More

    ಮುಸ್ಲಿಂ ವಿರೋಧಿ ಹೇಳಿಕೆ; ಕ್ರಮ ಕೈಗೊಳ್ಳದಿದ್ದರೆ ಸಂಸತ್​ ಸ್ಥಾನ ತ್ಯಜಿಸುವೆ: ಡ್ಯಾನಿಶ್​ ಅಲಿ

    ನವದೆಹಲಿ: ಸಂಸತ್​ ಅಧಿವೇಶನದ ವೇಳೆ ತಮ್ಮ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿರುವ ಬಿಜೆಪಿ ಸದಸ್ಯ ರಮೇಶ್​ ಬಿಧೂರಿ ವಿರುದ್ಧ ಸ್ಪೀಕರ್​ ಕಠಿಣ ಕ್ರಮ ಜರುಗಿಸದಿದ್ದರೆ ಸಂಸದನ ಸ್ಥಾನಕ್ಕೆ ರಾಜೀನಾಮೆ ಕೊಡುವುದಾಗಿ ಬಿಎಸ್​ಪಿಯ ಡ್ಯಾನಿಶ್​ ಅಲಿ ಹೇಳಿದ್ದಾರೆ.

    ಚಂದ್ರಯಾನ-3ರ ಕುರಿತು ಸಂಸತ್​ ಅಧಿವೇಶನದಲ್ಲಿ ಚರ್ಚೆಯಾಗುತ್ತಿದ್ದ ವೇಳೆ ಮಾತನಾಡಿದ ಸಂಸದ ರಮೇಶ್​ ಬಿಧೂರಿ ಡ್ಯಾನಿಶ್​ ಅಲಿ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದರು.

    ಈ ಕುರಿತು ಪ್ರತಿಕ್ರಿಯಿಸಿರುವ ಡ್ಯಾನಿಶ್​ ಅಲಿ ಸಂಸದ ರಮೇಶ್​ ಬಿಧೂರಿ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಆಗ್ರಹಿಸಿ ಲೋಕಸಭೆ ಸ್ಪೀಕರ್​ ಓಂ ನಿರ್ಲಾ ಅವರಿಗೆ ಪತ್ರ ಬರೆದಿದ್ದೇನೆ. ಘಟನೆಗೆ ಸಂಬಂಧಿಸಿದಂತೆ ಅವರು ಕಠಿಣ ಕ್ರಮ ಕೈಗೊಳ್ಳುತ್ತಾರೆ ಎಂಬ ವಿಶ್ವಾಸ ನನಗಿದೆ. ಒಂದು ವೇಳೆ ಅವರು ಕ್ರಮಕೈಗೊಳ್ಳದಿದ್ದರೆ ನಾನು ಸಂಸತ್​ ಸದಸ್ಯತ್ವಕ್ಕೆ ರಾಜೀನಾಮೆ ಕೊಡುತ್ತೇನೆ.

    ಇದನ್ನೂ ಓದಿ: ಮೈಸೂರು ದಸರಾ ಅಂದರೆ ಕಾಂಗ್ರೆಸ್​ ಸರ್ಕಾರ ಮೂಗು ಮುರಿಯುವುದೇಕೆ: ಬಿಜೆಪಿ

    ಸಂಸದ ಬಿಧೂರಿ ಮಾತನಾಡುವ ವೇಳೆ ಬಳಸಿರುವ ಪದಗಳು ಇಡೀ ಮುಸ್ಲಿಂ ಸಮುದಾಯಕ್ಕೆ ಮಾಡಿದ ಅವಮಾನ. ಚುನಾಯಿತ ಜನಪ್ರತಿನಿಧಿಯಾದ ನನಗೆ ಈ ರೀತಿಯ ಪದಗಳನ್ನು ಬಳಸಿ ಮಾತನಾಡಿರುವುದು ಇದೇ ಮೊದಲು ಎಂದುಕೊಂಡಿದ್ದೇನೆ. ನನಗೆ ಈ ರೀತಿಯಾದರೆ ಇನ್ನೂ ಸಾಮಾನ್ಯ ಜನರ ಪರಿಸ್ಥಿತಿ ಏನು ಎಂದು ಪ್ರಶ್ನಿಸಿದ್ದಾರೆ.

    ಸಂಸತ್​ ಅಧಿವೇಶನದ ವೇಳೆ ನನಗೆ ಆ ರೀತಿಯ ಮಾತುಗಳನ್ನು ಕೇಳಿದ ಮೇಲೆ ರಾತ್ರಿಯೆಲ್ಲಾ ನಿದ್ದೆ ಬರಲಿಲ್ಲ. ಒಬ್ ಚುನಾಯಿತ ಜನಪ್ರತಿನಿಧಿಗೆ ಸಂಸತ್​ ಅಧಿವೇಶನದಲ್ಲಿ ಈ ರೀತಿಯಾಗಿರುವುದು ಇದೇ ಮೊದಲು ಎಂದು ಮಾತನಾಡುವ ವೇಳೆ ಭಾವುಕರಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts