More

    ಸಚಿವಾಲಯದ ಆವರಣದಲ್ಲಿ ದೇವಸ್ಥಾನ, ಮಸೀದಿ, ಚರ್ಚ್ ಉದ್ಘಾಟನೆ; ಸಹೋದರತ್ವವನ್ನು ಕಾಪಾಡುವ ಪ್ರಯತ್ನಗಳು ಮುಂದುವರಿಯಲಿವೆ: ತೆಲಂಗಾಣ ಸಿಎಂ

    ತೆಲಂಗಾಣ: ಹೊಸ ಸಚಿವಾಲಯದ ಆವರಣದಲ್ಲಿ ನಿರ್ಮಿಸಲಾದ ದೇವಾಲಯ, ಮಸೀದಿ ಮತ್ತು ಚರ್ಚ್ ಅನ್ನು ಶುಕ್ರವಾರ (ಆಗಸ್ಟ್​ 25) ತೆಲಂಗಾಣದ ಸಿಎಂ ಕೆ. ಚಂದ್ರಶೇಖರ್ ರಾವ್, ರಾಜ್ಯಪಾಲ ತಮಿಳಿಸೈ ಸೌಂದರರಾಜನ್ ಅವರೊಂದಿಗೆ ಆಗಮಿಸಿ, ಉದ್ಘಾಟಿಸಿದರು.

    ಇದನ್ನೂ ಓದಿ: ಧಾರ್ಮಿಕ ಕಾರ್ಯ ಎಲ್ಲರನ್ನೂ ಒಗ್ಗೂಡಿಸುವ ಮಹಾನ್ ಅಸ್ತ್ರ

    ನೂತನ ಸಚಿವಾಲಯದ ಸುತ್ತಮುತ್ತ ನಿರ್ಮಾಣ ಮಾಡಲಾಗಿರುವ ದೇವಸ್ಥಾನ, ಮಸೀದಿ ಮತ್ತು ಚರ್ಚ್ ಅನ್ನು ಸಿಎಂ ಕೆಸಿಆರ್​, ಪ್ರಾರ್ಥನೆ ಸಲ್ಲಿಸುವ ಮೂರು ಸ್ಥಳಗಳಿಗೆ ಪ್ರತ್ಯೇಕವಾಗಿ ಭೇಟಿ ನೀಡಿ, ವಿಶೇಷ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳುವ ಮುಖೇನ ಉದ್ಘಾಟನೆ ಮಾಡಿದರು. ಈ ವೇಳೆ ಹಲವು ಸಚಿವರು ಹಾಗೂ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

    ಎಐಎಂಐಎಂ ಅಧ್ಯಕ್ಷ, ಹೈದರಾಬಾದ್ ಲೋಕಸಭಾ ಸದಸ್ಯ ಅಸಾದುದ್ದೀನ್ ಓವೈಸಿ ಮತ್ತು ಅವರ ಕಿರಿಯ ಸಹೋದರ ಅಕ್ಬರುದ್ದೀನ್ ಓವೈಸಿ ಮಸೀದಿಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದರು.

    ಇದನ್ನೂ ಓದಿ: ಚಂದ್ರಗುತ್ತಿ ಶ್ರೀ ರೇಣುಕಾಂಬ ದೇಗುಲದಲ್ಲಿ ಮುತ್ತೈದೆಯರಿಗೆ ಉಡಿ ತುಂಬಿ ವರ ಮಹಾಲಕ್ಷ್ಮೀ ಹಬ್ಬ ಆಚರಣೆ

    ಈ ಸಂದರ್ಭದಲ್ಲಿ ಮಾತನಾಡಿದ ಸಿಎಂ, “ಸಹೋದರತ್ವವನ್ನು ಕಾಪಾಡುವ ಸರ್ಕಾರದ ಪ್ರಯತ್ನಗಳು ಮುಂದುವರಿಯಲಿವೆ. ತೆಲಂಗಾಣ ಸೆಕ್ರೆಟರಿಯೇಟ್  ಆವರಣದಲ್ಲಿ ದೇವಾಲಯ, ಚರ್ಚ್ ಮತ್ತು ಮಸೀದಿಯನ್ನು ನಿರ್ಮಿಸಲಾಗಿದೆ. ಇದು ಇಡೀ ದೇಶಕ್ಕೆ ಸಾಮರಸ್ಯ ಮತ್ತು ಸಹೋದರತ್ವಕ್ಕೆ ಉತ್ತಮ ಉದಾಹರಣೆಯಾಗಿದೆ” ಎಂದು ಹೇಳಿದರು,(ಏಜೆನ್ಸೀಸ್).

    ಎರಡು ವಾರಗಳಲ್ಲಿ ‘ಜೈಲರ್​’ ಬಾಕ್ಸ್​ ಆಫೀಸ್​​ ಗಳಿಕೆಯೆಷ್ಟು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts