More

    100 ಕೆಜಿ ತೂಕದ ಈ ಕ್ರಿಕೆಟಿಗ ಪಾಕ್​ ತಂಡಕ್ಕೆ ಆಯ್ಕೆಯಾದ ಬೆನ್ನಲ್ಲೇ ವಿವಾದ ಸೃಷ್ಟಿ!

    ಲಾಹೋರ್​: ಮುಂಬರುವ ಇಂಗ್ಲೆಂಡ್​ ಮತ್ತು ವೆಸ್ಟ್​ ಇಂಡೀಸ್​ ಪ್ರವಾಸಕ್ಕೆ ಪಾಕಿಸ್ತಾನ ಕ್ರಿಕೆಟ್​ ಮಂಡಳಿ ಇತ್ತೀಚೆಗೆ ಮೂರೂ ಪ್ರಕಾರದ ತಂಡವನ್ನು ಪ್ರಕಟಿಸಿದೆ. ಈ ಪೈಕಿ ಟಿ20 ತಂಡದಲ್ಲಿ ಅಜಾಮ್​ ಖಾನ್​ ಎಂಬ ಯುವ ವಿಕೆಟ್​ ಕೀಪರ್​-ಬ್ಯಾಟ್ಸ್​ಮನ್​ ಇದೇ ಮೊದಲ ಬಾರಿಗೆ ಸ್ಥಾನ ಪಡೆದಿದ್ದಾರೆ. ಟಿ20 ಕ್ರಿಕೆಟ್​ನಲ್ಲಿ 150ಕ್ಕೂ ಅಧಿಕ ಸ್ಟ್ರೆಕ್​ರೇಟ್​ ಹೊಂದಿದ್ದರೂ 22 ವರ್ಷದ ಈ ಆಟಗಾರನ ಆಯ್ಕೆಯನ್ನು ಪಾಕಿಸ್ತಾನದ ಕ್ರಿಕೆಟ್​ ಪ್ರೇಮಿಗಳು ಪ್ರಶ್ನಿಸಿರುವ ಬೆನ್ನಲ್ಲೇ ವಿವಾದ ಸೃಷ್ಟಿಯಾಗಿದೆ.

    ಅಜಾಮ್​ ಖಾನ್​ ಪಾಕಿಸ್ತಾನದ ಮಾಜಿ ವಿಕೆಟ್​ ಕೀಪರ್​ ಮೊಯಿನ್​ ಖಾನ್​ ಅವರ ಪುತ್ರನಾಗಿದ್ದಾರೆ. ಮಗನ ಆಯ್ಕೆಯಲ್ಲಿ ತಂದೆಯ ಪ್ರಭಾವ ಇದೆ ಎಂಬುದು ಅವರ ಆಯ್ಕೆಯನ್ನು ಪ್ರಶ್ನಿಸಲು ಒಂದು ಕಾರಣವಾಗಿದ್ದರೆ, ಇನ್ನೊಂದು ಕಾರಣವಿರುವುದು ಅಜಾಮ್​ ಖಾನ್​ ಅವರ ದೇಹತೂಕದಲ್ಲಿ. ಹೌದು, ಅಜಾಮ್​ ಖಾನ್​ 100 ಕೆಜಿಗೂ ಅಧಿಕ ದೇಹತೂಕ ಹೊಂದಿದ್ದು, ಅವರ ಫಿಟ್ನೆಸ್​ ಬಗ್ಗೆಯೂ ಕ್ರಿಕೆಟ್​ ಪ್ರೇಮಿಗಳು ಪ್ರಶ್ನೆಗಳನ್ನು ಎತ್ತಿದ್ದಾರೆ.

    ಇದನ್ನೂ ಓದಿ: ಎಲ್ಲ ಸ್ಪಿನ್​ ಬೌಲರ್​ಗಳು ಮದುವೆಯಾಗಬೇಕೆಂದ ಚಾಹಲ್​! ಯಾಕೆ ಗೊತ್ತೇ?

    ಅಜಾಮ್​ ಖಾನ್​ ಅವರ ತಂದೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಮತ್ತು ಪಾಕಿಸ್ತಾನ ಸೂಪರ್​ ಲೀಗ್​ನಲ್ಲಿ ಕ್ವೆಟ್ಟಾ ಗ್ಲಾಡಿಯೇಟರ್ಸ್​ ತಂಡದ ಕೋಚ್​ ಆಗಿದ್ದಾರೆ ಎಂಬ ಕಾರಣಕ್ಕೆ ಆರಿಸಲಾಗಿದೆ ಎಂದು ಕೆಲವರು ದೂರಿದ್ದರೆ, ಇನ್ನು ಕೆಲವರು 100 ಕೆಜಿಗೂ ಅಧಿಕ ದೇಹತೂಕ ಹೊಂದಿರುವ ಆಟಗಾರನ ಫಿಟ್ನೆಸ್​ ಯಾವ ಮಟ್ಟದಲ್ಲಿರಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಪಾಕಿಸ್ತಾನದ ದೇಶೀಯ ಕ್ರಿಕೆಟ್​ನಲ್ಲಿ ಸದ್ಯ ಅಜಾಮ್​ ಖಾನ್​ಗಿಂತಲೂ ಪ್ರತಿಭಾನ್ವಿತ ಆಟಗಾರರಿದ್ದಾರೆ ಎಂದು ಹೇಳಿದ್ದಾರೆ.

    ಅಜಾಮ್​ ಖಾನ್​ ಇದುವರೆಗೆ ಕೇವಲ 1 ಪ್ರಥಮ ದರ್ಜೆ ಪಂದ್ಯವನ್ನಷ್ಟೇ ಆಡಿದ್ದು, 50 ರನ್​ ಗಳಿಸಿದ್ದಾರೆ. ಇನ್ನು 15 ಲಿಸ್ಟ್​ ಎ ಏಕದಿನ ಪಂದ್ಯಗಳಲ್ಲಿ 29.89ರ ಸರಾಸರಿಯಲ್ಲಿ 239 ರನ್​ ಗಳಿಸಿದ್ದಾರೆ. 36 ಟಿ20 ಪಂದ್ಯಗಳಲ್ಲಿ 23.96ರ ಸರಾಸರಿಯಲ್ಲಿ 743 ರನ್​ ಗಳಿಸಿದ್ದಾರೆ. ಈ ದಾಖಲೆಗಳ ಪ್ರಕಾರ ಅಜಾಮ್​ ಖಾನ್​ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯಬಹುದಾದಷ್ಟು ಅರ್ಹರಲ್ಲ ಎಂದೂ ಕ್ರಿಕೆಟ್​ ಪ್ರೇಮಿಗಳು ದೂರಿದ್ದಾರೆ.

    ಆದರೆ ಅಜಾಮ್​ ಖಾನ್​ ಪರವಾಗಿ ಮಾತನಾಡುವವರ ಪ್ರಕಾರ, ಸದ್ಯ ಪಾಕಿಸ್ತಾನ ತಂಡಕ್ಕೆ ಮಧ್ಯಮ ಕ್ರಮಾಂಕದಲ್ಲಿ ಅಜಾಮ್​ ಖಾನ್​ ಅವರಂಥ ಸ್ಫೋಟಕ ಬ್ಯಾಟ್ಸ್​ಮನ್​ನ ಅಗತ್ಯವಿದೆ. ಪಾಕ್​ ತಂಡದ ಮಧ್ಯಮ ಕ್ರಮಾಂಕ ಈಗ ಕೇವಲ ಮೊಹಮದ್​ ರಿಜ್ವಾನ್​ ಮತ್ತು ನಾಯಕ ಬಾಬರ್​ ಅಜಮ್​ ಅವರನ್ನು ಮಾತ್ರ ಅವಲಂಭಿಸಿದೆ. ಅಜಾಮ್​ ಖಾನ್​ ಪಾಕಿಸ್ತಾನ ಸೂಪರ್​ ಲೀಗ್​ನಲ್ಲಿ ಭರ್ಜರಿ ಸಿಕ್ಸರ್​ಗಳನ್ನು ಸಿಡಿಸುವ ಮೂಲಕ ಸಾಕಷ್ಟು ಗಮನಸೆಳೆದಿದ್ದಾರೆ.

    ಆಯ್ಕೆಗಾಗಿ 30 ಕೆಜಿ ತೂಕ ಇಳಿಕೆ!
    ಅಜಾಮ್​ ಖಾನ್​ ಫಿಟ್ನೆಸ್​ ಬಗ್ಗೆ ಈ ಹಿಂದಿನಿಂದಲೂ ದೂರುಗಳಿದ್ದವು. ಹೀಗಾಗಿ ಕಳೆದ ವರ್ಷ 130 ಕೆಜಿಗೂ ಅಧಿಕ ಭಾರವಿದ್ದ ಅಜಾಮ್​ ಖಾನ್​ ಕಳೆದ 12 ತಿಂಗಳಲ್ಲಿ ಸುಮಾರು 30 ಕೆಜಿ ಇಳಿಸಿಕೊಂಡಿದ್ದಾರೆ. ಇದರ ಫಲವಾಗಿಯೇ ಇದೀಗ ಅವರಿಗೆ ರಾಷ್ಟ್ರೀಯ ತಂಡದಲ್ಲಿ ಅವಕಾಶ ನೀಡಲಾಗಿದೆ ಎನ್ನಲಾಗುತ್ತಿದೆ.

    VIDEO | ಹೀಲ್ಸ್​ ಚಪ್ಪಲಿ ಹಾಕಿಕೊಂಡು ಫುಟ್​ಬಾಲ್​ ಆಡಿದ ಹುಡುಗಿ, ವಿಡಿಯೋ ವೈರಲ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts