More

    ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಷೇರು ಮಾರುಕಟ್ಟೆಯ ಚತುರ: ಅವರ ಸ್ಟಾಕ್​ ಪೋರ್ಟ್​ಫೋಲಿಯೋ ಹೇಗಿದೆ? ಹೂಡಿಕೆ ಎಷ್ಟು?

    ಮುಂಬೈ: ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಲೋಕಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದಾರೆ. ರಾಹುಲ್ ಗಾಂಧಿ ನಾಮಪತ್ರದ ಜೊತೆಗೆ ಚುನಾವಣಾ ಆಯೋಗಕ್ಕೆ ಅಫಿಡವಿಟ್ ಕೂಡ ನೀಡಿದ್ದಾರೆ. ಇದರ ಪ್ರಕಾರ, ರಾಹುಲ್ ಗಾಂಧಿ ಷೇರು ಮಾರುಕಟ್ಟೆಯಲ್ಲಿ ರೂ. 4.3 ಕೋಟಿ ಹೂಡಿಕೆ ಇದೆ. ಅಲ್ಲದೆ, ರೂ. 3.81 ಕೋಟಿಯ ಮ್ಯೂಚುವಲ್ ಫಂಡ್ ಠೇವಣಿ ಹಾಗೂ ಎರಡು ಬ್ಯಾಂಕ್ ಖಾತೆಗಳಲ್ಲಿ ರೂ. 26.25 ಲಕ್ಷ ಉಳಿತಾಯ ಮಾಡಿದ್ದಾರೆ. ರಾಹುಲ್ ಗಾಂಧಿ ಕೇರಳದ ವಯನಾಡ್ ಕ್ಷೇತ್ರದಿಂದ ಮತ್ತೊಮ್ಮೆ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. 2019ರ ಲೋಕಸಭೆ ಚುನಾವಣೆಯಲ್ಲಿ ಇದೇ ಕ್ಷೇತ್ರದಿಂದ 4 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದಿದ್ದರು.


    ರಾಹುಲ್ ಗಾಂಧಿ ಅಫಿಡವಿಟ್ ಪ್ರಕಾರ ಟಾಟಾದ ಟೈಟಾನ್, ಬಜಾಜ್ ಸೇರಿದಂತೆ ಹಲವು ದೊಡ್ಡ ಕಂಪನಿಗಳಲ್ಲಿ ಅವರು ಹೂಡಿಕೆ ಮಾಡಿದ್ದಾರೆ. ರಾಹುಲ್ ಗಾಂಧಿ ಯಾವ ಕಂಪನಿಯಲ್ಲಿ ಎಷ್ಟು ಷೇರುಗಳನ್ನು ಖರೀದಿಸಿದ್ದಾರೆ ಎಂಬುದನ್ನು ತಿಳಿಯೋಣ.

    1) ಪಿಡಿಲೈಟ್ ಇಂಡಸ್ಟ್ರೀಸ್: ರಾಹುಲ್ ಗಾಂಧಿ ಈ ಕಂಪನಿಯ 1474 ಷೇರುಗಳನ್ನು ಹೊಂದಿದ್ದಾರೆ, ಮೊತ್ತ ರೂ. 42.27 ಲಕ್ಷ.
    2) ಬಜಾಜ್ ಫೈನಾನ್ಸ್: ಈ ಕಂಪನಿಯ 551 ಷೇರುಗಳನ್ನು ಹೊಂದಿದ್ದಾರೆ. ಇದರ ಬೆಲೆ ರೂ. 35.89 ಲಕ್ಷ.
    3) ನೆಸ್ಲೆ ಇಂಡಿಯಾ: ಈ ಕಂಪನಿಯ 1370 ಷೇರುಗಳನ್ನು ಹೊಂದಿದ್ದಾರೆ. ಇದರ ಬೆಲೆ ರೂ. 35.67 ಲಕ್ಷ.
    4) ಏಷ್ಯನ್ ಪೇಂಟ್ಸ್: ರಾಹುಲ್ ಗಾಂಧಿ ಅವರು ರೂ. 35.29 ಲಕ್ಷ ಮೌಲ್ಯದ ಕಂಪನಿಯ 1231 ಷೇರುಗಳನ್ನು ಹೊಂದಿದ್ದಾರೆ.
    5) ಟೈಟಾನ್ ಕಂಪನಿ: ಈ ಟಾಟಾ ಕಂಪನಿಯಲ್ಲಿ ರಾಹುಲ್ ಗಾಂಧಿ 897 ಷೇರುಗಳನ್ನು ಹೊಂದಿದ್ದು, ಇದರ ಮೌಲ್ಯ ರೂ. 32.59 ಲಕ್ಷ.
    6) ಹಿಂದೂಸ್ತಾನ್ ಯೂನಿಲಿವರ್: ಈ ಕಂಪನಿಯಲ್ಲಿ 1161 ಷೇರುಗಳನ್ನು ಹೊಂದಿದ್ದಾರೆ. ಇವುಗಳ ಮೌಲ್ಯ ರೂ. 27.02 ಲಕ್ಷ.
    7) ಐಸಿಐಸಿಐ ಬ್ಯಾಂಕ್: ಈ ಖಾಸಗಿ ವಲಯದ ಬ್ಯಾಂಕ್‌ನಲ್ಲಿ ರಾಹುಲ್ ಗಾಂಧಿ 2299 ಷೇರುಗಳನ್ನು ಹೊಂದಿದ್ದಾರೆ. ಇದರ ಬೆಲೆ ರೂ. 24.83 ಲಕ್ಷ.
    8) ದಿವಿಸ್ ಲ್ಯಾಬೋರೇಟರಿ: ಈ ಕಂಪನಿಯಲ್ಲಿ ರಾಹುಲ್ ಗಾಂಧಿ ರೂ. 19.7 ಲಕ್ಷ ಮೌಲ್ಯದ 567 ಷೇರುಗಳನ್ನು ಹೊಂದಿದ್ದಾರೆ.
    9) ಸುಪ್ರಜಿತ್ ಇಂಜಿನಿಯರಿಂಗ್: ಈ ಕಂಪನಿಯಲ್ಲಿ ರಾಹುಲ್ ಗಾಂಧಿ ರೂ. 16.65 ಲಕ್ಷ ಮೌಲ್ಯದ 4068 ಷೇರುಗಳನ್ನು ಹೊಂದಿದ್ದಾರೆ.
    10) ಗಾರ್ವೇರ್ ಟೆಕ್ನೋ ಫೈಬರ್ಸ್: ರಾಹುಲ್ ಗಾಂಧಿ ಈ ಕಂಪನಿಯಲ್ಲಿ 508 ಷೇರುಗಳನ್ನು ಖರೀದಿಸಿದ್ದಾರೆ. ಇದರ ಬೆಲೆ ರೂ. 16.43 ಲಕ್ಷ.

    ಮ್ಯೂಚುವಲ್​ ಫಂಡ್​:

    ರಾಹುಲ್ ಗಾಂಧಿ ಕೂಡ ಕೆಲವು ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಿದ್ದಾರೆ. ಇದು ಮುಖ್ಯವಾಗಿ ಎಚ್‌ಡಿಎಫ್‌ಸಿ ಸ್ಮಾಲ್ ಕ್ಯಾಪ್ ರೆಗ್-ಜಿ, ಐಸಿಐಸಿಐ ಪ್ರುಡೆನ್ಶಿಯಲ್ ರೆಗ್ ಸೇವಿಂಗ್-ಜಿ, ಪಿಪಿಎಫ್‌ಎಎಸ್ FCF D ಗ್ರೋತ್​, HDFC MCOP DP GR, ICICI EQ&DF F ಗ್ರೋತ್ ಸೇರಿವೆ. ರಾಹುಲ್ ಗಾಂಧಿ ಅವರ ಮ್ಯೂಚುವಲ್​ ಫಂಡ್​ನಲ್ಲಿ ಒಟ್ಟು 3 ಕೋಟಿ ರೂ.ಗೂ ಹೆಚ್ಚು ಹೂಡಿಕೆಯಾಗಿದೆ.

    ಸಾವೆರೆನ್ ಗೋಲ್ಡ್ ಬಾಂಡ್‌ಗಳಲ್ಲಿ ಹೂಡಿಕೆ:

    ರಾಹುಲ್ ಗಾಂಧಿ ಅವರು ರೂ. 15.21 ಲಕ್ಷ ಮಾರುಕಟ್ಟೆ ಮೌಲ್ಯದ ಸಾವರಿನ್ ಗೋಲ್ಡ್ ಬಾಂಡ್ ಹೊಂದಿದ್ದಾರೆ. ಅಫಿಡವಿಟ್ ಪ್ರಕಾರ, ರಾಹುಲ್ ಗಾಂಧಿ ಅವರ ಒಟ್ಟು ಆಸ್ತಿ ರೂ. 9.24 ಕೋಟಿ ಚರ ಮತ್ತು ರೂ. 11.5 ಕೋಟಿ ಸ್ಥಿರಾಸ್ತಿ ಸೇರಿದಂತೆ ಒಟ್ಟು ರೂ. 20.4 ಕೋಟಿ ಇದೆ.

    ಬುಧವಾರ ಒಂದೇ ದಿನದಲ್ಲಿ 20% ಏರಿಕೆ ಕಂಡ ಷೇರುಗಳು: ಗುರುವಾರವೂ ಲಾಭ ನೀಡುವ ನಿರೀಕ್ಷೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts