More

    ಆ ವುಡ್, ಈ ವುಡ್​​ನಿಂದ ಹೊರಬಂದು ಭಾರತೀಯ ಸಿನಿಮಾ ಎಂದು ಹೇಳಿ: ಅನುಪಮ್ ಖೇರ್ ಮನವಿ

    ಬೆಂಗಳೂರು: ಭಾರತೀಯ ಚಿತ್ರರಂಗದ ದಿಗ್ಗಜ ನಟರುಗಳಲ್ಲಿ ಅನುಪಮ್ ಖೇರ್ ಸಹ ಒಬ್ಬರು. ತಮ್ಮ 35 ಪ್ಲಸ್ ವರ್ಷಗಳ ವೃತ್ತಿಜೀವನದಲ್ಲಿ ನೂರಾರು ಚಿತ್ರಗಳಲ್ಲಿ ತರಹೇವಾರಿ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಅವರು, ಇದೇ ಮೊದಲ ಬಾರಿಗೆ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಶಿವರಾಜಕುಮಾರ್ ಅಭಿನಯದ ‘ಘೋಸ್ಟ್’ ಚಿತ್ರದಲ್ಲೊಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮಂಗಳವಾರ ಚಿತ್ರೀಕರಣದಲ್ಲಿ ಭಾಗವಹಿಸಿದ ನಂತರ ಮಾಧ್ಯಮದವರೊಂದಿಗೆ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ.

    ‘ಇದು ನನ್ನ 535ನೇ ಚಿತ್ರ. ಈ ಚಿತ್ರದಲ್ಲಿ ನಟಿಸುತ್ತಿರುವುದಕ್ಕೆ ಬಹಳ ಖುಷಿ ಇದೆ. ಈ ಸಿನಿಮಾ ಮಾತ್ರವಲ್ಲ, ಒಟ್ಟಾರೆ ಸಿನಿಮಾದಲ್ಲಿ ನಟಿಸುವುದೇ ಒಂದು ಬಹಳ ಸಂತೋಷ. ನಾನು ಮೂಲತಃ ಕ್ಯಾಮೆರಾ ಪ್ರೇಮಿ. ಜತೆಗೆ, ಇದು ಒಂದು ಎಮೋಷನಲ್ ಆದಂತಹ ಜಗತ್ತು. ಯಾವುದೇ ಭಾಷೆ ಇರಲಿ, ಅಳು, ನಗು, ಸಿಟ್ಟು ಎಲ್ಲವೂ ಒಂದೇ ತರಹ ಆಗಿರುತ್ತದೆ. ಹಾಗಾಗಿ, ಯಾವುದೇ ಭಾಷೆಯ ಸಿನಿಮಾದಲ್ಲಿ ನಟಿಸುವುದೇ ಸಂತೋಷ. ನಾನು ಇದುವರೆಗೂ ಗುಜರಾತಿ ಭಾಷೆಯೊಂದನ್ನು ಬಿಟ್ಟು ಬೇರೆ ಎಲ್ಲಾ ಭಾಷೆಗಳ ಚಿತ್ರಗಳಲ್ಲೂ ನಟಿಸಿದ್ದೇನೆ. ಬೇರೆ ಬೇರೆ ಭಾಷೆಗಳ ಚಿತ್ರರಂಗಗಳಲ್ಲಿ ನಟಿಸುವುದರಿಂದ ಹೊಸ ಜನರನ್ನು ಭೇಟಿ ಮಾಡಬಹುದು. ಹೊಸಹೊಸ ಆಹಾರ ಪದ್ಧತಿಗಳನ್ನು ತಿಳಿದುಕೊಳ್ಳಬಹುದು. ಹಾಗಾಗಿ, ನನಗೆ ಬೇರೆ ಭಾಷೆಯ ಸಿನಿಮಾಗಳಲ್ಲಿ ನಟಿಸುವುದಕ್ಕೆ ಬಹಳ ಖುಷಿ’ ಎಂದರು ಅನುಪಮ್ ಖೇರ್.

    ಇದನ್ನೂ ಓದಿ: ಚುನಾವಣೆಗೆ ನಿಲ್ಲುವವರಿಗೂ ಇಲ್ಲಿ 5 ಲಕ್ಷ ರೂ. ಕೊಡ್ತಾರೆ!; ಷರತ್ತುಗಳೇನು?

    ಆ ಭಾಷೆ, ಈ ಭಾಷೆ ಎನ್ನುವುದಕ್ಕಿಂತ ಭಾರತೀಯ ಚಿತ್ರರಂಗದಲ್ಲಿ ತೊಡಗಿಸಿಕೊಂಡಿರುವುದಕ್ಕೆ, ಭಾರತೀಯ ಸಿನಿಮಾಗಳಲ್ಲಿ ನಟಿಸುತ್ತಿರುವುದಕ್ಕೆ ಬಹಳ ಹೆಮ್ಮೆ ಪಡಬೇಕು ಎನ್ನುವ ಅವರು, ‘ಈ ಬಾಲಿವುಡ್, ಕಾಲಿವುಡ್, ಮಾಲಿವುಡ್ ಎನ್ನುವುದೆಲ್ಲ ಸುಳ್ಳು. ಜಗತ್ತಿನಲ್ಲಿ ಎಲ್ಲೂ ಈ ತರಹದ ವ್ಯವಸ್ಥೆ ಇಲ್ಲ. ನಾವು ಯಾವತ್ತೂ ಚೈನೀಸ್ ಚಿತ್ರರಂಗವನ್ನು ಚೈನಿಸ್ ವುಡ್ ಎಂದು ಕರೆಯುವುದಿಲ್ಲ. ಜರ್ಮನ್ ವುಡ್ ಎನ್ನುವುದಿಲ್ಲ. ಆದರೆ, ನಮ್ಮಲ್ಲಿ ಮಾತ್ರ ಪ್ರತಿ ಭಾಷೆಯ ಚಿತ್ರರಂಗವನ್ನು ಒಂದು ವುಡ್​ನಿಂದ ಗುರುತಿಸುತ್ತೇವೆ. ನಾವು ಹಾಗೆ ಪ್ರತ್ಯೇಕ ಮಾಡುವ ಬದಲು ಭಾರತೀಯ ಸಿನಿಮಾ ಎಂದು ಹೆಮ್ಮೆಪಡಬೇಕು ಎಂದು ಅವರು ಹೇಳಿದರು.

    ಕೋವಿಡ್ ನಂತರದ ಕಾಲಘಟ್ಟದಲ್ಲಿ ಪ್ರಾದೇಶಿಕ ಭಾಷೆ ಸಿನಿಮಾಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ ನಿರ್ಮಾಣವಾಗುತ್ತಿದೆ. ಹಾಗಾಗಿ, ನಾವು ಈ ವುಡ್ ಎನ್ನುವ ಕೃತಕ ಟ್ಯಾಗ್​ನಿಂದ ಹೊರಬಂದು, ಭಾರತೀಯ ಸಿನಿಮಾದ ಒಂದು ಭಾಗ ಎಂದು ಹೇಳಿಕೊಳ್ಳೋಣ ಎಂದು ಮುಂಬೈನಲ್ಲೂ ಹೇಳುತ್ತಲೇ ಇರುತ್ತೀನಿ. ಇದು ಬರೀ ಕನ್ನಡ ಚಿತ್ರರಂಗಕ್ಕಷ್ಟೆ ಅಲ್ಲ, ಇಡೀ ಭಾರತೀಯ ಚಿತ್ರರಂಗಕ್ಕೆ ಒಂದು ಅದ್ಭುತವಾದ ಕಾಲ. ನಾನು ಮುಂಬೈನಲ್ಲಿ ಒಂದು ಆ್ಯಕ್ಟಿಂಗ್ ಸ್ಕೂಲ್ ನಡೆಸುತ್ತಿದ್ದೇನೆ. ಇಲ್ಲಿಂದ ಸುಮಾರು ಜನ ಅಲ್ಲಿಗೆ ಬಂದು ನಟನೆ ಕಲಿಯುತ್ತಿದ್ದಾರೆ. ಅವರೆಲ್ಲರೂ ವಿಭಿನ್ನವಾದ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಅದು ಹೀಗೇ ಮುಂದುವರಿಯಲಿ. ಇನ್ನಷ್ಟು ಒಳ್ಳೆಯ ಚಿತ್ರಗಳ ಬರಲಿ’ ಎಂದು ಹಾರೈಸಿದರು.

    ಇದನ್ನೂ ಓದಿ: ಒಬ್ಬರು ಅಥವಾ ಇಬ್ಬರು ಮಕ್ಕಳಿರುವ ದಂಪತಿಗೆ ಭರ್ಜರಿ ಆಫರ್​: ಮೂರನೇ ಮಗುವಿಗೆ ಜನ್ಮನೀಡಿದರೆ 50 ಸಾವಿರ ರೂಪಾಯಿ!

    ಅನುಪಮ್ ಖೇರ್ ಅವರಿಗೆ ಸುಮಾರು 10 ವರ್ಷಗಳ ಹಿಂದೆಯೇ ಕನ್ನಡದಲ್ಲಿ ನಟಿಸುವ ಆಫರ್ ಬಂದಿತ್ತಂತೆ. ‘ಸುಮಾರು 10 ವರ್ಷಗಳ ಹಿಂದೆ ಉಪೇಂದ್ರ ಅಭಿನಯದಲ್ಲಿ ಒಂದು ಸಿನಿಮಾದಲ್ಲಿ ನಟಿಸೋಕೆ ಆಫರ್ ಬಂದಿತ್ತು. ಆದರೆ, ಆನಂತರ ಏನೂ ಆಗಲಿಲ್ಲ. ಆ ನಂತರ ನಾನು ಬೇರೆಬೇರೆ ಭಾಷೆಯ ಚಿತ್ರಗಳಲ್ಲಿ ನಟಿಸಿದೆ. ಒಂದು ಚೈನಿಸ್ ಚಿತ್ರದಲ್ಲೂ ನಟಿಸಿದ್ದೇನೆ. ಒಬ್ಬ ನಟನಾಗಿ ನಾನು ಕೆಲಸ ಹುಡುಕುತ್ತಲೇ ಇರುತ್ತೇನೆ. ನಾನು ಯಾವತ್ತೂ ಚ್ಯೂಸಿ ಆಗಿಲ್ಲ. ನನ್ನ ಪ್ರಕಾರ, ಜೀವನ ಅನ್ನೋದು ಒಂದು ಪ್ರಯಾಣ ಅಷ್ಟೇ, ಅದೇ ಅಂತಿಮ ಗುರಿಯಲ್ಲ. ಈ ಸಿನಿಮಾದಲ್ಲಿ ನಟಿಸೋಕೆ ಶ್ರೀನಿ ಬೆನ್ನು ಬಿದ್ದರು. ನಾನು ಸಹ ಬೆಂಗಳೂರಿಗೆ ಬರದೆ ಬಹಳ ಕಾಲ ಆಗಿತ್ತು. ಇಲ್ಲಿಯ ಜನರನ್ನು ಭೇಟಿ ಮಾಡದೆ ಸಾಕಷ್ಟು ಸಮಯವಾಗಿತ್ತು. ಹಾಗಾಗಿ, ಸಿಕ್ಕ ಅವಕಾಶವನ್ನು ಬಳಸಿಕೊಂಡು ಇಲ್ಲಿಗೆ ಬಂದೆ. ಇಲ್ಲಿ ನಾನು ಒಬ್ಬ ನಟ ಅಷ್ಟೇ. ನಾನೊಬ್ಬ ಹಿರಿಯ ನಟ, ದಿಗ್ಗಜ ಎಂದೆಲ್ಲ ಕರೆಸಿಕೊಳ್ಳುವುದಕ್ಕೆ ನನಗೆ ಇಷ್ಟವಿಲ್ಲ. ನನಗೆ ಹೊಸಬರೇ ಪ್ರತಿಸ್ಪರ್ಧಿಗಳು’ ಎನ್ನುತ್ತಾರೆ ಖೇರ್.

    ಪ್ಯಾನ್​-ಆಧಾರ್ ಲಿಂಕ್ ಗಡುವು ವಿಸ್ತರಣೆ: ನೀವೀಗ ಮಾಡಬೇಕಾದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts