More

  ಗೆಳೆಯರ ಬಳಗ ಶಾಲೆಯ ಹಳೆಯ ವಿದ್ಯಾರ್ಥಿಗಳಿಂದ ಶಿಕ್ಷಕರಿಗೆ ಗುರುವಂದನೆ

  ಹಾವೇರಿ: ಇಲ್ಲಿನ ಜ್ಞಾನಗಂಗಾ ಶಿಕ್ಷಣ ಸಮಿತಿಯ ಗೆಳೆಯರ ಬಳಗ ಶಾಲೆಯಲ್ಲಿ 1992ರಿಂದ 2002ನೇ ಇಸ್ವಿಯಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳ ಗೆಳೆಯರ ಬಳಗ ವತಿಯಿಂದ ಇತ್ತೀಚೆಗೆ ಗುರುವಂದನಾ ಕಾರ್ಯಕ್ರಮ ಹಾಗೂ ಸ್ನೇಹ ಸಮ್ಮಿಲನ ಆಚರಿಸಲಾಯಿತು.
  ಡಾ.ಸುದೀಪ ಪಂಡಿತ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಡಾ.ಶ್ರವಣ ಪಂಡಿತ, ಡಾ.ಗೌತಮ ಲೋಡಾಯ, ಡಾ.ಗುಹೇಶ್ವರ ಪಾಟೀಲ ಮತ್ತು ಸಂಜೀವ ಬಣಕಾರ ಪಾಲ್ಗೊಂಡಿದ್ದರು.
  ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ 40ಕ್ಕೂ ಹೆಚ್ಚು ಶಿಕ್ಷಕರನ್ನು ಹಳೆಯ ವಿದ್ಯಾರ್ಥಿಗಳು ಶಾಲೆಯ ಮುಖ್ಯ ದ್ವಾರದಿಂದ ಹೂವಿನ ಮಳೆಗೆರೆದು ಬರಮಾಡಿಕೊಂಡರು. ಎಲ್ಲ ಶಿಕ್ಷರಿಗೂ ಸಸಿಗಳನ್ನ ಕೊಟ್ಟು, ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ 60ಕ್ಕೂ ಹೆಚ್ಚು ಹಳೆಯ ವಿದ್ಯಾರ್ಥಿಗಳು ಉಪಸ್ಥಿತಿತರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts