More

    ಹಿಂದೆ ಸರಿಯುವಾಗ ಬೇಕೆಂದೇ ಟೆಂಟ್​ ಹಾಕಿ ಕಾಲುಕೆರೆದು ಚೀನಾ ಜಗಳ

    ನವದೆಹಲಿ: ಲಡಾಖ್​ನ ಪೂರ್ವ ಭಾಗದ ಗಲ್ವಾನ್​ ಕಣಿವೆ ಪ್ರದೇಶದಲ್ಲಿ ಒಪ್ಪಂದದ ಪ್ರಕಾರ ಚೀನಾ ಯೋಧರು ಹಿಂದೆ ಸರಿಯಬೇಕಿತ್ತು. ಆದರೆ, ಹಾಗೆ ಹಿಂದೆ ಸರಿಯುವಾಗ ಪೀಪಲ್ಸ್​ ಲಿಬರೇಷನ್​ ಆರ್ಮಿಯ (ಪಿಎಲ್​ಎ) ಯೋಧರು ಬೇಕೆಂದೇ ಹೊಸದಾಗಿ ಟೆಂಟ್​ ಹಾಕಲು ಮುಂದಾದರು ಎನ್ನಲಾಗಿದೆ. ಈ ಸಂದರ್ಭದಲ್ಲಿ ಆರಂಭವಾದ ಮಾತಿನ ಚಕಮಕಿ ಘರ್ಷಣೆಗೆ ಕಾರಣವಾಯಿತು ಎಂದು ಭಾರತ ಸೇನಾಪಡೆಯ ಕಮಾಂಡರ್​ ಒಬ್ಬರು ತಿಳಿಸಿದ್ದಾರೆ.

    ಭಾರತದ ಪರ 20 ಯೋಧರು ಹುತಾತ್ಮರಾದರೆ, ಚೀನಾದ ಕಮಾಂಡರ್​, ಡೆಪ್ಯುಟಿ ಕಮಾಂಡರ್​ ಸೇರಿ 43ಕ್ಕೂ ಹೆಚ್ಚು ಜನರು ಹತರಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

    ಈ ಭಾಗದಲ್ಲಿ ಈ ರೀತಿಯ ಘರ್ಷಣೆಯಾಗಿದ್ದು ಇದೇ ಮೊದಲು. ಇಂಥ ದಾಳಿಗಳನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಲು ಅಗತ್ಯವಾದ ಸಾಮರ್ಥ್ಯ ಮತ್ತು ಮನೋಬಲ ಭಾರತೀಯರ ಯೋಧರಿಗಿದೆ ಎಂಬುದು ಇದರಿಂದ ಸಾಬೀತಾಗಿದೆ ಎಂದು ಹೇಳಿದ್ದಾರೆ.

    ಇದನ್ನೂ ಓದಿ: ಲೇಹ್​ ಮತ್ತು ಶ್ರೀನಗರ ನೆಲೆಗಳಿಗೆ ಯುದ್ಧವಿಮಾನಗಳನ್ನು ರವಾನಿಸಿದ ಭಾರತ

    ಪಿಎಲ್​ಎ ಸಹಜವಾಗಿ ನಡೆದುಬಂದು ಗಲ್ವಾನ್​ನಲ್ಲಿನ ಭಾರತೀಯ ಭಾಗವನ್ನು ಅತಿಕ್ರಮಿಸುವ ದುಸ್ಸಾಹ ತೋರಿದರು. ಆದರೆ ಭಾರತೀಯ ಯೋಧರು ಇದಕ್ಕೆ ಪ್ರಬಲ ಪ್ರತಿರೋಧ ಒಡ್ಡಿದರು. ತನ್ನ ದುಸ್ಸಾಹಸಕ್ಕೆ ಅದು ತಕ್ಕುದಾದ ಬೆಲೆ ತೆರಬೇಕಾಯಿತು. ಇದುವರೆಗೆ ಲಭ್ಯವಿರುವ ಮಾಹಿತಿಯ ಪ್ರಕಾರ ಪಿಎಲ್​ಎ ಮೃತಪಟ್ಟಿರುವ ಅಥವಾ ಗಾಯಗೊಂಡಿರುವ 35 ಯೋಧರು ಮತ್ತು ಅಧಿಕಾರಿಗಳನ್ನು ಸ್ಥಳಾಂತರಿಸಿದೆ. ಪೆಟ್ರೋಲಿಂಗ್​ 14ರ ಬಳಿ ನಿಯೋಜನೆಗೊಂಡಿದ್ದ ಅದರ ಕಮಾಂಡಿಂಗ್​ ಆಫೀಸರ್​, ಡೆಪ್ಯುಟಿ ಕಮಾಂಡಿಂಗ್​ ಆಫೀಸರ್​ ಕೂಡ ಹತರಾಗಿರುವ ಖಚಿತ ಮಾಹಿತಿ ಲಭ್ಯವಾಗಿದೆ ಎಂದು ತಿಳಿಸಿದ್ದಾರೆ.

    ಚೀನಾ ಆ ಭಾಗದಲ್ಲಿರುವ ಪರಿಸ್ಥಿತಿಯನ್ನು ಏಕಪಕ್ಷೀಯವಾಗಿ ಬದಲಿಸುವ ಪೂರ್ವಯೋಜಿತ ಸಂಚು ಹೊಂದಿತ್ತು. ಘರ್ಷಣೆ ಕೂಡ ಆ ಸಂಚಿನ ಭಾಗವಾಗಿತ್ತು. ಹಾಗಾಗಿ ಈ ಘರ್ಷಣೆ ಮತ್ತು ಹಿಂಸೆಗೆ ಅದುವೇ ನೇರಹೊಣೆ ಎಂದು ಭಾರತ ಆರೋಪಿಸಿದೆ.

    ಗಲ್ವಾನ್​ ಕಣಿವೆಯಲ್ಲಿನ ಘರ್ಷಣೆಯನ್ನು ಗಮನಿಸಿದಾಗ ಏಕಪಕ್ಷೀಯವಾಗಿ ಪರಿಸ್ಥಿತಿಯನ್ನು ಬದಲಿಸಲು ಇದು ಸೌತ್​ ಚೀನಾ ಮಹಾಸಾಗರ ಅಲ್ಲ ಎಂಬುದು ಚೀನಾಕ್ಕೆ ಮನವರಿಕೆ ಆಗಿರಬೇಕು. ಜತೆಗೆ ಗಡಿ ಮತ್ತು ಸಾರ್ವಭೌಮತ್ವದ ವಿಷಯ ಬಂದಾಗ ಅವನ್ನು ರಕ್ಷಿಸಿಕೊಳ್ಳಲು ಭಾರತ ಯಾವುದೇ ಹಂತಕ್ಕೂ ಹೋಗಬಲ್ಲದು ಎಂಬುದು ಇದರಿಂದ ಸ್ಪಷ್ಟವಾಗುತ್ತದೆ ಎಂದು ಹೇಳಿದೆ.

    ಕಾಶ್ಮೀರದಲ್ಲಿ ಎರಡು ಕಾರ್ಯಾಚರಣೆ; ಒಟ್ಟು 8 ಉಗ್ರರ ಹತ್ಯೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts