More

    ಮ್ಯಾಟ್ರಿಮೊನಿ ಸೈಟ್​ಗಳೇ ಈತನಿಗೆ ಆದಾಯ ಮೂಲ; ಹುಡುಗಿಯರಿಗೆ ವಂಚಿಸೋದೇ ಖಯಾಲಿ

    ಬೆಂಗಳೂರು: ಮೂರು ವೋಟರ್​ ಐಡಿ, ಮೂರು ಪಾನ್​ ಕಾರ್ಡ್​, 22 ಎಟಿಎಂ ಕಾರ್ಡ್​, 25 ಸಿಮ್​ ಕಾರ್ಡ್​ಗಳು… ಇಷ್ಟೆಲ್ಲ ಇದೆ ಎಂದ ಮೇಲೆ ಇವನೆಂಥ ಆಸಾಮಿ ಅನ್ನೋದು ಗೊತ್ತಾಗಿರಬೇಕಲ್ಲ.

    ನೋಡೊಕೆ ಸ್ಫುರದ್ರೂಪಿ, ಐಷಾರಾಮಿತನಕ್ಕೆ ಜತೆಗೊಂದು ಕಾರು… ಇನ್ನೇನೂ ಬೇಕು. ಈತನ ಬಣ್ಣದ ಮಾತುಗಳಿಗೆ ಬೇಸ್ತು ಬಿದ್ದ ಹಣ ಕಳೆದುಕೊಂಡವರು ಒಬ್ಬಿಬ್ಬರಲ್ಲ..!

    ಅಷ್ಟಕ್ಕೂ ಈತ ಮಾಡುತ್ತಿದ್ದ ಕೆಲಸವೇನು ಗೊತ್ತಾ ಮ್ಯಾಟ್ರಿಮೋನಿ ಸೈಟ್​ಗಳಲ್ಲಿ ಪ್ರೊಪೈಲ್​ ಹಾಕಿಕೊಂಡು ಮದುವೆಯಾಗುವುದಾಗಿ ಹೇಳಿ ಹೆಣ್ಣುಮಕ್ಕಳಿಗೆ ವಂಚಿಸೋದು. ಈತನ ಹೆಸರು ರಮೇಶ್​ ಸಜ್ಜನ್​. 34 ವರ್ಷದ ಈತ ಬೆಂಗಳೂರಿನ ಬನಶಂಕರಿಯ ಯುವತಿಯನ್ನು ಮದುವೆಯಾಗಿ ಹೇಳಿ ವಂಚಿಸಿದ್ದು ಬರೋಬ್ಬರಿ 7 ಲಕ್ಷ ರೂ. ಅತ್ತ ಮದುವೆಯೂ ಆಗದೆ, ಇತ್ತ ಹಣವೂ ಹಿಂದಿರುಗಿಸದ ಕಾರಣ ಯುವತಿ ಪೊಲೀಸರಿಗೆ ದೂರು ನೀಡಿದ್ದಳು.

    ಇದನ್ನೂ ಓದಿ; ಸೆಪ್ಟಂಬರ್​ನಲ್ಲಿ ಶುರುವಾಗುತ್ತಾ ಶಾಲೆ; ಸಚಿವ ಸುರೇಶ್‌ಕುಮಾರ್ ಹೇಳಿದ್ದೇನು? 

    ಈತನ ಬೆನ್ನತ್ತಿದ್ದ ಪೊಲೀಸರಿಗೆ ಸೆರೆ ಸಿಕ್ಕಾಗ ಅಸಲಿ ಬಂಡವಾಳವೆಲ್ಲ ಬಯಲಾಗಿದೆ. ಮೂಲತಃ ವಿಜಯಪುರ ಜಿಲ್ಲೆ, ದೇವರ ಹಿಪ್ಪರಿಗಿಯ ಪಾಲವಾಳ ಗ್ರಾಮದವನು. ಬಿ.ಎ. ವರೆಗೆ ಓದಿರುವ ಈತ ಒಂಬತ್ತು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡಿಕೊಂಡಿದ್ದ. ದಿಢೀರ್​ ಶ್ರೀಮಂತನಾಗುವ ಆಸೆಗೆ ಅಡ್ಡದಾರಿ ಹಿಡಿದಿದ್ದ.

    ಸದ್ಯ ಹಾಸನದ ಶಂಕರಿಪುರಂನಲ್ಲಿ ನೆಲೆಸಿರುವ ರಮೇಶ್​ ಮ್ಯಾಟ್ರಿಮೋನಿ ಸೈಟ್​ಗಳಲ್ಲಿ ಖಾತೆ ತೆರೆದು ವಿವಾಹಾಕಾಂಕ್ಷಿಗಳ ನಂಬರ್​ ಪಡೆಯುತ್ತಿದ್ದ. ಅವರ ಸ್ನೇಹ ಬೆಳೆಸಿ ಹಣ ಪಡೆಯುತ್ತಿದ್ದ ಈವರೆಗೆ ಹಲವರಿಗೆ 25 ಲಕ್ಷ ರೂ.ಗಳಿಗೆ ಹೆಚ್ಚು ವಂಚಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಇದನ್ನೂ ಓದಿ; ವರ್ಷಾಂತ್ಯವರೆಗೆ ಶಾಲಾ- ಕಾಲೇಜು ಆರಂಭ ಅನುಮಾನ…? ಆನ್​​ಲೈನ್​ ಕ್ಲಾಸ್​ಗಳೇ ಅನಿವಾರ್ಯ 

    ಎಂಥ ಚಾಣಾಕ್ಷ ಎಂದರೆ, ಮೂರು ವೋಟರ್​ ಐಡಿ ಮಾಡಿಸಿಕೊಂಡಿದ್ದ. ಮೂರು ಪ್ಯಾನ್​ ಕಾರ್ಡ್​ ಹೊಂದಿದ್ದ. ಈತನ ಬಳಿ ಸಿಕ್ಕ ಸಿಮ್​ಗಳ ಸಂಖ್ಯೆ 25ಕ್ಕೂ ಅಧಿಕ. ಇನ್ನೂ 22ಕ್ಕೂ ಎಚ್ಚು ಎಟಿಎಂಗಳು ಇವನ ಬಳಿಯಿವೆ. ಇವನ ಬಳಿದ್ದ ಮಾರುತಿ ಬ್ರಿಜಾ ಕಾರು, ಸ್ಮಾರ್ಟ್​ಫೋನ್​ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ವಂಚನೆಗೊಳಗಾದವರನ್ನು ಪೊಲೀಸರೀಗ ಹುಡುಕುತ್ತಿದ್ದಾರೆ.

    ಸುಶಾಂತ್​ ಸಿಂಗ್​ ಆತ್ಮಹತ್ಯೆ ತನಿಖೆಗೆ ರೋಚಕ ತಿರುವು; ನಟನ ಖಾತೆಯಲ್ಲಿದ್ದ ಹಣ ಖರ್ಚು ಮಾಡುತ್ತಿದ್ದುದು ಯಾರು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts