More

    ರಾಷ್ಟ್ರೀಯ ಭಾವೈಕ್ಯತಾ ಶಿಬಿರದ ಸಮಾರೋಪ

    ಹುಬ್ಬಳ್ಳಿ : ಇಲ್ಲಿನ ನವನಗರದ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ ರಾಷ್ಟ್ರೀಯ ಭಾವೈಕ್ಯತಾ ಶಿಬಿರದ ಸಮಾರೋಪ ಸಮಾರಂಭವನ್ನು ಬುಧವಾರ ಆಯೋಜಿಸಲಾಗಿತ್ತು.

    ಅತಿಥಿಯಾಗಿದ್ದ ಬೆಂಗಳೂರು ಗಾಂಧಿ ಭವನದ ಪಿಜಿಆರ್​ಎಂ ನಿರ್ದೇಶಕ ಪ್ರೊ. ಜಿ.ಬಿ. ಶಿವರಾಜು ಮಾತನಾಡಿ, ಎನ್​ಎಸ್​ಎಸ್ ಮತ್ತು ಎನ್​ಐಸಿ ಶಿಬಿರಗಳ ಮಹತ್ವ ತಿಳಿಸಿದರು.

    ಎನ್​ಎಸ್​ಎಸ್ ಪ್ರಾದೇಶಿಕ ನಿರ್ದೇಶಕ ಡಿ. ಕಾರ್ತಿಗೇಯನ್ ಮಾತನಾಡಿ, ರಾಷ್ಟ್ರದಲ್ಲಿ ಒಟ್ಟು 15 ಎನ್​ಎಸ್​ಎಸ್ ವಲಯಗಳಿವೆ. ಅದರಲ್ಲಿ ಕರ್ನಾಟಕ ಅತ್ಯಂತ ಪರಿಣಾಮಕಾರಿಯಾದ ಎನ್​ಎಸ್​ಎಸ್ ಶಿಬಿರಗಳನ್ನು ಮತ್ತು ಸ್ವಯಂ ಸೇವಾ ಕಾರ್ಯಗಳನ್ನು ಸಂಘಟಿಸುತ್ತ ಬರುತ್ತಿದೆ. ಎಂದು ಹೇಳಿದರು.

    ಅಧ್ಯಕ್ಷತೆ ವಹಿಸಿದ್ದ ವಿವಿ ಕುಲಪತಿ ಪ್ರೊ. ಸಿ. ಬಸವರಾಜು, ಭಾವೈಕ್ಯತೆ, ಸಹೋದರತ್ವ, ಬ್ರಾೃತ್ವ ಹಾಗೂ ಏಕತೇಯ ಮಹತ್ವವನ್ನು ಸಾರುವುದು ಎನ್​ಎಸ್​ಎಸ್ ಮತ್ತು ಎನ್​ಐಸಿ ಶಿಬಿರಗಳ ಪ್ರಮುಖ ಉದ್ದೇಶ ಎಂದು ತಿಳಿಸಿದರು.

    7 ದಿನಗಳವರೆಗೆ ನಡೆದ ರಾಷ್ಟ್ರೀಯ ಶಿಬಿರದಲ್ಲಿ ಅನೇಕ ಸ್ಪರ್ಧೆಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಉತ್ತಮ ಪ್ರದರ್ಶನ ನೀಡಿದ ಶಿಬಿರಾರ್ಥಿಗಳಿಗೆ ಮತ್ತು ಶಿಬಿರದ ತಂಡಗಳಿಗೆ ಪ್ರಶಸ್ತಿ ವಿತರಿಸಲಾಯಿತು.

    ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ವಸಂತ ಲದ್ವಾ, ಡಾ. ಎಚ್.ವಿ. ಬೆಳಗಲಿ, ಕುಲಸಚಿವೆ ಅನುರಾಧಾ ವಸ್ತ್ರದ, ಪ್ರೊ. ಜಿ.ಬಿ. ಪಾಟೀಲ, ಪ್ರೊ. ರತ್ನಾ ಭರಮಗೌಡರ, ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜನಾಧಿಕಾರಿ ಐ. ಬಿ. ಬಿರಾದರ ಹಾಗೂ ಇತರರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts