More

    ಕಂಡಕ್ಟರ್ 1 ರೂ. ಚಿಲ್ಲರೆ ನೀಡಿಲ್ಲ ಅಂತ ಕೋರ್ಟ್ ಮೊರೆ ಹೋಗಿದ್ದ ವ್ಯಕ್ತಿಗೆ ಸಿಕ್ಕಿತು 2000 ರೂ. ಪರಿಹಾರ!

    ಬೆಂಗಳೂರು: ರಮೇಶ್ ನಾಯಕ್ ಎಂಬುವವರು 2019ರಲ್ಲಿ ಶಾಂತಿನಗರದಿಂದ ಮೆಜೆಸ್ಟಿಕ್​ಗೆ 2019ರಲ್ಲಿ ಪ್ರಯಾಣ ಮಾಡುತ್ತಿದ್ದರು. ಈ ವೇಳೆ 30 ರೂಪಾಯಿ ನೀಡಿ 29 ರೂಪಾಯಿಯ ಟಿಕೆಟ್ ಖರೀದಿಸಿದ್ದರು. ಅದರಂತೆ ಕಂಡಕ್ಟರ್ 1 ರೂಪಾಯಿ ಚಿಲ್ಲರೆ ಹಣವನ್ನು ಹಿಂತಿರುಗಿಸಬೇಕಿತ್ತು. ಆದರೆ ಕಂಡಕ್ಟರ್ ಮಾತ್ರ ಚಿಲ್ಲರೆ ನೀಡದೆ ಸುಮ್ಮನಾಗಿದ್ದ.

    ಕಂಡಕ್ಟರ್ ಚಿಲ್ಲರೆ ನೀಡದ್ದರಿಂದ ರಮೇಶ್ ನಾಯಕ್ ಜಿಲ್ಲಾ ಗ್ರಾಹಕ ನ್ಯಾಯಾಲಯದ ಮೊರೆ ಹೋಗಿ 15,000 ರೂ. ಪರಿಹಾರ ಕೋರಿದ್ದರು. ಇದೀಗ ನ್ಯಾಯಾಲಯ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ 2000 ರೂ. ಪರಿಹಾರ ನೀಡುವಂತೆ ಆದೇಶ ನೀಡಿದೆ. ದೂರುದಾರರ ಕಾನೂನು ಶುಲ್ಕಕ್ಕೆ 1,000 ರೂ. ಪಾವತಿಸುವಂತೆ ನ್ಯಾಯಾಲಯವು ಸೂಚಿಸಿದೆ.

    ಇದನ್ನೂ ಓದಿ: VIDEO| ಠಾಣೆಯಲ್ಲೇ ಮಹಿಳಾ ಸಿಬ್ಬಂದಿಯ ಸೀಮಂತ ಕಾರ್ಯ ನೆರವೇರಿಸಿದ ನಾಗಮಂಗಲ ಟೌನ್ ಪೊಲೀಸರು

    ನ್ಯಾಯಾಲಯದ ಆದೇಶದ ಪ್ರಕಾರ ಬಸ್ಸಿನ ಕಂಡಕ್ಟರ್ ಪ್ರಯಾಣಿಕರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ. ಚಿಲ್ಲರೆ ನೀಡದೇ ಇರುವುದನ್ನು ಬಿಎಂಟಿಸಿಯ ಕಚೇರಿಗೆ ತಿಳಿಸಿದಾಗಲೂ ಬಾಕಿ ಮೊತ್ತವನ್ನು ನೀಡಲ್ಲ. ಇದು ಗ್ರಾಹಕರ ಹಕ್ಕಿನ ವಿಷಯವಾಗಿ ಮೆಚ್ಚುಗೆ ಹಾಗೂ ಮಾನ್ಯತೆಯನ್ನು ಪಡೆಯುತ್ತಿದೆ. ಅಂತಹ ಸಂದರ್ಭದಲ್ಲಿ ದೂರುದಾರರು ಪರಿಹಾರದ ಮರುಪಾವತಿಗೆ ಅರ್ಹರಾಗಿರುತ್ತಾರೆ ಎಂದು ನ್ಯಾಯಾಲಯ ಹೇಳಿದೆ ಅದೇಶದಲ್ಲಿ ಉಲ್ಲೇಖಿಸಿದೆ.

    ಚಿಲ್ಲರೆ ಮೊತ್ತವನ್ನು ನೀಡದೇ ಇದ್ದುದಕ್ಕಾಗಿ ದೂರುದಾರ 15,000 ರೂ. ಪರಿಹಾರದ ಮೊತ್ತ ಕೋರಿದ್ದರು. ಸದ್ಯ ನ್ಯಾಯಾಲಯ ನೀಡಿರುವ ಆದೇಶದಂತೆ 45 ದಿನಗಳ ಒಳಗಾಗಿ ಪರಿಹಾರ ಮೊತ್ತವನ್ನು ನೀಡದೇ ಹೋದಲ್ಲಿ ವಾರ್ಷಿಕ ರೂ 6,000 ರೂ. ಬಡ್ಡಿದರ ಅನ್ವಯಿಸಬಹುದು ಎಂದು ಸೂಚನೆ ನೀಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts