More

    ಮತದಾರರ ಮಾಹಿತಿ ಕಳವು ಪ್ರಕರಣದಲ್ಲಿ ಮುಖ್ಯಮಂತ್ರಿಯೇ ಕಿಂಗ್​ಪಿನ್​, ನ್ಯಾಯಾಂಗ ತನಿಖೆ ಆಗಲಿ: ಕಾಂಗ್ರೆಸ್​ ಪಟ್ಟು

    ಬೆಂಗಳೂರು: ಮತದಾರರ ಮಾಹಿತಿ ಕಳವು ಪ್ರಕರಣದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಕಿಂಗ್​ಪಿನ್​ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ.

    ಶನಿವಾರ ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಕೆಶಿ ಮತ್ತು ಸಿದ್ದರಾಮಯ್ಯ, ನಾವು ಕೊಟ್ಟ ದೂರಿನ ಆಧಾರದಲ್ಲಿ ಇಬ್ಬರು ಐಎಎಸ್​ ಅಧಿಕಾರಿಗಳನ್ನು ಚುನಾವಣಾ ಆಯೋಗ ಅಮಾನತು ಮಾಡಿದೆ. ಪ್ರಕರಣದಲ್ಲಿ ಸತ್ಯಾಂಶ ಇಲ್ಲದಿದ್ದರೆ ಸುಮ್ಮನೆ ಅಮಾನತು ಮಾಡುತ್ತಿತ್ತೇ? ಮತದಾರರ ಮಾಹಿತಿ ಕಳವು ಪ್ರಕರಣದ ಕಿಂಗ್​ಪಿನ್​ ಸಿಎಂ. ಹಾಗಾಗಿ ಮುಖ್ಯ ನ್ಯಾಯಾಧೀಶರ ನೇತೃತ್ವದಲ್ಲಿಯೇ ತನಿಖೆ ನಡೆಯಬೇಕು ಎಂದು ಆಗ್ರಹಿಸಿದರು. ಪ್ರಾದೇಶಿಕ ಆಯುಕ್ತರು ಮುಖ್ಯಮಂತ್ರಿ ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತರ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವೇ ಎಂದು ಪ್ರಶ್ನಿಸಿದರು.

    ಬಿಜೆಪಿ ಮುಖಂಡರು ನಮ್ಮ ಸರ್ಕಾರದ ಅವಧಿಯಲ್ಲಿಯೂ ಆಗಿದೆ ಎಂಬ ಆರೋಪ ಮಾಡುತ್ತಿದ್ದಾರೆ. ಆ ನಂತರ 2018 ಮತ್ತು 2019ರಲ್ಲಿ ಚುನಾವಣೆ ನಡೆದಿದೆ. ನಮ್ಮ ಕಾಲದ್ದನ್ನೂ ಸೇರಿಸಿಯೇ ನ್ಯಾಯಾಂಗ ತನಿಖೆ ಮಾಡಿ ಎಂದು ಸಿದ್ದರಾಮಯ್ಯ ಸವಾಲು ಹಾಕಿದರು.

    ಅಮಾನತು ಮಾಡಿದ್ದರಿಂದ ನಾವು ಚುನಾವಣಾ ಆಯೋಗವನ್ನು ಅಭಿನಂದಿಸುತ್ತೇವೆ. ಆದರೆ ಮೂರು ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಮಾತ್ರ ಕ್ರಮಕೈಗೊಂಡಿದ್ದಾರೆ. ಎಲ್ಲ 28 ಕ್ಷೇತ್ರಗಳಲ್ಲಿಯೂ ಮರು ಪರಿಕ್ಷರಣೆ ಆಗಬೇಕು ಮತ್ತು ಅಧಿಕಾರಿಗಳ ವಿರುದ್ಧ ಕ್ರಮ ಆಗಬೇಕು ಎಂದು ಒತ್ತಾಯಿಸಿದರು.

    ಬಿಬಿಎಂಪಿ ಆಯುಕ್ತರ ಕೈ ಕೆಳಗಿನ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಈ ಹಗರಣ ಬಿಬಿಎಂಪಿ ಕಮೀಷನರ್​ಗೆ ಗೊತ್ತಾಗದೇ ಇದನ್ನು ಮಾಡಲು ಸಾಧ್ಯವಾಗುತ್ತದೆಯಾ? ಬೆಂಗಳೂರಿನ ಉಸ್ತುವಾರಿ ಹೊಣೆ ಹೊತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೂ ಗೊತ್ತಿರಲೇಬೇಕು ಅಲ್ಲವೇ? ಆದ್ದರಿಂದಲೇ ಮುಖ್ಯಮಂತ್ರಿ ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

    ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ ಮಾತನಾಡಿ, ವೋಟು ಕಳ್ಳತನ ಕೂಡ ನೋಟು ಪ್ರಿಂಟ್​ ಮಾಡುವಷ್ಟೇ ದೊಡ್ಡ ಅಪರಾಧ. ಆದ್ದರಿಂದ ಇಂತಹ ಕೆಲಸ ಮಾಡಿದವರ ವಿರುದ್ಧ ಕ್ರಮ ಆಗಬೇಕು. ಇಡೀ ಪ್ರಕರಣದ ಬಗ್ಗೆ ನ್ಯಾಯಾಂಗ ತನಿಖೆ ಆಗಬೇಕು ಎಂದು ಒತ್ತಾಯಿಸಿದರು. ಈ ಪ್ರಕರಣದಲ್ಲಿ ಶಾಸಕರು, ಸಚಿವರು ಭಾಗಿಯಾಗಿರುವ ಕಾರಣ ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

    6 ಸಾವಿರ ಫಿಕ್ಸ್​, ಹಣ ತಗೋಳೋದ್ರಲ್ಲಿ ನಾವು ಭೇದಭಾವ ಮಾಡಲ್ಲ: ಬಿಡದಿಯಲ್ಲಿ ವೈದ್ಯೆಯರ ಹಣದಾಹದ ವಿಡಿಯೋ ವೈರಲ್​

    ಡೀಸೆಲ್​ ಖಾಲಿಯಾಗಿ ರಸ್ತೆಯಲ್ಲೇ ನಿಂತ ಆಂಬುಲೆನ್ಸ್​ ಅನ್ನು ತಳ್ಳಿಕೊಂಡೇ ಹೋದ ಮಗಳು-ಅಳಿಯ! ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗದೆ ಅಪ್ಪ ಸಾವು

    ನಾನು ಮದ್ವೆ ಆಗ್ಬೇಕು, ಪ್ಲೀಸ್​ ಹೆಣ್ಣು ಹುಡುಕಿ ಕೊಡಿ ಸಾರ್… ಶಿವಮೊಗ್ಗ ಎಸ್ಪಿಗೆ ಜಾತಕ ಕೊಟ್ಟು ಅರ್ಜಿ ಸಲ್ಲಿಸಿದ ಯುವಕ!

    fe

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts