More

    ಲೋಕಸಭೆ ಚುನಾವಣೆಯ ಹೊಸ್ತಿಲಲ್ಲಿ ಕಾಂಗ್ರೆಸ್​ಗೆ ಆಘಾತ; ಕೈ ತೊರೆದು ಕಮಲ ಮುಡಿದ ಹಾಲಿ ಶಾಸಕ

    ಭೋಪಾಲ್: ಲೋಕಸಭೆ ಚುನಾವಣೆಯ ಹೊಸ್ತಿಲಲ್ಲಿ ಕಾಂಗ್ರೆಸ್​ಗೆ ದೊಡ್ಡ ಶಾಕ್​ ಒಂದು ಎದುರಾಗಿದ್ದು, ಮಹತ್ವದ ಬೆಳವಣಿಗೆಯಲ್ಲಿ ಕಾಂಗ್ರೆಸ್​ನ ಹಾಲಿ ಶಾಸಕ ಪಕ್ಷ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದಾರೆ.

    ಮಾಜಿ ಮುಖ್ಯಮಂತ್ರಿ ಕಮಲನಾಥ್‌ ಅವರ ಭದ್ರಕೋಟೆ ಛಿಂದ್ವಾರ ಲೋಕಸಭೆ ಕ್ಷೇತ್ರದ ವ್ಯಾಪ್ತಿಗೆ ಬರುವ ಅಮರವಾಡ ವಿಧಾನಸಭಾ ಕ್ಷೇತ್ರದ ಶಾಸಕ ಕಾಮೇಶ್‌ ಷಾ ಕಾಂಗ್ರೆಸ್​ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದಾರೆ.

    Kamesh Shah

    ಇದನ್ನೂ ಓದಿ: ಪೆಟ್ರೋಲ್​-ಡೀಸೆಲ್​ ದರದಲ್ಲಿ ಅಲ್ಪ ವ್ಯತ್ಯಾಸ; ಯಾವ ರಾಜ್ಯದಲ್ಲಿ ದರ ಎಷ್ಟಿದೆ?

    ಬಿಜೆಪಿ ಸೇರ್ಪಡೆ ಬಳಿಕ ಮಾತನಾಡಿದ ಕಾಮೇಶ್, ಕಮಲನಾಥ್‌ ಅವರ ಕುಟುಂಬ ರಾಜಕಾರಣ ಮತ್ತು ಅಹಂಕಾರದ ವರ್ತನೆಯಿಂದ ಬೇಸತ್ತು ಬಿಜೆಪಿ ಸೇರಿರುವುದಾಗಿ ಹೇಳಿರುವ ಶಾ, ಇಡೀ ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವರ್ಚಸ್ಸಿನ ಪ್ರಭಾವ ಇದೆ ಎಂದು ಹೇಳಿದ್ದಾರೆ.

    ಈ ಕುರಿತು ಮಾತನಾಡಿರುವ ಮುಖ್ಯಮಂತ್ರಿ ಮೋಹನ್​ ಯಾದವ್​, ಕಾಮೇಶ್ ಷಾ ಅವರ ಸೇರ್ಪಡೆಯಿಂದ ಛಿಂದ್ವಾರಾ ವ್ಯಾಪ್ತಿಯಲ್ಲಿ ಪಕ್ಷ ಮತ್ತಷ್ಟು ಬಲಗೊಂಡಿದ್ದು, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಇದು ನಮಗೆ ಸಹಕಾರಿಯಾಗಲಿದೆ. ರಾಜ್ಯದ 29 ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ಪರ ವಾತಾವರಣವಿದ್ದು, ಬಿಜೆಪಿಯ ಗೆಲುವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts