More

    ಒಂದು ದೇಶ, ಒಂದು ಚುನಾವಣೆ ಒಳ್ಳೆಯದೇ ಎಂದ ಕರ್ನಾಟಕದ ಕಾಂಗ್ರೆಸ್ ಶಾಸಕ

    ವಿಜಯನಗರ: ಇದೀಗ ದೇಶದ ಹೆಸರನ್ನು ಅಧಿಕೃತವಾಗಿ ‘ಇಂಡಿಯಾ’ ಎಂದು ಕರೆಯದೇ ‘ಭಾರತ’ ಎಂದು ಬದಲಾಯಿಸುವ ವಿಚಾರವಾಗಿ ವಿವಾದ ನಡೆಯುತ್ತಿದೆ. ಅದರೊಂದಿಗೆ ಒಂದು ದೇಶ ಒಂದು ಚುನಾವಣೆ ಎಂಬ ಪರಿಕಲ್ಪನೆಯನ್ನು ಪ್ರಧಾನಿ ಮೋದಿ ಮುಂದಿಟ್ಟಿದ್ದು ಸಂಬಂಧಪಟ್ಟ ಸಮಿತಿಯನ್ನೂ ರಚಿಸಲಾಗಿದೆ. ಈ ಕುರಿತಾಗಿಯೂ ಪ್ರತಿಪಕ್ಷಗಳು ಕೇಂದ್ರ ಸರ್ಕಾರವನ್ನು ಟೀಕೆ ಮಾಡಿದ್ದವು. ಇದೀಗ ಆಶ್ಚರ್ಯ ಎನ್ನುವಂತೆ ಕರ್ನಾಟಕದ ಕಾಂಗ್ರೆಸ್ ಶಾಸಕರೊಬ್ಬರು ಒಂದು ದೇಶ ಒಂದು ಚುನಾವಣೆಯ ಬಗ್ಗೆ ಧನಾತ್ಮಕ ಮಾತುಗಳನ್ನು ಆಡಿದ್ದಾರೆ.

    ಈ ಕುರಿತಾಗಿ ವಿಜಯನಗರದ ಕಾಂಗ್ರೆಸ್ ಶಾಸಕ ಎಚ್.ಆರ್. ಗವಿಯಪ್ಪ ಹೇಳಿಕೆ ನೀಡಿದ್ದು ದೇಶದ ಹೆಸರು ಬದಲಾವಣೆ ಹಾಗೂ ಒಂದು ದೇಶ ಒಂದು ಚುನಾವಣೆ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಗವಿಯಪ್ಪ “ರಿಪಬ್ಲಿಕ್ ಆಫ್ ಇಂಡಿಯಾ ಬದಲು ಭಾರತ್ ಎಂದು ಬಳಕೆ ಮಾಡಿದ್ದಾರೆ. ನೋಡೋಣ. ಅದನ್ನು ಮುಂದೆ ನಮ್ಮ ನಾಯಕರ ಜತೆ ಚರ್ಚೆ ಮಾಡಿಕೊಂಡು ಮಾಡಬೇಕು ಎಂದು ನಿರ್ಧಾರ ಮಾಡುತ್ತೇವೆ” ಎಂದಿದ್ದಾರೆ. ಇದೇ ವೇಳೆ ಸುದ್ದಿಗಾರರು ಒಂದು ದೇಶ ಒಂದು ಚುನಾವಣೆ ಬಗ್ಗೆ ಪ್ರಶ್ನೆ ಮಾಡಿದ್ದು, ಆ ಸಂದರ್ಭದಲ್ಲಿ ತಮ್ಮ ಮನದ ಮಾತನ್ನು ಶಾಸಕರು ಹಂಚಿಕೊಂಡಿದ್ದಾರೆ.

    “ಒಂದು ದೇಶ ಒಂದು ಚುನಾವಣೆ ಅದು ಒಳ್ಳೆಯ ವಿಚಾರವೇ. ನನ್ನ ವೈಯುಕ್ತಿಕ ವಿಚಾರದಲ್ಲಿ ಒಳ್ಳೆಯದು. ಹಣ ಉಳಿಯುತ್ತದೆ. ಅದರ ಜತೆಗೆ ಸಮಯವೂ ಉಳಿಯುತ್ತದೆ. ನನ್ನ ವೈಯುಕ್ತಿಕ ಅಭಿಪ್ರಾಯವನ್ನು ನಾನು ಹೇಳಿದ್ದೇನೆ. ಪಕ್ಷ ಏನು ತೀರ್ಮಾನ ಮಾಡುತ್ತದೆಯೋ ಅದಕ್ಕೆ ನಾವು ಬದ್ಧರಾಗಿರುತ್ತೇವೆ” ಎಂದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts