More

    ರಾಜ್ಯಸಭೆ ಚುನಾವಣೆಯಲ್ಲಿ ಮತ ಚಲಾಯಿಸಲು 35 ಕೋಟಿ ರೂ. ಆಫರ್​..!

    ನವದೆಹಲಿ: ಪಕ್ಷಕ್ಕೆ ಆರ್ಥಿಕ ಮೂಲವಾಗುವವರನ್ನು ರಾಜ್ಯಸಭೆ ಕಳುಹಿಸುವ ಪರಿಪಾಠ ಹೊಸದೇನಲ್ಲ. ಈ ವೇಳೆ ಪ್ರತಿ ಮತವೂ ಅಮೂಲ್ಯ. ಇದನ್ನು ಗಿಟ್ಟಿಸಲು ಅಭ್ಯರ್ಥಿ ಇನ್ನಿಲ್ಲದ ಪ್ರಯತ್ನ ನಡೆಸುತ್ತಾರೆ. ಕುದುರೆ ವ್ಯಾಪಾರ ಎಂಬ ಹೆಸರಿನಲ್ಲಿ ಶಾಸಕರ ಖರೀದಿ ನಡೆಯೋದೆ ಹೀಗೆ…!

    ಇನ್ನೊಂದು ಕಡೆ ಅಧಿಕಾರಕ್ಕಾಗಿಯೂ ಇಂಥದ್ದೇ ಮತ ಗಳಿಕೆ ಅಥವಾ ಖರೀದಿಗೂ ಮುಂದಾಗುತ್ತಾರೆ. ಇತ್ತೀಚೆಗೆ ನಡೆದ ರಾಜ್ಯಸಭೆಯಲ್ಲಿ ಮತ ಚಲಾಯಿಸಲು 35 ಕೋಟಿ ರೂ. ಆಫರ್​ ಮಾಡಲಾಗಿತ್ತು ಎಂದು ಕಾಂಗ್ರೆಸ್​ ಶಾಸಕರೊಬ್ಬರು ಆರೋಪಿಸಿದ್ದಾರೆ.

    ರಾಜಸ್ಥಾನದ ಕಾಂಗ್ರೆಸ್​ ಶಾಸಕ ಗಿರಿರಾಜ್​ ಸಿಂಗ್​ ಮಾಲಿಂಗ ಇಂಥದ್ದೊಂದು ಆರೋಪ ಮಾಡಿದ್ದಾರೆ. ಬಿಜೆಪಿ ಪರ ಮತ ಚಲಾಯಿಸಲು ಸ್ವತಃ ಸಚಿನ್​ ಪೈಲಟ್​ ಇಂಥದ್ದೊಂದು ಆಫರ್​ ನೀಡಿದ್ದರು. ಆದರೆ, ಇದಕ್ಕೆ ನಿರಾಕರಿಸಿದೆ. ಈ ವಿಷಯವನ್ನು ಸಿಎಂ ಅಶೋಕ್​ ಗೆಹ್ಲೋಟ್​ ಅವರ ಗಮನಕ್ಕೆ ತಂದಿದ್ದಾಗಿ ಅವರು ಹೇಳಿಕೆ ನೀಡಿದ್ದಾರೆ.

    ಇದನ್ನೂ ಓದಿ; ಮ್ಯಾಟ್ರಿಮೊನಿ ಸೈಟ್​ಗಳೇ ಈತನಿಗೆ ಆದಾಯ ಮೂಲ; ಪೊಲೀಸ್​ ಬಲೆಗೆ ಬಿದ್ದವನದ್ದು ಭಯಂಕರ ಇತಿಹಾಸ 

    ಡಿಸೆಂಬರ್​ನಲ್ಲೂ ಇಂಥದ್ದೇ ಘಟನೆ ನಡೆದಿತ್ತು ಹಾಗೂ ಕಳೆದ ರಾಜ್ಯಸಭೆ ಚುನಾವಣೆ ವೇಳೆಯೂ ಮತ್ತೆ ನನ್ನ ಮನೆಯಲ್ಲೇ ಆಫರ್​ ನೀಡಿದ್ದರು ಎಂದು ತಿಳಿಸಿದ್ದಾರೆ.

    ಬಿಎಸ್​ಪಿಯಿಂದ ಆಯ್ಕೆಯಾಗಿ ಬಳಿಕ ಕಾಂಗ್ರೆಸ್​ನೊಂದಿಗೆ ಗಿರಿರಾಜ್​ ಸೇರಿ ಆರು ಶಾಸಕರು ಕಳೆದ ಸೆಪ್ಟಂಬರ್​ನಲ್ಲಿ ವಿಲೀನಗೊಂಡಿದ್ದರು. ಆದರೆ, ಈ ಆರೋಪಗಳನ್ನು ಸಚಿನ್​ ಪೈಲಟ್​ ನಿರಾಕರಿಸಿದ್ದು, ಇದರಿಂದ ಬೇಸರವಾಗಿದೆ ಎಂದು ಹೇಳಿದ್ದಾರೆ.

    ಸುಶಾಂತ್​ ಸಿಂಗ್​ ಆತ್ಮಹತ್ಯೆ ತನಿಖೆಗೆ ರೋಚಕ ತಿರುವು; ನಟನ ಖಾತೆಯಲ್ಲಿದ್ದ ಹಣ ಖರ್ಚು ಮಾಡುತ್ತಿದ್ದುದು ಯಾರು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts