More

    ಅಯೋಧ್ಯೆಯಲ್ಲಿ ರಾಮಮಂದಿರ ಜತೆಗೆ ಶಿವಮಂದಿರವನ್ನೂ ನಿರ್ಮಿಸಲಿ; ರಂಭಾಪುರಿಶ್ರೀ ಮನವಿ

    ಹುಬ್ಬಳ್ಳಿ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಸಿದ್ಧತೆ ನಡೆಯುತ್ತಿದ್ದು, ಆ ಜಾಗದಲ್ಲಿ ರಾಮಮಂದಿರದ ಜತೆಗೆ ಶಿವಮಂದಿರವನ್ನೂ ನಿರ್ಮಾಣ ಮಾಡಬೇಕು ಎಂಬುದಾಗಿ ಬಾಳೆಹೊನ್ನೂರು ಶ್ರೀ ರಂಭಾಪುರಿ ವೀರಸೋಮೇಶ್ವರ ಜಗದ್ಗುರುಗಳು ಮನವಿ ಮಾಡಿಕೊಂಡಿದ್ದಾರೆ.
    ಅಯೋಧ್ಯೆಯ ರಾಮ ಜನ್ಮಭೂಮಿ ಸ್ಥಳದಲ್ಲೇ ಉತ್ಖನನದ ವೇಳೆ ಪ್ರಾಚೀನ ಶಿವಲಿಂಗ ದೊರೆತಿದೆ. ಅದೇ ಜಾಗದಲ್ಲಿ ಶಿವ ದೇವಾಲಯ ನಿರ್ಮಿಸಿ ಪ್ರತಿಷ್ಠಾಪಿಸಬೇಕು. ಶ್ರೀರಾಮ ಮಂದಿರ ನಿರ್ಮಾಣದ ಜತೆಗೆ ಏಕಕಾಲದಲ್ಲಿ ಈ ಕಾರ್ಯವೂ ಕೈಗೂಡಿದರೆ ಇಡೀ ರಾಷ್ಟ್ರದ ಜನತೆಗೆ ಸಂತೋಷವಾಗುತ್ತದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಎಲ್ಲದಕ್ಕೂ ಶಿವನೇ ಮೂಲ ಎಂಬ ನಂಬಿಕೆ ಭಾರತೀಯರಲ್ಲಿದೆ. ಶಿವಾಲಯ ನಿರ್ಮಾಣವಾದರೆ ಶಿವನ ಪಾರಮ್ಯ ಈ ನಾಡಿಗೆ, ರಾಷ್ಟ್ರಕ್ಕೆ ಇನ್ನೂ ಹೆಚ್ಚು ಮನವರಿಕೆ ಆಗಲು ಸಾಧ್ಯ. ಹಾಗಾಗಿ, ರಾಮ ಮಂದಿರದ ಜತೆಯಲ್ಲಿ ಶಿವ ದೇವಾಲಯ ಕೂಡ ನಿರ್ಮಾಣ ಆಗಬೇಕು. ಈಗಾಗಲೇ ಅಯೋಧ್ಯೆ ಸಮಿತಿಯವರಿಗೂ ಈ ಕುರಿತು ಲಿಖಿತವಾಗಿ ಮನವಿ ಕೂಡ ಕಳಿಸಿದ್ದೇವೆ ಎಂದು ಅವರು ಹೇಳಿದ್ದಾರೆ.

    ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯವನ್ನು ಒಮ್ಮನಸ್ಸಿನಿಂದ ಹಮ್ಮಿಕೊಂಡಿರುವುದು ಸಂತೋಷ ತಂದಿದೆ. ರಾಮ ಮಂದಿರ ನಿರ್ಮಾಣಕ್ಕಾಗಿ ರಂಭಾಪುರಿ ಪೀಠದಿಂದಲೂ ದೇಣಿಗೆ ಕೊಟ್ಟಿದ್ದೇವೆ. ರಾಮ ಮಂದಿರ ಎಂದೋ ನಿರ್ಮಾಣ ಆಗಬೇಕಿತ್ತು. ತಡವಾದರೂ ಚಿಂತೆ ಇಲ್ಲ, ಎಲ್ಲ ವಾದ- ವಿವಾದಗಳು ಪರಿಹಾರವಾಗಿವೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ಹಿಂದುತ್ವ, ಹಿಂದ, ಅಹಿಂದ ಎಲ್ಲ ದೊಂಬರಾಟ: ಎಲ್ರೂ ಸುಮ್ನೆ ರಾಜಕೀಯಕ್ಕೆ ಮಾತಾಡ್ತಾರೆ; ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ

    ವಿವಾದದಲ್ಲಿ ನಟ ಧೃವ ಸರ್ಜಾ ಅಭಿನಯದ ಪೊಗರು ಸಿನಿಮಾ: ನಿರ್ದೇಶಕ-ನಿರ್ಮಾಪಕರಿಂದ ಕ್ಷಮೆಯಾಚನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts