿಗೆ ಹರಡುವ ಸಾಧ್ಯತೆ ಇದೆ. ಪ್ರಾಥಮಿಕ ಶಾಲೆಯ ಮಕ್ಕಳು ಕೋವಿಡ್ ನಿಯಮ ಪಾಲಿಸುವುದು ಕಷ್ಟ. ಅಲ್ಲದೆ, ಅವರನ್ನು ನಿಯಂತ್ರಣ ಮಾಡುವುದು ಕಷ್ಟ ಹೀಗಾಗಿ ಸದ್ಯಕ್ಕೆ ತೊಂದರೆ ತೆಗೆದುಕೊಳ್ಳುವುದು ಬೇಡ ಎಂದು ಸಿಎಂ ತೀರ್ಮಾನ ಮಾಡಿದ್ದಾರೆ.

    ಲಸಿಕೆ ಟ್ರಯಲ್ ಆದ ಮೇಲೆ ಮುಂದಿನ ತೀರ್ಮಾನ ತೆಗೆದುಕೊಳ್ಳೊಣ ಎಂದು ಸರ್ಕಾರದ ತೀರ್ಮಾನ ಮಾಡಿರುವುದಾಗಿ ಸಿಎಂ ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ. ಡಾ. ದೇವಿಪ್ರಸಾದ್ ಶೆಟ್ಟಿ ತಜ್ಞರ ಸಮಿತಿ ವರದಿ ಸಲ್ಲಿಸಿದ್ದು ಚರ್ಚೆ ಮಾಡಲಾಗಿದೆ ಎಂದು ಸಿಎಂ ತಿಳಿಸಿದರು.

    ವರದಿಯಲ್ಲಿ ಏನಿದೆ?
    ಮೂರನೇ ಅಲೆಯಲ್ಲಿ ಮಕ್ಕಳಿಗೆ ಹೆಚ್ಚು ತಗುಲುತ್ತೆ ಅಂತ ವರದಿಯಲ್ಲಿ ಹೇಳಲಾಗಿದೆ. ಜಿಲ್ಲೆ, ತಾಲ್ಲೂಕುಗಳಲ್ಲಿ ಮಕ್ಕಳ ತೀವ್ರ ನಿಘಾ ಘಟಕ ಸ್ಥಾಪನೆ, ವಿವಿಧ ವೈದ್ಯಕೀಯ ಸಲಹೆ, ವೈದ್ಯರು, ದಾದಿಯರ ನೇಮಕ ಹಾಗೂ ಸಾರ್ವಜನಿಕರ ಸಹಭಾಗಿತ್ವ ಪಡೆಯಲು ವರದಿಯಲ್ಲಿ ಶಿಫಾರಸು ಮಾಡಲಾಗಿದೆ. ಅಪೌಷ್ಟಿಕತೆ ಹಾಗೂ ಆಮ್ಲಜನಕ ಕೊರತೆಯ ನಿವಾರಣೆಗೆ ಕ್ರಮ ತೆಗೆದುಕೊಳ್ಳಲು ಸಲಹೆ ನೀಡಲಾಗಿದೆ.

    ಈವರೆಗೂ ರಿಲಾಕ್ಸೇಷನ್ ನೀಡಿದ್ದು ಸರಿ ‌ಇದೆ. ಕಾಲೇಜು ಪ್ರಾರಂಭಿಸಲು ನಿರ್ಧಾರ ಮಾಡಿದ್ದು. ವ್ಯಾಕ್ಸಿನ್ ನೀಡಿ ಪ್ರಾರಂಭಿಸಲು ಸಲಹೆ ನೀಡಿದ್ದಾರೆ. ಕೋವಿಡ್ ನಿಯಂತ್ರಣಕ್ಕೆ ಲಸಿಕೆ ಪ್ರಮುಖವಾಗಿದೆ. ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಲಸಿಕೆ ನೀಡಲಾಗುವುದು. 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಿ, ಕಾಲೇಜು ಆರಂಭಿಸಲು ಸೂಚನೆ ನೀಡಲಾಗಿದೆ ಎಂದು ಸಿಎಂ ಹೇಳಿದರು.

    ಸದ್ಯ ಇಂಜಿನಿಯರಿಂಗ್, ಮೆಡಿಕಲ್ ಕಾಲೇಜು ಆರಂಭಕ್ಕೆ ಸೂಚನೆ ನೀಡಲಾಗಿದೆ. ಕಾಲೇಜು ಮೊದಲು ಪ್ರಾರಂಭ ಮಾಡಿ, ನಂತರ ನೋಡಿಕೊಂಡು ಶಾಲೆ ಆರಂಭ ಮಾಡಲು ನಿರ್ಧರಿಸಲಾಗಿದೆ. ಮಕ್ಕಳಿಗೆ ಲಸಿಕೆ ಕೊಡುವ ಬಗ್ಗೆ ಕ್ಲೀನಿಕಲ್ ಟ್ರಯಲ್ ಟೆಸ್ಟ್ ನಡೆಯುತ್ತಿದೆ. ಎಲ್ಲವನ್ನೂ ನೋಡಿಕೊಂಡು ಮಕ್ಕಳಿಗೂ ಲಸಿಕೆ ನೀಡುವ ಬಗ್ಗೆ ಚರ್ಚೆ ಮಾಡುತ್ತೇವೆ. ಜಿಲ್ಲೆ ಮತ್ತು ತಾಲ್ಲೂಕುಗಳಲ್ಲಿ ಐಸಿಯು ಘಟಕ ಸ್ಥಾಪನೆಗೆ ಸೂಚನೆ ನೀಡಲಾಗಿದೆ ಎಂದು ಸಿಎಂ ಹೇಳಿದರು. (ದಿಗ್ವಿಜಯ ನ್ಯೂಸ್​)

    ಮಾಸ್ಕ್‌ ಹಾಕಿಕೊಂಡ್ರೆ ರಸ್ತೆ ಬಿಡುತ್ತೆ- ಇಲ್ದಿದ್ರೆ ತಲೆಮೇಲೆ ಏಟು ಕೊಡುತ್ತೆ ಈ ಮಷಿನ್‌: ವಿಡಿಯೋ ನೋಡಿ…

    ಆತ್ಮಹತ್ಯೆಗೆ ಶರಣಾದ ಚಿನ್ನದ ಮನುಷ್ಯ: ಸುಖದ ಸುಪತ್ತಿಗೆಯಲ್ಲಿದ್ದವ ಸಾವಿನ ಹಾದಿ ಹಿಡಿದಿದ್ದೇಕೆ?

    ನಟಿ ರಶ್ಮಿಕಾ ಮಂದಣ್ಣ ಹುಡುಕಿಕೊಂಡು ತೆಲಂಗಾಣದಿಂದ ವಿರಾಜಪೇಟೆಗೆ ಬಂದ ಯುವಕನಿಗೆ ಕಾದಿತ್ತು ಶಾಕ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts