More

    ಕೃಷಿ ಪಂಪ್‌ಸೆಟ್‌ಗೆ 10 ಗಂಟೆ ವಿದ್ಯುತ್ ಪೂರೈಸಿ; ಭಾರತೀಯ ಕಿಸಾನ್ ಸಂಘ ಆಗ್ರಹ

    ವಿಜಯಪುರ: ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ನಿರಂತರ 10 ಗಂಟೆ ತ್ರಿಪೇಸ್ ವಿದ್ಯುತ ಪೂರೈಸಲು ಆಗ್ರಹಿಸಿ ಭಾರತೀಯ ಕಿಸಾನ ಸಂಘದ ಪದಾಧಿಕಾರಿಗಳು ಶುಕ್ರವಾರ ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

    ಸಂಘದ ಕರ್ನಾಟಕ ಪ್ರದೇಶದ ಅಧ್ಯಕ್ಷ ಭೀಮಸೇನ ಕೊಕರೆ ಮಾತನಾಡಿ, ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಪೂರೈಕೆ ಪ್ರಮಾಣ ಕಡಿಮೆಯಾಗಿದೆ. ಇದರಿಂದ ಬೆಳೆಗಳು ಒಣಗುತ್ತಿವೆ. ಈಗಾಗಲೇ 6 ಗಂಟೆ ವಿದ್ಯುತ್ ಪೂರೈಸಲು ಸರ್ಕಾರ ತೀರ್ಮಾನಿಸಿದೆ. ಆದರೆ, 6 ಗಂಟೆ ವಿದ್ಯುತ್ ಪೂರೈಕೆ ಸಾಕಾಗುವುದಿಲ್ಲ. ಹೀಗಾಗಿ 10 ಗಂಟೆ ಪೂರೈಸಬೇಕೆಂದು ಒತ್ತಾಯಿಸಿದರು.

    ಜಮೀನುಗಳಲ್ಲಿ ವಾಸವಾಗಿರುವ ರೈತರ ಮನೆಗಳಿಗೆ ರಾತ್ರಿ ಸಿಂಗಲ್ ಪೇಸ್ ವಿದ್ಯುತ್ ನೀಡಬೇಕು. ಜಮೀನುಗಳಲ್ಲಿ ಕ್ರಿಮಿಕೀಟಗಳು, ವಿಷಜಂತುಗಳು ಹರಿದಾಡುವ ಕಾರಣ ಸಿಂಗಲ್ ಪೇಸ್ ರಾತ್ರಿ ಪೂರ್ತಿ ನೀಡಬೇಕೆಂದು ಒತ್ತಾಯಿಸಿದರು.

    ಕನ್ನೂರ ಗ್ರಾಮದ 110 ಕೆವಿ ಸ್ಟೇಶನ್ ಶೀಘ್ರದಲ್ಲಿ ಪೂರ್ಣಗೊಳಿಸಬೇಕು. ವಿದ್ಯುತ್ ಪರಿವರ್ತಕಗಳು ಹಾಳಾಗಿದ್ದು ಕೂಡಲೇ ಬದಲಾಯಿಸಬೇಕೆಂದರು.
    ಜಿಲ್ಲಾಧ್ಯಕ್ಷ ಭೀಮನಗೌಡ ಬಗಲಿ, ರಾಜ್ಯ ಉಪಾಧ್ಯಕ್ಷ ಗುರುನಾಥ ಬಗಲಿ, ಮಹಾಂತೇಶ ಬಾಗೇವಾಡಿ, ಎಸ್.ಪಿ. ಬಿರಾದಾರ, ಆರ್.ಎನ್. ಪಾಟೀಲ, ಎಸ್.ಸಿ. ಪಟ್ಟಣಸೆಟ್ಟಿ, ಶಿವಮ್ಮ ಬಗಲಿ, ಅಣ್ಣಾಸಾಬ ಸಾವಳಗಿ, ಎಂ.ಎಸ್. ತಿಗಣಿಬಿದರಿ, ಈರಪ್ಪ ಬುಕಣಿ, ಶರಣಪ್ಪ ತಾರಾಪೂರ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts