More

  ಸಂತ ಅಂತೋಣಿ ದೇಗುಲದಲ್ಲಿ ವಾರ್ಷಿಕ ಹಬ್ಬ

  ಹನೂರು: ತಾಲೂಕಿನ ಮಾರ್ಟಳ್ಳಿ ಸಮೀಪದ ಪಾಲಿಮೇಡು ಗ್ರಾಮದ ಸಂತ ಅಂತೋಣಿ ದೇಗುಲದಲ್ಲಿ ಗುರುವಾರ ವಾರ್ಷಿಕ ಹಬ್ಬವನ್ನು ಆಚರಿಸಲಾಯಿತು.

  ಬೆಳಗ್ಗೆ 8 ಗಂಟೆಯಲ್ಲಿ ವಿವಿಧ ದೇಗುಲದ ಧರ್ಮಗುರುಗಳ ಸಮ್ಮುಖದಲ್ಲಿ ಹಾಗೂ ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಕ್ರೈಸ್ತರ ಸಮ್ಮುಖದಲ್ಲಿ ಫಾದರ್ ಕ್ರಿಸ್ಟೋಫರ್ ಅವರು ಧ್ವಜರೋಹಣ ನೆರವೇರಿಸಿದರು. 11 ಗಂಟೆಗೆ ದಿವ್ಯ ಬಲಿಪೂಜೆ ಸಲ್ಲಿಸಲಾಯಿತು. ಬಳಿಕ ಗ್ರಾಮದ ಬೀದಿಗಳಲ್ಲಿ ಸಂತ ಅಂತೋಣಿ ಅವರ ಭಾವಚಿತ್ರ ಒಳಗೊಂಡ ಭವ್ಯ ಮೆರವಣಿಗೆ ವಿಜೃಂಭಣೆಯಿಂದ ನೆರವೇರಿತು. ಈ ವೇಳೆ ಕ್ರೈಸ್ತರು ದಾರಿಯುದ್ದಕ್ಕೂ ಪ್ರಾರ್ಥನೆ ಹಾಗೂ ಸ್ತುತಿ ಗೀತೆಗಳನ್ನು ಹಾಡಿದರು. ಈ ಮೂಲಕ ವಾರ್ಷಿಕ ಹಬ್ಬವನ್ನು ಆಚರಿಸಲಾಯಿತು. ಫಾದರ್‌ಗಳಾದ ಸಂತಿಯಾಗು, ಸಿಲುವೈನಾಥನ್, ಪ್ರಕಾಶ್ ಹಾಗೂ ಇನ್ನಿತರರು ಇದ್ದರು.

  See also  ಶುಚಿತ್ವಕ್ಕೆ ಆದ್ಯತೆ ನೀಡಿ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts