More

    ಎರಡನೇ ಪಟ್ಟಿಯಲ್ಲಿ ಈ ಸಮುದಾಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿತು ಕಾಂಗ್ರೆಸ್!

    ಬೆಂಗಳೂರು: ಇದೀಗ ಕಾಂಗ್ರೆಸ್​ನ ಅಭ್ಯರ್ಥಿಗಳ ಎರಡನೇ ಪಟ್ಟಿಯೂ ಬಿಡುಗಡೆ ಆಗಿದ್ದು ಈ ಬಾರಿಯೂ ಭಾರಿ ಜಾತಿ ಲೆಕ್ಕಾಚಾರ ಮಾಡಿದೆ. ಲಿಂಗಾಯತ ಸಮುದಾಯಕ್ಕೆ ಎರಡನೇ ಪಟ್ಟಿಯಲ್ಲಿ ಅತ್ಯಧಿಕ ಸ್ಥಾನಗಳನ್ನು ನೀಡಲಾಗಿದ್ದು ಒಕ್ಕಲಿಗ ಅಭ್ಯರ್ಥಿಗಳ ಸಂಖ್ಯೆ ಎರಡನೇ ಸ್ಥಾನದಲ್ಲಿದೆ. ಈ ಸಂದರ್ಭ ಲಿಂಗಾಯತ ಸಮುದಾಯ ಕಾಂಗ್ರೆಸ್​ ಮೇಲೆ ಕೆಂಗಣ್ಣು ತೋರಿಸಿದ್ದು ನೆನಪಿಸಿಕೊಳ್ಳಬಹುದು.

    ಇದನ್ನೂ ಓದಿ: ಕಾಂಗ್ರೆಸ್ ನಾಯಕರ ನಡೆಗೆ ಲಿಂಗಾಯತ ಸಮುದಾಯ ಗರಂ!

    ಇನ್ನು, ಕುರುಬ, ಎಸ್​ಸಿ, ಮುಸ್ಲಿಂ ಸಮುದಾಯಕ್ಕೆ ಪ್ರಾಧಾನ್ಯತೆ ನೀಡಲಾಗಿದ್ದು ರಜಪೂತ, ಮರಾಠಿ, ಈಡಿಗ, ರೆಡ್ಡಿ ಮುಂತಾದ ಜಾತಿಯಿಂದ ತಲಾ ಒಬ್ಬ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗಿದೆ.

    ಇನ್ನೂ 58 ಕ್ಷೇತ್ರಗಳಲ್ಲಿ ಗೊಂದಲ ಮುಂದುವರೆದಿದೆ. ಕೋಲಾರ ಕ್ಷೇತ್ರದ ಅಭ್ಯರ್ಥಿ ಆಯ್ಕೆಯಲ್ಲಿ ಗೊಂದಲ ಇರುವುದರಿಂದ ಈ ಬಾರಿಯೂ ಬಾಕಿ ಉಳಿಸಿಕೊಳ್ಳಲಾಗಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಎರಡು ಕಡೆ ಸ್ಪರ್ಧೆಗೆ ಬಯಸಿದ್ದು, ಅದರ ಕುತೂಹಲವೂ ಹಾಗೇ ಇದೆ.

    ಹೀಗಿದೆ ಎರಡನೇ ಪಟ್ಟಿಯಲ್ಲಿ ಜಾತಿ ಲೆಕ್ಕಾಚಾರ

    ಲಿಂಗಾಯತ – 11
    ಒಕ್ಕಲಿಗ – 10
    ಕುರುಬ – 3
    ಎಸ್‌ಸಿ – 4
    ಮುಸ್ಲಿಂ – 3
    ಈಡಿಗ – 1
    ಮೊಗವೀರ – 2
    ರಜಪೂತ – 1
    ಮರಾಠಿ – 1
    ಎಸ್.ಟಿ – 2
    ರೆಡ್ಡಿ – 1
    ನಾಯ್ಡು – 1

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts