More

    ಕಾಂಗ್ರೆಸ್ ಪ್ರಾಯೋಜಿತ ಪತ್ರಿಕಾ ಸಮೂಹದ ಆಸ್ತಿ ಮುಟ್ಟುಗೋಲು

    ನವದೆಹಲಿ: ಕಾಂಗ್ರೆಸ್ ಪಕ್ಷ ಪ್ರಾಯೋಜಿತ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್‌ನ (ಎಜೆಎಲ್) 16.38 ಕೋಟಿ ರೂಪಾಯಿ ಮೌಲ್ಯದ ಆಸ್ತಿಪಾಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಜಾರಿ ನಿರ್ದೇಶನಾಲಯ (ಇಡಿ) ಮುಂದಾಗಿದೆ.

    ಈ ಸಂಬಂಧ ಅದು ಶನಿವಾರ ತಾತ್ಕಾಲಿಕ ಆದೇಶ ಹೊರಡಿಸಿದೆ. ಎಜೆಎಲ್‌ಗೆ ಸೇರಿರುವ, ಮುಂಬೈನಲ್ಲಿರುವ ಒಂಬತ್ತು ಮಹಡಿಯ ಕಟ್ಟಡವನ್ನು ಇ.ಡಿ. ಮುಟ್ಟುಗೋಲು ಹಾಕಿಕೊಂಡಿದೆ.

    ಪಂಚಕುಲಾದಲ್ಲಿ ಎಜೆಎಲ್‌ಗೆ ನಿವೇಶನ ಮಂಜೂರು ಮಾಡುವಲ್ಲಿ ಅಕ್ರಮ ನಡೆದಿರುವ ಸಂಬಂಧ ಇ.ಡಿ. ಕಳೆದ ವರ್ಷ ಮೊದಲ ಆರೋಪಪಟ್ಟಿ ಸಲ್ಲಿಸಿತ್ತು. ಕಾಂಗ್ರೆಸ್‌ನ ಹಿರಿಯ ನಾಯಕರಾದ ಮೋತಿಲಾಲ್ ವೋರಾ ಮತ್ತು ಹರಿಯಾಣದ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾರನ್ನು ಈ ಪ್ರಕರಣದಲ್ಲಿ ಆರೋಪಿಗಳಾಗಿ ಹೆಸರಿಸಲಾಗಿತ್ತು. ವೋರಾ ಎಜೆಎಲ್‌ನ ಉಪಾಧ್ಯಕ್ಷ ಹಾಗೂ ಆಡಳಿತ ನಿರ್ದೇಶಕರಾಗಿದ್ದಾರೆ.

    ಇದನ್ನೂ ಓದಿ: ಜಮೀರ್ ರೇಷನ್ ಹಂಚಿಕೆ ವೇಳೆ ಜನಜಾತ್ರೆ; ಮಾಸ್ಕು, ದೈಹಿಕ ಅಂತರ ಮಸುಕು

    ಅಕ್ರಮ ಹಣ ವರ್ಗಾವಣೆ ನಿಷೇಧ ಕಾನೂನು (ಪಿಎಂಎಲ್‌ಎ) ಅನ್ವಯ 2019ರ ಆಗಸ್ಟ್‌ನಲ್ಲಿ ಚಂಡಿಗಢ ಸಮೀಪದ ಪಂಚಕುಲಾದಲ್ಲಿ ವಿಶೇಷ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗಿತ್ತು.

    ಮುಖ್ಯಮಂತ್ರಿಯಾಗಿದ್ದ ಹೂಡಾ ಅಧಿಕಾರ ದುರುಪಯೋಗಿಸಿಕೊಂಡು ಎಜೆಎಲ್‌ಗೆ ಜಮೀನು ಮಂಜೂರು ಮಾಡಿದ್ದರು. ಮಂಜೂರಾದ ಜಾಗದಲ್ಲಿ ಕಟ್ಟಡ ನಿರ್ಮಾಣದ ಅವಧಿಯನ್ನು ಕೂಡ ಕಾನೂನುಬಾಹಿರವಾಗಿ ಮೂರು ಬಾರಿ ವಿಸ್ತರಣೆ ಮಾಡಲಾಗಿದೆ ಎಂದೂ ಇ.ಡಿ. ಆರೋಪಿಸಿದೆ.

    VIDEO|‘ಬೆಲ್​ ಬಾಟಂ’ ಚಿತ್ರದ ಈ ಕಳ್ಳ ವಿಡಿಯೋವನ್ನು ನೀವು ನೋಡಿರಲು ಸಾಧ್ಯವೇ ಇಲ್ಲ!!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts