More

    Rajasthan Elections 2023: ನನ್ನ ಮೇಲಿರುವ ಈ ಆರೋಪಗಳು ನಿಜವೆಂದು ಸಾಬೀತಾದರೆ…; ಕಣ್ಣೀರಿಟ್ಟ ಶಾಸಕ

    ರಾಜಸ್ಥಾನ: ರಾಜಸ್ಥಾನದ ರಾಜ್ಯಾಧ್ಯಕ್ಷ ಗೋವಿಂದ್ ಸಿಂಗ್ ದೋತಸ್ರಾ ಸೇರಿದಂತೆ ಕೆಲವು ಕಾಂಗ್ರೆಸ್ ನಾಯಕರ ನಿವಾಸಗಳ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ಗುರುವಾರ ದಾಳಿ ನಡೆಸಿದೆ. ಮಹ್ವಾದಲ್ಲಿರುವ ಕಾಂಗ್ರೆಸ್ ಶಾಸಕ ಓಂ ಪ್ರಕಾಶ್ ಹುಡ್ಲಾ ಅವರ ನಿವಾಸದಲ್ಲೂ ಇಡಿ ಶೋಧ ನಡೆಸಿದ್ದು, ಈ ವೇಳೆ ತಮ್ಮ ತಾಯಿ ಮುಂದೆ ನಿಂತು ಪ್ರಕಾಶ್​ ಕಣ್ಣೀರಾಕಿದ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದೆ.

    ಇದನ್ನೂ ಓದಿ: ಕೃಷಿ ಪಂಪ್‌ಸೆಟ್‌ಗೆ 10 ಗಂಟೆ ವಿದ್ಯುತ್ ಪೂರೈಸಿ; ಭಾರತೀಯ ಕಿಸಾನ್ ಸಂಘ ಆಗ್ರಹ

    ದೃಶ್ಯದಲ್ಲಿ ಓಂ ಪ್ರಕಾಶ್ ಹುಡ್ಲಾ ತಮ್ಮ ತಾಯಿಯ ಬಳಿ ದುಃಖದಲ್ಲಿ ನಿಂತಿದ್ದು, ಅವರನ್ನು ಅಪ್ಪಿಕೊಂಡು ಕಣ್ಣೀರಿಡುತ್ತಿರುವುದನ್ನು ಕಾಣಬಹುದು. ಅಳುತ್ತಲೇ ತನ್ನ ತಾಯಿ ಸಿಂಹಿಣಿ, ಅವರು ಜನ್ಮ ನೀಡಿರುವುದು ಸಿಂಹಕ್ಕೆ ಎಂದು ಹೇಳುವುದು ಕಂಡುಬಂದಿದೆ.

    ಈ ವೇಳೆ ಅಳುತ್ತಲೇ ನನ್ನ ತಾಯಿಯಿಂದ ಆಶೀರ್ವಾದ ತೆಗೆದುಕೊಳ್ಳುತ್ತಿದ್ದೇನೆ. ನೀವು ನನಗೆ ಸಾವು ಅಥವಾ ಮತ ಯಾವುದನ್ನು ಬೇಕಾದರೂ ನೀಡಬಹುದು ಎಂದು ತಮ್ಮ ಮತದಾರರಿಗೆ ಹೇಳಿದರು.

    ಇದನ್ನೂ ಓದಿ: ‘ಅನಿಮಲ್’ ಎರಡನೇ ಸಾಂಗ್ ರಿಲೀಸ್; ರಶ್ಮಿಕಾ ಪಾದಗಳನ್ನು ಮುಟ್ಟಿದ ರಣಬೀರ್, ಹೇಗಿದೆ ನೋಡಿ ಹೊಸ ಹಾಡು…

    ಬಿಜೆಪಿ ನಾಯಕ ಮೀನಾ ತನ್ನ ವಿರುದ್ಧ ಪಿತೂರಿ ನಡೆಸಿದ್ದಾರೆ ಎಂದು ಹುಡ್ಲಾ ಆರೋಪಿಸಿದ್ದಾರೆ. ಇಡಿ ತನಿಖೆಗೆಂದು ಶಾಸಕ ಹೋಟೆಲ್‌ನಿಂದ ಹೊರಬಂದ ಕೂಡಲೇ, ಬಿಜೆಪಿ ನಾಯಕ ಕಿರೋರಿ ಲಾಲ್ ಮೀನಾ ನಾನು REET ಪರೀಕ್ಷೆಯಲ್ಲಿ ಹಣ ಪಡೆದಿದ್ದಾರೆ ಎಂದು ಆರೋಪಿಸಿ ತಮ್ಮ ವಿರುದ್ಧ ಸಂಚು ಹೂಡಿದ್ದಾರೆ ಎಂದು ಹೇಳಿದರು.

    “ನನ್ನ ಮೇಲಿರುವ ಈ ಆರೋಪಗಳು ನಿಜವೆಂದು ಸಾಬೀತಾದರೆ, ಅದೇ ದಿನ ನಾನು ನನ್ನ ಪ್ರಾಣವನ್ನು ಕಳೆದುಕೊಳ್ಳುತ್ತೇನೆ” ಎಂದು ಹುಡ್ಲಾ ಹೇಳಿದ್ದಾರೆ,(ಏಜೆನ್ಸೀಸ್).

    ದೇಶದಲ್ಲಿ ನಾಯಿಗಳಿಗಿಂತಲೂ ಹೆಚ್ಚಾಗಿ ಜಾರಿ ನಿರ್ದೇಶನಾಲಯ…: ಸಿಎಂ ಅಶೋಕ್ ಗೆಹ್ಲೋಟ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts