More

    ದುರ್ಗಾ ಪೂಜೆಗೆ ಸರ್ಕಾರದಿಂದ 60 ಸಾವಿರ ರೂ. ಧನಸಹಾಯ: ಸಿಎಂ ಮಮತಾ ಬ್ಯಾನರ್ಜಿ

    ಪಶ್ಚಿಮಬಂಗಾಳ: ದುರ್ಗಾ ಪೂಜೆ ಮಾಡುವ ಸಮಿತಿಯವರಿಗೆ ಸರ್ಕಾರದ ಕಡೆಯಿಂದ 60 ಸಾವಿರ ರೂ. ಧನಸಹಾಯ ನೀಡುವುದಾಗಿ ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭರವಸೆ ನೀಡಿದ್ದಾರೆ. ಈ ಭಾರಿ ಧನಸಹಾಯವನ್ನು ಅವರು ಸೋಮವಾರ ಘೋಷಣೆ ಮಾಡಿದ್ದಾರೆ.

    ಮಾತ್ರವಲ್ಲ, ದುರ್ಗಾ ಪೂಜೆ ಸಲುವಾಗಿ ಸೆ. 30ರಿಂದ ಅ. 10ರ ವರೆಗೆ ಅವರು ಸರ್ಕಾರಿ ರಜೆಯನ್ನು ಕೂಡ ಘೋಷಣೆ ಮಾಡಿದ್ದಾರೆ. ಜತೆಗೆ ದುರ್ಗಾ ಪೂಜೆಗೆ ಬಳಕೆ ಆಗುವ ವಿದ್ಯುತ್​ ಬಿಲ್​ನಲ್ಲೂ ಶೇ. 60 ರಿಯಾಯಿತಿ ಕೂಡ ಕೊಡುವುದಾಗಿ ಹೇಳಿದ್ದಾರೆ. ಈ ಹಿಂದೆ ಶೇ. 50 ರಿಯಾಯಿತಿ ನೀಡಲಾಗುತ್ತಿದ್ದು, ಅದನ್ನು ಈ ಸಲ ಶೇ. 60ಕ್ಕೆ ಹೆಚ್ಚಿಸುವುದಾಗಿ ಹೇಳಿದ್ದಾರೆ.

    ಪಶ್ಚಿಮ ಬಂಗಾಳದಲ್ಲಿ ದುರ್ಗಾಪೂಜೆ ವಿಜೃಂಭಣೆಯಿಂದ ನಡೆಯುತ್ತಿದ್ದು, ತೃಣಮೂಲ ಕಾಂಗ್ರೆಸ್ ಸರ್ಕಾರ 2018ರಿಂದ ದುರ್ಗಾ ಪೂಜಾ ಸಮಿತಿಗಳಿಗೆ ಧನಸಹಾಯ ನೀಡುತ್ತ ಬಂದಿದೆ. ಇದುವರೆಗೆ ಈ ಧನಸಹಾಯ ಪ್ರತಿ ಸಮಿತಿಗೆ 50 ಸಾವಿರ ರೂ. ಇದ್ದಿದ್ದು, ಅದನ್ನು 60 ಸಾವಿರ ರೂಪಾಯಿಗೆ ಹೆಚ್ಚಿಸಿದ್ದಾಗಿ ಮಮತಾ ಬ್ಯಾನರ್ಜಿ ಘೋಷಣೆ ಮಾಡಿದ್ದಾರೆ.

    ವೋಟರ್​ ಐಡಿಗೆ ಆಧಾರ್ ಲಿಂಕ್ ಮಾಡದಿದ್ದರೆ ಹೆಸರು ರದ್ದಾಗುತ್ತಾ?: ಇಲ್ಲಿದೆ ಚುನಾವಣಾ ಆಯೋಗದ ಸ್ಪಷ್ಟನೆ

    Fact Check | ಸರ್ಕಾರ ವಾಟ್ಸ್​ಆ್ಯಪ್​ ಚಾಟ್​ ಮೇಲೆ ನಿಗಾ ಇಟ್ಟಿದೆಯೇ?: ಹೊಸ ಮಾರ್ಗಸೂಚಿ ಹೊರಡಿಸಿದ್ದು ನಿಜವೇ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts