More

    ಕೊಚ್ಚಿಯಲ್ಲಿ ಕನ್ನಡ ಪತ್ರಕರ್ತರ ಸಮ್ಮಿಲನ; ಸಾಧಕ ಪತ್ರಕರ್ತರಿಗೆ ಪ್ರಶಸ್ತಿ ಪ್ರದಾನ

    ಕೇರಳ: ಕೊಚ್ಚಿಯಲ್ಲಿ ಎರಡು ದಿನಗಳ ಕಾಲ ನಡೆದ ಕನ್ನಡ ಸಂಸ್ಕೃತಿ ಉತ್ಸವ ಸಂಭ್ರಮ‌ ಸಡಗರದಿಂದ ಸಂಪನ್ನಗೊಂಡಿತು. ಕೊಚ್ಚಿನ್ ಕನ್ನಡ ಸಂಘ, ಕಾಸರಗೋಡು ಕನ್ನಡ ಪತ್ರಕರ್ತರ ಸಂಘ, ಗಡಿ ಅಭಿವೃದ್ಧಿ ಪ್ರಾಧಿಕಾರ ಮತ್ತು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯುಜೆ) ಜಂಟಿಯಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕನ್ನಡ ಸಂಸ್ಕೃತಿ ಉತ್ಸವ ಸಮಾರೋಪ ಸಮಾರಂಭದಲ್ಲಿ ಸಾಧಕ ಪತ್ರಕರ್ತರಿಗೆ ಸಭಾಪತಿ ಬಸವರಾಜ ಹೊರಟ್ಟಿ ಅವರು ಪ್ರಶಸ್ತಿ ಪ್ರದಾನ ಮಾಡಿದರು.

    ಹಲವು ಮಾಧ್ಯಮದಲ್ಲಿರುವ ಅನೇಕರನ್ನು ಈ ವೇದಿಕೆಯಲ್ಲಿ ಗೌರವಿಸುತ್ತಿರುವುದು ಅಭಿಮಾನದ ಸಂಗತಿ. ಪ್ರಶಸ್ತಿಗಳು ನಮ್ಮ ಜವಾಬ್ದಾರಿ ಹೆಚ್ಚಿಸುತ್ತವೆ. ಮುಂದೆ ಹೊಣೆಗಾರಿಕೆಯಿಂದ ಕೆಲಸ ಮಾಡಲು ನೀವು ಕಂಕಣಬದ್ಧರಾಗಬೇಕು ಎಂದು ಹೊರಟ್ಟಿ ಹೇಳಿದರು. ಸಮಾಜದಲ್ಲಿ ಪತ್ರಕರ್ತರಿಗೆ ಗುರುವಿನ ಸ್ಥಾನ ಇದೆ. ರಾಜಕಾರಣಿಗಳು ಕೆಟ್ಟರೆ ನೀವು ತಿದ್ದಬೇಕು. ಲೋಪಗಳಿಗೆ ಕನ್ನಡಿ ಹಿಡಿದು ಸರಿಪಡಿಸುವ ಕೆಲಸ ಆಗಬೇಕು. ಆಗ ಮಾತ್ರ ಸಮಾಜ ಆರೋಗ್ಯಕರವಾಗಿ ಇರಲು ಸಾಧ್ಯವಿದೆ ಎಂದರು.

    ಇದನ್ನೂ ಓದಿ: ಭೂವ್ಯಾಜ್ಯ ಸಂಬಂಧ ಗುಂಪು ಘರ್ಷಣೆ; ಐವರಿಗೆ ಗಾಯ, 5 ಬೈಕ್​ಗಳು ಸುಟ್ಟು ಕರಕಲು

    ಈ ಕಾರ್ಯಕ್ರಮಕ್ಕೆ ಕೆಯುಡಬ್ಲ್ಯುಜೆ ಸಾಥ್ ನೀಡುವ ಮೂಲಕ ತನ್ನ ಬಳಗದ ಎಲ್ಲರನ್ನೂ ಇಲ್ಲಿಗೆ ಕರೆ ತಂದಿರುವುದು ವಿಶೇಷ. ಹೊರನಾಡಿನಲ್ಲಿ ಈ ರೀತಿಯಲ್ಲಿ ಎಲ್ಲರನ್ನೂ ಒಳಗೊಳ್ಳುವ ಕಾರ್ಯಕ್ರಮ ಆಗಬೇಕು ಎಂದರು. ಗಡಿ ಆಚೆಗೂ ಇರುವ ಕನ್ನಡಿರ ಬಗ್ಗೆ ವಿಶೇಷ ಕಾರ್ಯಕ್ರಮ ರೂಪಿಸಿ ನೆರವು ನೀಡುವಂತೆ ಸರ್ಕಾರದ ಗಮನ ಸೆಳೆಯುವುದಾಗಿ ಹೊರಟ್ಟಿ ತಿಳಿಸಿದರು.

    ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ, ಕಿತ್ತೂರು ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ಕೆಯುಡಬ್ಲ್ಯುಜೆ ಅಧ್ಯಕ್ಷ ಶಿವಾನಂದ ತಗಡೂರು ಅವರು ಮಾತನಾಡಿ, ಕನ್ನಡ ಸಂಘದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

    ಇದನ್ನೂ ಓದಿ: ಬೆಂಗಳೂರಲ್ಲಿ ಅಂಬರೀಷ್ ರಸ್ತೆ ಇದೆ, ಮೈಸೂರಲ್ಲೂ ಇದೆ, ಮಂಡ್ಯದಲ್ಲೇಕೆ ಇಲ್ಲ? ನೀವೇ ಪ್ರಶ್ನಿಸಿ: ಸುಮಲತಾ

    ವೇದಿಕೆಯಲ್ಲಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ್ ಮತ್ತಿಹಳ್ಳಿ, ಕೆಯುಡಬ್ಲ್ಯುಜೆ ಪ್ರಧಾನ ಕಾರ್ಯದರ್ಶಿ ಲೋಕೇಶ, ಖಜಾಂಚಿ ವಾಸುದೇವ ಹೊಳ್ಳ, ಕೊಚ್ಚಿನ್ ಕನ್ನಡ ಸಂಘದ ಅಧ್ಯಕ್ಷ ಶ್ರೀನಿವಾಸ ರಾವ್, ಕಾಸರಗೋಡು ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಎ.ಆರ್. ಸುಬ್ಬಯ್ಯಕಟ್ಟೆ ಮತ್ತಿತರರು ಹಾಜರಿದ್ದರು.

    ಕೊಚ್ಚಿಯಲ್ಲಿ ಕನ್ನಡ ಪತ್ರಕರ್ತರ ಸಮ್ಮಿಲನ; ಸಾಧಕ ಪತ್ರಕರ್ತರಿಗೆ ಪ್ರಶಸ್ತಿ ಪ್ರದಾನ

    ಪುಸ್ತಕ ಬಿಡುಗಡೆ: ಸಾಹಿತಿ ಉದಿನೂರು ಮೊಹಮ್ಮದ್ ಕುಂಇ ಬರೆದಿರುವ ‘ಕನ್ನಡ ಸಾಹಿತ್ಯದಲ್ಲಿ ಮುಸ್ಲಿಂ ಸಂವೇದನೆ’ ಕೃತಿಯನ್ನು ಈ ಸಮಾರಂಭದಲ್ಲಿ ಬಿಡುಗಡೆ ಮಾಡಲಾಯಿತು.

    ಇದನ್ನೂ ಓದಿ: ಸ್ಮಶಾನದಲ್ಲಿ ಹುಡುಗಿಯರ ಫೋಟೋಗಳಿಗೆ ಮಾಟ-ಮಂತ್ರ; ಮಧ್ಯರಾತ್ರಿ ಬೆತ್ತಲೆಯಾಗಿ ವಾಮಾಚಾರ; ಮಹಿಳೆಯೂ ಭಾಗಿ!

    ಮೀನುಗಾರಿಕಾ ಪ್ರಶಸ್ತಿಗೆ ಚಾಲನೆ: ಹಿರಿಯ ಪತ್ರಕರ್ತ ವಿನಾಯಕ ಗಂಗೊಳ್ಳಿ ಅವರು ದೈವ ನರ್ತಕ ಕೀರ್ತಿಶೇಷ ಶ್ರೀ ದೇವಯ್ಯ ಖಾರ್ವಿ ಗಂಗೊಳ್ಳಿ ಹೆಸರಿನಲ್ಲಿ ಸ್ಥಾಪಿಸಿರುವ ಪ್ರಶಸ್ತಿಗೆ ಚಾಲನೆ ನೀಡಲಾಯಿತು.

    ದತ್ತಿನಿಧಿ ಪುರಸ್ಕೃತರು

    ಪಬ್ಲಿಕ್ ಟಿವಿಯ ಬಬ್ರುದ್ದೀನ್ ಮಾಣಿ, ಸಂಯುಕ್ತ ಕರ್ನಾಟಕದ ಕೀರ್ತಿಶೇಖರ್, ಪ್ರಜಾವಾಣಿಯ ರಾಜೇಶ್ ರೈ ಚೆಟ್ಲ, ಹಿರಿಯ ಪತ್ರಕರ್ತರಾದ ಅಜ್ಜಮಾಡ ರಮೇಶ್ ಕುಟ್ಟಪ್ಪ, ಯು.ಕೆ.ಕುಮಾರ್​​ನಾಥ್, ಶ್ರೀಜ ವಿ.ಎನ್., ರೋನ್ಸ್ ಬಂಟ್ವಾಳ, ದೇವದಾಸ ಪಾರೆಕಟ್ಟೆ, ನಟರಾಜ ಮಲ್ಪೆ, ವಿಕ್ರಂ ಕಾಂತಿಕೆರೆ, ದಯಾಶಂಕರ‌ ಚೌಟ, ಪ್ರದೀಪ ಬೇಕಲ, ಹಂಝ ಮಲಾರ್ ಅವರಿಗೆ ದತ್ತಿನಿಧಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

    ಇದನ್ನೂ ಓದಿ: ಮದುವೆ ಆಮಂತ್ರಣ ಪತ್ರಿಕೆ ನೀಡಲು ಹೋಗಿದ್ದ ಸಹೋದರಿಯರಿಬ್ಬರ ಸಾವು!

    ಸಾಂಸ್ಕೃತಿಕ ಕಾರ್ಯಕ್ರಮ: ಕೊಚ್ಚಿನ್ ಕನ್ನಡ ಸಂಘ, ಕಾಸರಗೋಡು ಕನ್ನಡ ಸಂಘ ಸೇರಿದಂತೆ ಹಲವು ತಂಡಗಳಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಸಮಾರಂಭಕ್ಕೆ ಮೆರಗು ತಂದವು. ಕೊಚ್ಚಿಯಲ್ಲಿ ಎರಡು ದಿನ ಕನ್ನಡ ಕಂಪನ್ನು ಹರಡುವಲ್ಲಿ ಕಾರ್ಯಕ್ರಮ ಯಶಸ್ವಿಯಾಯಿತು.

    ಇದು ಡೈವೋರ್ಸ್ ಫೋಟೋಶೂಟ್​: ನನಗೆ 99 ಸಮಸ್ಯೆಗಳಿವೆ, ಆದರೆ ಪತಿ ಇಲ್ಲ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts