More

    ಬಿಜೆಪಿಯ ಮೂಲ ಬೆಂಬಲಿಗರಿಗೆ ಮಣೆ

    ಯಲ್ಲಾಪುರ: ತಾಲೂಕಿನ ಬಹುತೇಕ ಗ್ರಾ.ಪಂಗಳಲ್ಲಿ ಬೇರೆ ಪಕ್ಷಗಳ ಅಭ್ಯರ್ಥಿಗಳು ಇರದೇ ಬಿಜೆಪಿಯಲ್ಲೇ 2-3 ಬಣಗಳ ನಡುವೆ ನೇರ ಹಣಾಹಣಿ ನಡೆಸಿದ್ದು, ಮೂಲ ಹಾಗೂ ವಲಸಿಗರ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಇದರಲ್ಲಿ ಮೂಲ ಬಿಜೆಪಿಯ ಬೆಂಬಲಿಗರೇ 90 ಕ್ಕಿಂತ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಮೂಲಕ ಮೇಲುಗೈ ಸಾಧಿಸಿದ್ದಾರೆ. 158 ಸ್ಥಾನಗಳ ಪೈಕಿ 130 ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತರು ಹಾಗೂ 18 ಸ್ಥಾನಗಳಲ್ಲಿ ಕಾಂಗ್ರೆಸ್ ಬೆಂಬಲಿತರು ಹಾಗೂ 10 ಸ್ಥಾನಗಳಲ್ಲಿ ಸ್ವತಂತ್ರ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.

    ಎಂಎಲ್​ಸಿ ಪತ್ನಿಗೆ ವಿಜಯ: ಹಿತ್ಲಳ್ಳಿ ಗ್ರಾ.ಪಂ. ವ್ಯಾಪ್ತಿಯ ಇಳೇಹಳ್ಳಿ ವಾರ್ಡ್​ನಿಂದ ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಅವರ ಪತ್ನಿ ಸುಶೀಲಾ ಸಿದ್ದಿ ಸ್ಪರ್ಧಿಸಿ, ಗೆಲುವಿನ ನಗೆ ಬೀರಿದ್ದಾರೆ.

    ದಾಖಲೆ ಗೆಲುವು: ಇಡಗುಂದಿ ಗ್ರಾ.ಪಂ.ನ ಗುಳ್ಳಾಪುರದ ಶ್ರೀಕಾಂತ ಶೆಟ್ಟಿ ಗ್ರಾ.ಪಂ.ಗೆ ಸತತವಾಗಿ 9 ನೇ ಬಾರಿ ಸದಸ್ಯರಾಗಿ ಆಯ್ಕೆಯಾಗುವ ಮೂಲಕ ದಾಖಲೆ ನಿರ್ವಿುಸಿದ್ದಾರೆ.

    ಎರಡು ಬಾರಿ ಮರುಎಣಿಕೆ: ಕುಂದರಗಿ ಗ್ರಾ.ಪಂ. ವ್ಯಾಪ್ತಿಯ ಭರತನಹಳ್ಳಿ ವಾರ್ಡ್​ನಿಂದ ಸ್ಪರ್ಧಿಸಿದ್ದ ನಂದಾ ವರದರಾಜ ಹಾಗೂ ಜ್ಯೋತಿ ಹುದ್ದಾರ ಅವರು ಸಮಾನ ಮತಗಳನ್ನು ಪಡೆದು, ಎರಡು ಬಾರಿ ಮರು ಎಣಿಕೆಯ ನಂತರ ಮೂರು ಮತಗಳ ಅಂತರದಿಂದ ಜ್ಯೋತಿ ಹುದ್ದಾರ ಆಯ್ಕೆಯಾದರು.

    ಊರಿಗೆ ಬಂದವ, ಗ್ರಾಪಂಗೆ: ಖಾಸಗಿ ಉದ್ಯೋಗದ ನಿಮಿತ್ತ ಬೆಂಗಳೂರಿನಲ್ಲಿ ನೆಲೆಸಿದ್ದ ಯುವಕ ಸದಾಶಿವ ಚಿಕ್ಕೊತ್ತಿ ಕಂಪ್ಲಿ ಗ್ರಾ.ಪಂ. ವ್ಯಾಪ್ತಿಯ ಚಿಕ್ಕೊತ್ತಿ ವಾರ್ಡ್​ನಿಂದ ಸ್ಪರ್ಧಿಸಿ, ಗೆದ್ದು ಗಮನ ಸೆಳೆದಿದ್ದಾರೆ.

    ಗ್ರಾಮ ಪಂಚಾಯಿತಿ- ಗೆದ್ದವರು: ವಜ್ರಳ್ಳಿ (9)- ಗಂಗಾ ಕೋಮಾರ, ಭಗೀರಥ ನಾಯ್ಕ, ತಿಮ್ಮಣ್ಣ ಗಾಂವ್ಕಾರ, ಗಜಾನನ ಭಟ್ಟ, ವೀಣಾ ಗಾಂವ್ಕಾರ, ಲಲಿತಾ ಸಿದ್ದಿ, ಜಿ. ಆರ್. ಭಾಗ್ವತ, ರತ್ನಾ ಬಾಂದೇಕರ್, ಪುಷ್ಪಾ ಆಗೇರ.

    ಆನಗೋಡ (8)- ಮೀನಾಕ್ಷಿ ಭಟ್ಟ, ರಾಮಕೃಷ್ಣ ಗಾಂವ್ಕಾರ, ಕೆ.ಟಿ. ಹೆಗಡೆ, ಭಾರತಿ ನಾಯ್ಕ, ಕುಸುಮಾ ಸಿದ್ದಿ, ಪರಮೇಶ್ವರ ಗಾಂವ್ಕಾರ, ಸುನಂದಾ ಬನಸೋಡೆ, ಕೃಷ್ಣ ಗೌಡ.

    ನಂದೊಳ್ಳಿ (7)- ಕಮಲಾ ನಾರಾಯಣ ಸಿದ್ದಿ, ರಾಮಕೃಷ್ಣ ಭಾಗ್ವತ, ಭವಾನಿ ಸಿದ್ದಿ, ನರಸಿಂಹ ಕೋಣೆಮನೆ, ನಾಗರತ್ನಾ ನಾಯ್ಕ, ಮೀನಾಕ್ಷಿ ಭಟ್ಟ, ಟಿ.ಆರ್. ಹೆಗಡೆ.

    ಇಡಗುಂದಿ (13)- ವಿಶ್ವೇಶ್ವರ ಏಕಾನ, ವಿಶ್ವೇಶ್ವರ ಹೆಗಡೆ, ನಾಗವೇಣಿ ಗೌಡ, ಮುತ್ತವ್ವ ಶಿರಹಟ್ಟಿ, ಶ್ರೀಕಾಂತ ಶೆಟ್ಟಿ, ನಾಗವೇಣಿ ಸಿದ್ದಿ, ಸತೀಶ ನಾಯ್ಕ, ರೇಣುಕಾ ಪೈಂಗಣಕರ್, ಗೋಪಾಲ ಸಿದ್ದಿ, ಆಶಾ ನಾಯರ್, ಕಮಲಾಕರ ಆಚಾರಿ, ಕಲ್ಪನಾ ಗೌಡ, ಸವಿತಾ ನಾಯ್ಕ.

    ಚಂದಗುಳಿ (11)- ಅಶೋಕ ಮರಾಠಿ, ಆರ್.ಎಸ್. ಭಟ್ಟ, ನೇತ್ರಾವತಿ ಹೆಗಡೆ, ರೇಣುಕಾ ಸಿದ್ದಿ, ಶಾರದಾ ಭಾಗ್ವತ, ಶಾಂತಿ ಪಟಗಾರ, ಲಕ್ಷ್ಮೀ ವಡ್ಡರ್, ಸುಭಾಸ ಗಡಸ್ಕರ, ವಿಶ್ವನಾಥ ಅಡಿಕೆಸರ, ಸುಬ್ರಹ್ಮಣ್ಯ ಉದ್ದಾಬೈಲ, ಶಿಲ್ಪಾ ನಾಯ್ಕ.

    ಕಂಪ್ಲಿ-ಮಂಚಿಕೇರಿ (8)- ಸದಾಶಿವ ಚಿಕ್ಕೊತ್ತಿ, ರೇಣುಕಾ ಬೋವಿವಡ್ಡರ್, ಗಣೇಶ ರೊಖಡೆ, ವಿನಾಯಕ ನಾಯ್ಕ, ಶಬನಂ ಮೌಲಾಲಿ ಸಾಬ್, ರಘುಪತಿ ಹೆಗಡೆ, ರಂಜನಾ ಆಚಾರಿ, ಮಂಗಲಾ ನಾಯ್ಕ.

    ಹಾಸಣಗಿ (10)- ಅಶ್ವಿನಿ ಕಳಸಾಪುರ, ಸಂಧ್ಯಾ ಮರಾಠಿ, ಎಂ. ಕೆ. ಭಟ್ಟ ಯಡಳ್ಳಿ, ಚಂದ್ರಶೇಖರ ಮೊಗೇರ, ವಿನೋದಾ ಪೂಜಾರಿ, ಪುರಂದರ ನಾಯ್ಕ, ಅನುಪಮಾ ಪೂಜಾರಿ, ಹೇಮಂತ ಭಟ್ಟ, ಲಾರೆನ್ಸ್ ಸಿದ್ದಿ, ಗೀತಾ ಸಿದ್ದಿ.

    ಹಿತ್ಲಳ್ಳಿ (6)- ಸತ್ಯನಾರಾಯಣ ಹೆಗಡೆ, ಸುಶೀಲಾ ಶಾಂತಾರಾಮ ಸಿದ್ದಿ, ಪ್ರಸನ್ನ ಭಟ್ಟ, ನಿರ್ಮಲಾ ನಾಯ್ಕ, ಗೋಪಾಲಕೃಷ್ಣ ಶಾಸ್ತ್ರಿ, ಸಾವಿತ್ರಿ ನಾಗನೂರ.

    ಕುಂದರಗಿ (13)- ರಾಮಕೃಷ್ಣ ಹೆಗಡೆ, ಗಣಪತಿ ಪಾಟೀಲ, ದೀಪಾ ಸಿದ್ದಿ, ಯಮುನಾ ಸಿದ್ದಿ, ಪ್ರಕಾಶ ನಾಯ್ಕ, ಸೌಮ್ಯಾ ನಾಯ್ಕ, ಮಾಸ್ತಯ ಮಡಿವಾಳ, ದಾಕ್ಲು ಪಾಟೀಲ, ನಿರ್ಮಲಾ ನಾಯ್ಕ, ಜ್ಯೋತಿ ಹುದ್ದಾರ, ಗಣೇಶ ಹೆಗಡೆ, ತುಂಗಾ ಚಲವಾದಿ, ಇಂದಿರಾ ನಾಯ್ಕ.

    ಕಿರವತ್ತಿ (24)- ರೆಹಮತ್ ಅಬ್ಬಿಗೇರಿ, ರಾಜು ಉಪ್ಪಿನ, ತೆರೆಜಾ ಫರ್ನಾಂಡೀಸ್, ರೇಣುಕಾ ಹೋಳಿ, ಜಾನು ಪಾಂಡ್ರಮೀಸೆ, ಹನುಮವ್ವ ಭಜಂತ್ರಿ, ಸಂಗೀತಾ ಕೊಕರೆ, ಗಾಂಧಿ ಸೋಮಾಪುರಕರ್, ಲಕ್ಕುಬಾಯಿ ಪಟಕಾರೆ, ರಸೂಲ್​ಸಾಬ್ ಮುಜಾವರ, ನಯನಾ ಶೆಂಡಗೆ, ಜಗ್ಗು ಹುಂಬೆ, ಬಾಬು ಚನ್ನಕರ, ಸುನೀಲ ಕಾಂಬಳೆ, ಬಾಪು ತಾಟೆ, ಮೇಘಾ ಕುಲಂಕರ್, ಸಂಗೀತಾ ಪಾಟೀಲ, ಅಕ್ಕಮ್ಮ ಹೋಳಿ, ಹೀರು ಶಿಂಧೆ, ಶಾಹಿರಾಬಾನ ನದಾಫ, ದಿಂಡವಾಡ ಲಲಿತಾ, ಜೈನಬಿ ಉಸ್ಮಾನ ಪಟೇಲ, ಫಕೀರಸಾಬ್ ಬಾಬಾ, ಮುನೀರ ಅಹ್ಮದ್ ಪಟೇಲ.

    ಮದನೂರು (13)- ರೇಷ್ಮಾ ದೇಸಾಯಿ, ಲಕ್ಕು ಗಾವಡೆ, ಪ್ರಭಾ ನಾಯ್ಕ, ಪ್ರಕಾಶ ಶಾಪುರಕರ್, ರಾಜೇಶ ತಿನೆಕರ್, ಮಂಜುಳಾ ಕಳಸೂರಕರ್, ಇಂದಿರಾ ನಾಯ್ಕ, ದೀಪಾ ಶಿಂಧೆ, ವಿಠ್ಠು ಶೆಳಕೆ, ಹನುಮಂತ ವಾರೆಗೌಡ, ಸುನಂದಾ ವಡ್ಡರ್, ಲಕ್ಕು ಥೋರತ್, ಜನಾಬಾಯಿ ಬರಾಗಡೆ.

    ದೇಹಳ್ಳಿ (6)- ವಿಶ್ವನಾಥ ಹಳೆಮನೆ, ಅನಸೂಯಾ ಕಾಳೆ, ಮಂಜುನಾಥ ಗುಮ್ಮಾನಿ, ಶ್ರೀಪತಿ ಮುದ್ದೆಪಾಲ, ಪಾರ್ವತಿ ಕುಣಬಿ, ವೀಣಾ ಮಾಳೆ.

    ಉಮ್ಮಚಗಿ (10)- ಗ.ರಾ. ಭಟ್ಟ, ಗಂಗಾ ಹೆಗಡೆ, ಶಿವರಾಯ ಪೂಜಾರಿ, ಕುಪ್ಪಯ್ಯ ಪೂಜಾರಿ, ರೂಪಾ ಪೂಜಾರಿ, ಲಲಿತಾ ವಾಲೀಕಾರ, ತಿಮ್ಮವ್ವ ಬಸಾಪುರ, ಖೈತಾನ್ ಡಿಸೋಜಾ, ಅಶೋಕ ಪೂಜಾರಿ, ಸರಸ್ವತಿ ಪಟಗಾರ.

    ಕಣ್ಣಿಗೇರಿ (11)- ದಿವ್ಯಾ ಮರಾಠಿ, ಜ್ಯೋತಿ ಸಿದ್ದಿ, ತಿಮ್ಮಾ ಮರಾಠಿ, ವಾಸುದೇವ ಮಾಪ್ಸೆಕರ್, ಈರವ್ವ ಬೋವಿವಡ್ಡರ್, ನಾಗೇಶ ಗಾವಡೆ, ಲಕ್ಷ್ಮೀ ಪಾಟೀಲ, ವಿಶ್ವೇಶ್ವರ ಹೆಗಡೆ, ನಾಗವೇಣಿ ಪಟಗಾರ, ಸುನಂದಾ ಮರಾಠಿ, ಮಹೇಶ ಕಾಸರಕರ್.

    ಮಾವಿನಮನೆ (9)- ಸುಬ್ಬಣ್ಣ ಕುಂಟೆಕಳಿ, ದೀಪಕ ಭಟ್ಟ, ಪಾರ್ವತಿ ಭಟ್ಟ, ಪುಷ್ಪಾ ಭಟ್ಟ, ಮಹಾಬಲೇಶ್ವರ ಹಲಗುಮನೆ, ರಾಘವೇಂದ್ರ ಕುಣಬಿ, ಮಂಗಲಾ ಕುಣಬಿ, ಸವಿತಾ ಪೂಜಾರಿ, ರಂಜನಾ ಹುಲಸ್ವಾರ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts