More

    ನೂತನ ಅಧ್ಯಕ್ಷರ ನಿರೀಕ್ಷೆಯಲ್ಲಿ ಕೊಪ್ಪ ಕಾಂಗ್ರೆಸ್

    ಕೊಪ್ಪ: ಕೊಪ್ಪ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ವಕೀಲ ಸುಧೀರ್‌ಕುಮಾರ್ ಮುರೊಳ್ಳಿ ಜ.14 ರಂದು ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ರಾಜೀನಾಮೆ ಘೋಷಿಸಿದ್ದಾರೆ.
    ಸುಧೀರ್ ಕುಮಾರ್ ರಾಜೀನಾಮೆ ನೀಡುತ್ತಿದ್ದಂತೆ ನಾಲ್ಕೈದು ಕಾಂಗ್ರೆಸ್ ಮುಖಂಡರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದು, ಅವಕಾಶ ದೊರೆತರೆ ಸರ್ಮಥವಾಗಿ ಅಧ್ಯಕ್ಷ ಸ್ಥಾನ ನಿಭಾಯಿಸುವ ಉತ್ಸಾಹದಲ್ಲಿದ್ದರೆ. 2016 ರಿಂದ 2023ರ ವರೆಗೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಸುಧೀರ್ ಕುಮಾರ್ ಮುರೊಳ್ಳಿ ಪಕ್ಷ ಸಂಘಟಿಸು ಜತೆಗೆ ವಿರೋಧ ಪಕ್ಷದ ಸವಾಲುಗಳನ್ನು ಎದುರಿಸಿ ವೈಚಾರಿಕವಾಗಿ ಯುವ ಪಡೆಯನ್ನು ಸಂಘಟಿಸುವಲ್ಲಿ ಯಶಸ್ವಿಯಾಗಿದ್ದರು. ಆದರೇ ಚುನಾವಣೆ ವೇಳೆ ಇವುಗಳನ್ನು ಮತಗಳಾಗಿ ಪರಿವರ್ತಿಸುವಲ್ಲಿ ವಿಲರಾಗಿದ್ದಾರೆ.
    ಸುಧೀರ್ ಕುಮಾರ್ ಅವರ ಸ್ಥಾನಕ್ಕೆ ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಚ್.ಎಸ್ ಇನೇಶ್, ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಕುಕ್ಕುಡಿಗೆ ರವೀಂದ್ರ, ಹಾಲಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನುಗ್ಗಿ ಮಂಜುನಾಥ್, ತಾಲೂಕು ಉಪಾಧ್ಯಕ್ಷೆ ಅನ್ನಪೂರ್ಣ ನರೇಶ್ ಹೆಸರುಗಳು ಮುನ್ನಲ್ಲೆಯಲ್ಲಿದೆ.
    ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಯಗಳಿಸಿದ್ದರೂ ಕೊಪ್ಪ ತಾಲೂಕಿನಲ್ಲಿ ಬಿಜೆಪಿ ತನ್ನ ಮತಬುಟ್ಟಿಯನ್ನು ಭದ್ರವಾಗಿ ಇರಿಸಿಕೊಳ್ಳಲು ಯಶಸ್ವಿಯಾಗಿತ್ತು. ಕಸಬಾ, ಹರಿಹರಪುರ, ಮೇಗುಂದ ಮೂರು ಹೋಬಳಿಗಳಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿತ್ತು. ಇದರಿಂದ ಶಾಸಕ ರಾಜೇಗೌಡರಿಗೆ ಸುಲಭದ ಜಯ ಸಿಕ್ಕಿರಲಿಲ್ಲ. ಹೊಸ ಅಧ್ಯಕ್ಷರಾಗಿ ಚುಕ್ಕಾಣಿ ಹಿಡಿಯುವವರ ಮೇಲೆ ಬಹುದೊಡ್ಡ ಜವಾಬ್ದಾರಿಯಿದೆ. ಬಿಜೆಪಿ ಮತಗಳನ್ನು ಕಾಂಗ್ರೆಸ್‌ನತ್ತ ಸೆಳೆದು ಮುಂಬರುವ ಲೋಕಸಭೆ, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್‌ನನ್ನು ಗೆಲ್ಲಿಸಬೇಕಿದೆ. ಪಕ್ಷ ಸಂಘಟನೆಗೆ ಇನ್ನಷ್ಟು ಒತ್ತು ನೀಡುವ ಆಗತ್ಯವಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts