More

    ಸುಶಾಂತ್​ ಸಿಂಗ್​ ಕೇಸ್​ ಸಿಬಿಐಗೆ: ಬಿಹಾರ ಸಿಎಂ ನಿತೀಶ್​ ಕುಮಾರ್ ಕಡೆಯಿಂದ ಶಿಫಾರಸು

    ಸುಶಾಂತ್​ ಸಿಂಗ್​ ಸಾವಿನ ವಿಚಾರಣೆ ಕುರಿತು ಮುಂಬೈ ಪೊಲೀಸ್​ ವರ್ಸಸ್​ ಬಿಹಾರ ಪೊಲೀಸ್​ ಎಂಬ ಬಣಗಳು ಶುರುವಾಗಿವೆ. ಎರಡು ರಾಜ್ಯಗಳ ಪೊಲೀಸರ ನಡುವೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಸುಕಿನ ಗುದ್ದಾಟ ಏರ್ಪಟ್ಟಿದೆ. ಮುಂಬೈನಲ್ಲಿ ಬೀಡು ಬಿಟ್ಟಿರುವ ಬಿಹಾರ ಪೊಲೀಸರ ತನಿಖೆಗೆ ಮುಂಬೈ ಪೊಲೀಸ್​ ಕೈ ಜೋಡಿಸುತ್ತಿಲ್ಲ. ಈ ನಡುವೆಯೇ ಇದೀಗ ಸುಶಾಂತ್ ಸಾವಿನ ಪ್ರಕರಣದಲ್ಲಿ ಸಿಬಿಐ ತನಿಖೆಗೆ ಬಿಹಾರ ಸಿಎಂ ನಿತೀಶ್ ಕುಮಾರ್, ಕೇಂದ್ರಕ್ಕೆ ಶಿಫಾರಸು ಮಾಡಿದ್ದಾರೆ.

    ಇದನ್ನೂ ಓದಿ: ಸಿಎಂಗೆ ಕ್ವಾರಂಟೈನ್​ … ಕನ್ನಡ ಚಿತ್ರರಂಗದ ಸಭೆ ಮುಂದಕ್ಕೆ

    ಈಗಾಗಲೇ ಸುಶಾಂತ್​ ಆತ್ಮಹತ್ಯೆ ಪ್ರಕರಣವನ್ನು ಸಿಬಿಐಗೆ ನೀಡಬೇಕು ಎಂದು ತಂದೆ ಕೆಕೆ ಸಿಂಗ್​ ಪಾಟ್ನಾದ ರಾಜೀವ್​ ನಗರದ ಪೊಲೀಸ್​ ಠಾಣೆಯಲ್ಲಿ ರಿಯಾ ವಿರುದ್ಧದ ದೂರಿನಲ್ಲಿ ನಮೂದಿಸಿದ್ದರು. ಇದಾದ ಬಳಿಕ ಬಿಹಾರ ಪೊಲೀಸ್​ ತಂಡ ತನಿಖೆ ಚುರುಕುಗೊಳಿಸಿತ್ತು. ರಿಯಾ ಮತ್ತು ಸಾವಿನ ವಿಚಾರಣೆಗೆ ಮುಂಬೈಗೆ ಬಂದಿತ್ತು. ಆದರೆ, ಬಿಹಾರ ಪೊಲೀಸ್​ಗೆ ಮುಂಬೈ ಪೊಲೀಸರಿಂದ ಸಹಕಾರ ಸಿಕ್ಕಿರಲಿಲ್ಲ. ಇದೆಲ್ಲವನ್ನು ಗಮನಿಸಿ ಬಿಹಾರ ಮುಖ್ಯಮಂತ್ರಿ ನಿತೀಶ್​ ಕುಮಾರ್ ಪ್ರಕರಣದ ತನಿಖೆಯನ್ನು ಸಿಬಿಐಗೆ ನೀಡಲು ಶಿಫಾರಸು ಮಾಡಿದ್ದಾರೆ.

    ಇದನ್ನೂ ಓದಿ: ಮಗುವಿನ ಬಗ್ಗೆ ನತಾಶಾಗೆ ಹಾರ್ದಿಕ್ ಪಾಂಡ್ಯ ಹೇಳಿದ್ದೇನು ಗೊತ್ತೇ?

    ಈ ಬಗ್ಗೆ ಕೆಕೆ ಸಿಂಗ್​ ಪರ ವಕೀಲ ವಿಕಾಸ್​ ಸಿಂಗ್​ ಸಹ ಪ್ರತಿಕ್ರಿಯಿಸಿದ್ದಾರೆ. ‘ಮುಂಬೈ ಪೊಲೀಸರು ಒಂದಷ್ಟು ಮಹತ್ವದ ದಾಖಲೆಗಳನ್ನು ನಾಶಪಡಿಸುತ್ತಿದ್ದಾರೆ. ಹಾಗಾಗಿ ಇದನ್ನು ಸಿಬಿಐಗೆ ನೀಡಬೇಕೆಂದು ನಿರ್ಧರಿಸಲಾಗಿದೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರೊಂದಿಗೆ ಚರ್ಚೆ ಮಾಡಲಾಗಿತ್ತು. ಅದರ ಅನ್ವಯ ಪ್ರಕರಣವನ್ನು ಸಿಬಿಐಗೆ ನೀಡುವ ಬಗ್ಗೆ ನಿತೀಶ್ ಕುಮಾರ್ ಅನುಮೋದನೆ ನೀಡಿದ್ದಾರೆ. (ಏಜೆನ್ಸೀಸ್​)

    ಅಮೂಲ್​ ಕಾರ್ಟೂನ್​ನಲ್ಲಿ ಬಿಗ್​ಬಿ; ಟ್ರೋಲ್​ ಮಾಡಿದವರಿಗೆ ಬಚ್ಚನ್​ ತಿರುಗೇಟು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts