More

    ಈ ಹಾಸ್ಯನಟ ಲಾಕ್​​ಡೌನ್ ಸಮಯದಲ್ಲಿ ತರಕಾರಿ ಮಾರುತ್ತಿದ್ದ, ಈಗ ಮದ್ಯ ಮಾರುತ್ತಿದ್ದಾನೆ!

    ಆಂಧ್ರಪ್ರದೇಶ: ಹಾಸ್ಯನಟರು ಭಾಷೆ ಭೇದವಿಲ್ಲದೇ ಸಿನಿ ಪ್ರಿಯರಿಗೆ ಬಹಳಷ್ಟು ನೋಟೇಡ್ ಆಗಿರುತ್ತಾರೆ. ಹಾಗೆಯೇ, ತೆಲುಗಿನ ಖ್ಯಾತ ಹಾಸ್ಯ ನಟ ರಘು ಕರುಮಾಂಚಿ 67ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಹಾಸ್ಯ ನಟನಾಗಿ, ವಿಲನ್ ಆಗಿ ಅಭಿಮಾನಿಗಳನ್ನು ರಂಜಿಸಿ ತುಂಬಾ ಫೇಮಸ್ ಆಗಿದ್ದಾರೆ. ಆದರೆ, ಕರೊನಾ ಸಮಯದಲ್ಲಿ ಆದಾಯವಿಲ್ಲದ ಬಹುತೇಕ ಸಿನಿಮಾ ಕಲಾವಿದರು ಸಣ್ಣ ಪುಟ್ಟ ಬಿಜಿನೆಸ್ ಮಾಡಿಕೊಂಡು ಬದುಕುತ್ತಿದ್ದರು. ನಟ ರಘು ಕೂಡಾ ಕರೊನಾ ಟೈಮಲ್ಲಿ ತಮ್ಮ ಊರಿನಲ್ಲಿ ಮನೆ ಮನೆಗೆ ಸುತ್ತಿ ತರಕಾರಿ ಮಾರಾಟ, ತರಕಾರಿ ಬೆಳೆಯುವುದನ್ನು ಮಾಡುತ್ತಿದ್ದರು. ಈಗ ಅದನ್ನು ನಿಲ್ಲಿಸಿ ಬೇರೆ ಬಿಜಿನೆಸ್ ಆರಂಭಿಸಿದ್ದಾರೆ. ರಘು ಅವರ ಈ ಹೊಸ ಬಿಜಿನೆಸ್ ಸದ್ಯ ಎಲ್ಲರ ಮನೆ ಮಾತಾಗಿದೆ.

    ಇದನ್ನು ಓದಿ: ಜೀವಾವಧಿ ಶಿಕ್ಷೆಗೊಳಗಾಗಿದ್ದವ ನ್ಯಾಯಾಲಯಕ್ಕೆ ಹಾಜರುಪಡಿಸುವಾಗ ಪರಾರಿ; 3 ವರ್ಷಗಳ ಕಾಲ ಸಿಗದೇ ಇರಲು ಹೀಗೆ ಮಾಡಿದ್ದ…

    ಲಾಕ್​​ಡೌನ್​ನಲ್ಲಿ ಕೇವಲ ತರಕಾರಿ ಮತ್ತು ದಿನಸಿ ಮಾರಾಟಗಾರರಿಗೆ ಬಿಜಿನೆಸ್​ ಮಾಡಲು ಅವಕಾಶವಿತ್ತು. ಹೀಗಾಗಿ, ಕೆಲವೊಂದು ಸಿನಿ ಕಲಾವಿದರು ಆದಾಯವಿಲ್ಲದೆ ತರಕಾರಿ ಮಾರುತ್ತಿದ್ದ ಫೋಟೋಗಳು ಬಹಳಷ್ಟು ವೈರಲ್ ಆಗಿದ್ದವು. ಅದರಲ್ಲಿ ನಟ ರಘು ಕೂಡ ಒಬ್ಬರು. ಈಗ ಲಾಕ್​​ಡೌನ್ ಇಲ್ಲದ ಕಾರಣ ಎಲ್ಲರಿಗೂ ಆದಾಯದ ಕೊರತೆಯ ಸಮಸ್ಯೆ ಕಡಿಮೆ ಆಗಿದೆ ಅನಿಸುತ್ತೆ. ಇದರಿಂದ ನಟ ರಘು ಮದ್ಯ ಮಾರಾಟಕ್ಕೆ ಇಳಿದಿದ್ದಾರೆ. ರಘು ಮದ್ಯದ ಪ್ಯಾಕೆಟ್ ಗ್ರಾಹಕರಿಗೆ ಕೊಡುತ್ತಿರುವ ಫೋಟೋಗಳು ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದ್ದು, ವೈರಲ್ ಆಗುತ್ತಿವೆ.

    ಇದನ್ನೂ ಓದಿ: ಡಾ.ರಾಜ್​ ಸಿನಿಮಾ ಹೆಸರಲ್ಲೊಂದು ಕನಸು, ಪಾರ್ವತಮ್ಮನ ಜನ್ಮದಿನದಂದು ನನಸು: ಡಿ. 6ರಂದು ಅಪ್ಪು ರೋಮಾಂಚಕ ಅನುಭವದ ಝಲಕ್​

    ತರಕಾರಿ ಬೆಳೆದು ಅದರ ಮಾರಾಟದಿಂದ ಗಳಿಸಿರುವ ಆದಾಯವನ್ನು ಬಳಸಿ ರಘು ಲಿಕ್ಕರ್ ಅಂಗಡಿ ತೆರೆದಿದ್ದಾರೆ. ಆಂಧ್ರ ಪ್ರದೇಶದ ಮದ್ಯದ ಅಂಗಡಿ ಪರವಾನಿಗೆ ಹರಾಜಿನಲ್ಲಿ ಭಾಗವಹಿಸಿದ್ದ ರಘು ಮತ್ತು ಅವರ ಗೆಳೆಯರಿಗೆ ಎರಡು ಟೆಂಡರ್​​ಗಳು ಲಭಿಸಿವೆ. ಪರವಾನಿಗೆ ಸಿಕ್ಕ ಕೂಡಲೇ ರಘು ಆಂಧ್ರ ಪ್ರದೇಶದ ಮ್ರರೆಗೂಡ ಹಳ್ಳಿಯ ಬೈಪಾಸ್ ರಸ್ತೆಯಲ್ಲಿ ಎರಡು ಮದ್ಯದ ಅಂಗಡಿಗಳನ್ನು ತೆರೆದಿದ್ದಾರೆ. ರಘು ಅವರ ಈ ಮದ್ಯ ಮಾರಾಟಕ್ಕೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದರೆ ಉಳಿದವರು ಟೀಕೆಗೆಳ ಸುರಿಮಳೆ ಸುರಿಸಿದ್ದಾರೆ. ತೆಲುಗಿನ ಸೂಪರ್ ಸ್ಟಾರ್ ಮಹೇಶ್ ಬಾಬು, ಅಲ್ಲು ಅರ್ಜುನ್, ಜೂ.ಎನ್​ಟಿಆರ್ ಮುಂತಾದವರ ಜೊತೆ ರಘು ನಟಿಸಿದ್ದಾರೆ.

    ಬೆಂಗಳೂರಿನಲ್ಲಿ ನಡೆದ ಅಂತಾರಾಷ್ಟ್ರೀಯ ವೈದ್ಯರ ಸಮ್ಮೇಳನದಲ್ಲೇ ಹರಡಿತು ಒಮಿಕ್ರಾನ್!: ಎಲ್ಲವೂ ಗುಟ್ಟುಗುಟ್ಟು.. ಮಾಡಲಾಯಿತೇ ನಿರ್ಲಕ್ಷ್ಯ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts