More

    ವಲಸೆ ಕಾರ್ಮಿಕರನ್ನು ವಾಹನದಲ್ಲೇ ಕೂಡಿಹಾಕಿದ ಪೊಲೀಸರು 6 ತಾಸು ಅನ್ನ, ನೀರು ಕೊಡದೆ ಗೋಳಾಡಿಸಿದರು

    ಕೋಲ್ಕತ್ತ: ವಲಸೆ ಕಾರ್ಮಿಕರನ್ನು ತುಂಬಿಕೊಂಡ ವಾಹನವೊಂದು ಶನಿವಾರ ಗೋವಾದಿಂದ, ಪಶ್ಚಿಮ ಬಂಗಾಳಕ್ಕೆ ಬಂತು. ರಾಜ್ಯದಲ್ಲಿ ಲಾಕ್​ಡೌನ್​ ಇದೆ ಎಂಬುದು ಅವರ್ಯಾರಿಗೂ ಗೊತ್ತಿಲ್ಲ. ವೆಸ್ಟ್​ ಬೆಂಗಾಲ್​ನ್ನು ಪ್ರವೇಶಿಸಿದ ವಾಹನ ಕೋಲ್ಕತ್ತದ ವಿಐಪಿ ರಸ್ತೆಯನ್ನು ತಲುಪಿತು.

    ಆದರೆ ಅಲ್ಲಿಗೆ ಹೋದ ನಂತರ ವಲಸೆ ಕಾರ್ಮಿಕರು ಪೊಲೀಸರ ಕೈಯಲ್ಲಿ ಸಿಕ್ಕಿಬಿದ್ದರು. ಆ ಪೊಲೀಸರು ಕಾರ್ಮಿಕರನ್ನು ಸುಮಾರು 6 ತಾಸು ಗೋಳಾಡಿಸಿಬಿಟ್ಟರು.

    ಮಂಗಳವಾರ 29 ವಲಸೆ ಕಾರ್ಮಿಕರು ಗೋವಾದಿಂದ ಹೊರಟಿದ್ದರು. ಇವರೆಲ್ಲ ಪಶ್ಚಿಮಬಂಗಾಳದ ಧಮಖಾಲಿ ಗ್ರಾಮದ ನಿವಾಸಿಗಳು. ಶನಿವಾರ ರಾಜ್ಯಕ್ಕೆ ಬಂದಿದ್ದಾರೆ. ತಮ್ಮ ಬಗ್ಗೆ ಎಲ್ಲ ದಾಖಲೆಗಳನ್ನೂ ಹೊಂದಿದ್ದರು. ಆದರೆ ಪೊಲೀಸರು ಮಾತ್ರ ಜಪ್ಪಯ್ಯ ಅಂದರೂ ಅವರನ್ನು ಆರು ತಾಸು ಅಲ್ಲಿಂದ ಬಿಡಲಿಲ್ಲ.

    ಬೆಳಗ್ಗೆ 8ಗಂಟೆಗೆ ಪೊಲೀಸರ ಕೈಯಲ್ಲಿ ಸಿಕ್ಕಿಬಿದ್ದ ವಲಸೆ ಕಾರ್ಮಿಕರು ಸುಮಾರು ಮಧ್ಯಾಹ್ನ 2ಗಂಟೆಯವರೆಗೂ ಅಲ್ಲೇ ಇರುವಂತಾಯಿತು. ವಾಹನದಲ್ಲೇ ಕುಳಿತಿದ್ದ ಅವರಿಗೆ ಆಹಾರ, ನೀರು ಕೊಡುವ ಸೌಜನ್ಯವನ್ನೂ ಪೊಲೀಸರು ತೋರಲಿಲ್ಲ ಎಂದು ಹೇಳಲಾಗಿದೆ. ಅದರೊಂದಿಗೆ, ಲಾಕ್​ಡೌನ್ ರಾತ್ರಿ 10 ಗಂಟೆಗೆ ಮುಗಿಯುತ್ತದೆ. ಅಲ್ಲಿಯವರೆಗೂ​ ಇಲ್ಲೇ ವಾಹನದಲ್ಲೇ ಇರಿ ಎಂದು ಪೊಲಿಸರು ಹೇಳಿದ್ದಾರೆ ಎಂದು ಸಿಕ್ಕಿಬಿದ್ದ ವಲಸೆ ಕಾರ್ಮಿಕನೋರ್ವ ನಂತರ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಭೋರ್ಗರೆವ ಪ್ರವಾಹದ ಮಧ್ಯೆ ಪ್ರಸವ; ಎನ್​ಡಿಆರ್​ಎಫ್​ ರಕ್ಷಣಾ ದೋಣಿಯಲ್ಲಿ ಹೆಣ್ಣುಮಗು ಜನನ

    ಸುಮಾರು ಆರು ತಾಸಿನ ಬಳಿಕ ನಮಗೆ ಸ್ಥಳೀಯ ಜನರು ಮತ್ತು ಪೊಲೀಸರು ಸೇರಿ ಆಹಾರದ ವ್ಯವಸ್ಥೆ ಮಾಡಿದರು. ಅಷ್ಟು ಹೊತ್ತು ಕಾಯಿಸಿದ್ದಲ್ಲದೆ, ನಮಗೆ ತಿಂಡಿ ವಿತರಿಸುವ ಫೋಟೋಗಳನ್ನೂ ತೆಗೆದುಕೊಂಡರು ಎಂದು ಆರೋಪಿಸಿದ್ದಾರೆ.

    ನಾವು ಗೋವಾದಿಂದ ಹೊರಟು ಐದು ದಿನಗಳ ಕಾಲ ಪ್ರಯಾಣ ಮಾಡಿದ್ದೇವೆ. ಇಷ್ಟೂ ದಿನಗಳಲ್ಲಿ ನಮಗೆ ಸರಿಯಾಗಿ ಆಹಾರ ಸಿಗಲಿಲ್ಲ. ಇಲ್ಲಿಗೆ ಬಂದ ಮೇಲೆ ಕೂಡ 12 ತಾಸು ಕಾಯಲು ಪೊಲೀಸರು ಹೇಳಿದರು ಎಂದು ದುಃಖ ವ್ಯಕ್ತಪಡಿಸಿದ್ದಾರೆ.
    ಪಶ್ಚಿಮ ಬಂಗಾಳದಲ್ಲಿ ಪ್ರತಿವಾರವೂ ಎರಡು ದಿನ ಲಾಕ್​ಡೌನ್​ ಇರುತ್ತದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಈ ಹಿಂದೆಯೇ ಘೋಷಿಸಿದ್ದಾರೆ.(ಏಜೆನ್ಸೀಸ್​)

    ಅಪ್ಪ ಶಾಲೆಗಾಗಿ ಇಟ್ಟಿದ್ದ 1 ಕೋಟಿ ರೂ. ಎಗರಿಸಲು ತಾನೇ ಕಿಡ್ನ್ಯಾಪ್​ ಆದ ಮಗಳು; ಒಂದು ಸಣ್ಣ ತಪ್ಪು ಮಾಡಿ ಸಿಕ್ಕಿಬಿದ್ದಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts