More

    ಗಲ್ವಾನ್​ ಘರ್ಷಣೆಯ ಹಳೆಯ ವಿಡಿಯೋ ಅಪ್​ಲೋಡ್​ ಮಾಡಿ ಮುಜಗರಕ್ಕೆ ಒಳಗಾದ ಕಾಂಗ್ರೆಸ್​

    ನವದೆಹಲಿ: ಲಡಾಖ್​ನ ಪೂರ್ವ ಭಾಗದಲ್ಲಿ ಭಾರತ ಮತ್ತು ಚೀನಾ ಯೋಧರ ನಡುವೆ ಉಂಟಾಗಿರುವ ಘರ್ಷಣೆಯ ಬಗ್ಗೆ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುವ ಅವಸರದಲ್ಲಿ ಕಾಂಗ್ರೆಸ್​ ಮುಖಂಡರು ಎಡವಟ್ಟು ಮಾಡಿಕೊಂಡಿದ್ದಾರೆ.

    ಅಂದಾಜು ಐದು ತಿಂಗಳ ಹಿಂದೆ ಯೂಟ್ಯೂಬ್​ನಲ್ಲಿ ಅಪ್​ಲೋಡ್​ ಮಾಡಲಾಗಿತ್ತು ಎನ್ನಲಾದ, ಭಾರತ ಮತ್ತು ಚೀನಾ ಯೋಧರು ನಿರಾಯುಧರಾಗಿ ಪರಸ್ಪರ ತಿಕ್ಕಾಟಕ್ಕಿಳಿದಿರುವ ದೃಶ್ಯ ಇದಾಗಿದೆ. ಆದರೆ, ಈ ದೃಶ್ಯಗಳು ಜೂ.15ರಂದು ನಡೆದ ಘರ್ಷಣೆಯ ದೃಶ್ಯ ಎಂಬಂತೆ ಬಿಂಬಿಸಿ, ಭಾರತೀಯ ಯೋಧರು ನಿರಾಯುಧರಾಗಿ ಚೀನಾ ಯೋಧರನ್ನು ಹಿಮ್ಮೆಟ್ಟಿಸಲು ಹೋಗಿದ್ದೇಕೆ ಎಂದು ಕಾಂಗ್ರೆಸ್​ನ ವಕ್ತಾರ ರಣದೀಪ್​ ಸಿಂಗ್​ ಸುರ್ಜೇವಾಲ ಟ್ವೀಟ್​ ಮಾಡಿದ್ದರು.

    ಇದನ್ನೂ ಓದಿ: ಹಿಂದೆ ಸರಿಯುವಾಗ ಬೇಕೆಂದೇ ಟೆಂಟ್​ ಹಾಕಿ ಕಾಲುಕೆರೆದು ಚೀನಾ ಜಗಳ

    ವಾಸ್ತವ ಸಂಗತಿಗಳನ್ನು ಮುಚ್ಚಿಡುವುದು ಬೇಡ @DrSJaishankar ಎಂದು ಟ್ವೀಟ್​ ಸಂದೇಶವನ್ನು ಪ್ರಾರಂಭಿಸಿರುವ ಸುರ್ಜೇವಾಲಾ, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ವಿಡಿಯೋವನ್ನು ನೋಡಿ ಮತ್ತು ನಮ್ಮ ಯೋಧರು ಶಸ್ತ್ರಾಸ್ತ್ರಗಳನ್ನು ಏಕೆ ಕೊಂಡೊಯ್ದಿರಲಿಲ್ಲ (ಗಲ್ವಾನ್​ ದೃಶ್ಯಕ್ಕಾಗಿ 34ನೇ ಸೆಕೆಂಡ್​ ದೃಶ್ಯ ವೀಕ್ಷಿಸಿ). ಜೀವ ಹೋಗುವಂತ ಪ್ರಸಂಗದಲ್ಲಿ ಕೂಡ ಯೋಧರನ್ನು ನಿರಾಯುಧರನ್ನಾಗಿ ಅಲ್ಲಿಗೆ ಕಳುಹಿಸಲು ಗಡಿ ನಿರ್ವಹಣೆಯ ಒಪ್ಪಂದ ಬಗ್ಗೆ ಪ್ರಸ್ತಾಪಿಸುವುದನ್ನು ನಿಲ್ಲಿಸಿ ಎಂದು ಸಂದೇಶವನ್ನು ಮುಗಿಸಿದ್ದರು.
    ಆದರೆ ಈ ಟ್ವೀಟ್​ ಅನ್ನು ಗಮನಿಸಿದ ನೆಟ್ಟಿಗರು, ಇದೊಂದು ಹಳೆಯ ವಿಡಿಯೋ ತುಣುಕು. ಹಲವು ತಿಂಗಳಿಂದ ಇದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ಎಂಬುದನ್ನು ಕ್ಷಣಾರ್ಧದಲ್ಲಿ ಗ್ರಹಿಸಿದ್ದರು.

    ಮಾಹಿತಿಗಾಗಿ ಗಂಭೀರವಾಗಿ ಇಂಟರ್​ನೆಟ್​ ಅನ್ನು ತಡಕಾಡಿದಾಗ ಈ ವಿಡಿಯೋ ತುಣುಕು 2020ರ ಜನವರಿಯಿಂದ ಯೂಟ್ಯೂಬ್​ನಲ್ಲಿ ಹರಿದಾಡುತ್ತಿರುವುದು ಖಚಿತಪಟ್ಟಿದೆ. ಆದರೆ, ಈ ತಿಕ್ಕಾಟ ವಾಸ್ತವ ಗಡಿರೇಖೆಯ ಯಾವ ಕಡೆ ಸಂಭವಿಸಿತ್ತು ಎಂಬುದು ಸ್ಪಷ್ಟವಾಗಿಲ್ಲ.

    ಜೈಲಿಂದ ಬಿಡುಗಡೆಯಾದ ರೌಡಿ ಕೊರಂಗು ಕೃಷ್ಣನನ್ನು ಕರೆದೊಯ್ಯಲು ಬಂದದ್ದು 70 ಕಾರುಗಳು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts