More

    ಓವರ್​ ಹೆಡ್​ ಟ್ಯಾಂಕ್​​ ಮೇಲೆ ಕಾಲೇಜು ಯುವಕ-ಯುವತಿಯರ ಮೋಜು ಮಸ್ತಿ!

    ಆನೇಕಲ್: ಇದನ್ನು ಶುದ್ಧ ತಲೆಹರಟೆ ಎಂದರೂ ತಪ್ಪಾಗದೇ ಇರಬಹುದು. ಏಕೆಂದರೆ ಇಲ್ಲೊಂದಷ್ಟು ಕಾಲೇಜು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಓವರ್​ ಹೆಡ್​ ಟ್ಯಾಂಕ್​ ಮೇಲೆ ಮೋಜು-ಮಸ್ತಿ ಮಾಡುತ್ತಿದ್ದಾರೆ. ಇದು ಪ್ರತಿದಿನ ನಡೆಯುತ್ತಿದ್ದರೂ ಕಾಲೇಜು ಆಡಳಿತ ಮಂಡಳಿಯಾಗಲಿ, ಪೊಲೀಸರಾಗಲಿ ಈ ಬಗ್ಗೆ ಯಾವುದೇ ಕ್ರಮಕೈಗೊಂಡಂತಿಲ್ಲ.

    ಬೆಂಗಳೂರಿನ ಆನೇಕಲ್​ನಲ್ಲಿರುವ ಪ್ರತಿಷ್ಠಿತ ಅಲಯನ್ಸ್ ಕಾಲೇಜು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಇಂಥದ್ದೊಂದು ಹುಡುಗಾಟಿಕೆಯಲ್ಲಿ ಕಳೆದ ಕೆಲವು ದಿನಗಳಿಂದ ತೊಡಗಿಸಿಕೊಂಡಿದ್ದಾರೆ. ಪ್ರತಿದಿನ ಇಲ್ಲಿನ ಓವರ್ ಹೆಡ್​​ ಟ್ಯಾಂಕ್ ಮೇಲೆ ಹತ್ತಿ ಪ್ರಾಣದ ಜೊತೆ ಚೆಲ್ಲಾಟ ಆಡುತ್ತಿದ್ದಾರೆ.

    ಗಾಂಜಾ ಹಾಗೂ ಮದ್ಯ ಸೇವಿಸುತ್ತ ಕಾಲ ಕಳೆಯುವ ವಿದ್ಯಾರ್ಥಿಗಳು, ಅಮಲಿನಲ್ಲಿ ವಾಹನ ಚಲಾಯಿಸಿ ಅಪಘಾತಗಳು ಹೆಚ್ಚುತ್ತಿವೆ. ಈ ಮಧ್ಯೆ ಓವರ್ ಹೆಡ್ ಟ್ಯಾಂಕ್ ಮೇಲೆ ಮದ್ಯಪಾನ ಮಾಡಿ ಅದರ ಮತ್ತಿನಲ್ಲಿ ಅಲ್ಲೇ ಪುಂಡಾಟಿಕೆ ತೋರುತ್ತಿದ್ದಾರೆ. ಈ ಬಗ್ಗೆ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸುತ್ತಿದ್ದು, ಕಾಲೇಜು ಆಡಳಿತ ಮಂಡಳಿ ಹಾಗೂ ಪೊಲೀಸರು ಇತ್ತ ಗಮನ ಹರಿಸಿ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸುತ್ತಿದ್ದಾರೆ.

    ಪ್ರವಾದಿ ಮುಹಮ್ಮದ್ ಬಗ್ಗೆ ವಿವಾದಾತ್ಮಕ ಹೇಳಿಕೆ; ವಕ್ತಾರರಿಬ್ಬರನ್ನು ಅಮಾನತುಗೊಳಿಸಿದ ಬಿಜೆಪಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts